ರಾಜ್ಯಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಬೆಂಬಲ ಪಡೆಯುವ ಚರ್ಚೆ ನಡೆದಿರುವುದು ಸತ್ಯ- ಹೊರಟ್ಟಿ

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಬೇಕೆ ಅಥವಾ ಬಿಜೆಪಿ ಬೆಂಬಲ ಪಡೆಯಬೇಕು ಎಂದು ಚರ್ಚೆ ನಡೆಯುತ್ತಿರುತ್ತದೆ ನಿಜ 'ನಾಳೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಬೇಕೆ ಅಥವಾ ಬಿಜೆಪಿ ಬೆಂಬಲ ಪಡೆಯಬೇಕು ಎಂದು ಚರ್ಚೆ ನಡೆಯುತ್ತಿರುತ್ತದೆ ನಿಜ 'ನಾಳೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯಸಭಾ ಚುನಾ ವಣೆ ಒಂದು ಸ್ಥಾನಕ್ಕೆ ಸ್ಪರ್ಧಿಸಲು ನನಗೆ ಮತಗಳ ಕೊರತೆ ಇದೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಯಾವುದಾದರೂ ಒಂದು ಪಕ್ಷದ ಬೆಂಬಲ ಬೇಕಿದ್ರೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಸ್ಪರ್ಧೆಗೆ ಎಲ್ಲರ ಒಲವಿದೆ, ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ಗೌಡ ಸ್ಪರ್ಧೆಗೆ ವಿರೋಧಿಸಲ್ಲ ಆದರೆ ದೇವೇಗೌಡ ರು ವಯಸ್ಸಿನ ಕಾರಣ ಮುಂದಿಟ್ಟು ನಿರಾಕರಿಸುತ್ತಿದ್ದಾರೆ.

ಹೀಗಾಗಿ ಸದ್ಯ ಯಾರ ಸ್ಪರ್ಧೆ ಎನ್ನುವ ಕುರಿತು ನಿರ್ಧಾರವಾಗಿಲ್ಲ ಆದರೆಕೆಲವು ಬಿಜೆಪಿ ಬೆಂಬಲ ಕಾಂಗ್ರೆಸ್ ಬೆಂಬಲ ಎಂದು ಹೇಳುತ್ತಿದ್ದಾರೆ ಈ ವಿಚಾರದಲ್ಲಿ ದೇವೇಗೌಡರು ಹಾಗು ಕುಮಾರಸ್ವಾಮಿ ಅವರಿಗೆ ಯಾವುದೇ ಗೊಂದಲ ಇಲ್ಲ ಕಾಂಗ್ರೆಸ್
ಬೆಂಬಲಕ್ಕೆ ಒಲವು ತೋರಿದ್ದಾರೆ ಎಂದರು.

ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಇದೆ ಸಭೆಯಲ್ಲಿ ಅಭ್ಯರ್ಥಿ ಹಾಗೂ ಯಾವ ಪಕ್ಷದ ಬೆಂಬಲ ಪಡೆಯ ಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಸಭೆಯಲ್ಲಿ ದೇವೇಗೌಡರ ನಿರ್ಧಾರಕ್ಕೆ ಬಿಡಲು ನಿರ್ಧಾರ ಆಗಿದೆ ಎಂದು ನಾಳಿನ ಸಭೆಯಲ್ಲಿ ಯಾವ ರೀತಿ ತೀರ್ಮಾನ ಆಗಲಿದೆ ಎನ್ನುವುದನ್ನು ಇಂದು ಬಹಿರಂಗ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com