ಕಾಂಗ್ರೆಸ್ ಬೆಂಬಲ ಕೊಟ್ರೂ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡ ಹಿಂದೇಟು!

ಶುಕ್ರವಾರ ನಡೆದ ಜೆಡಿಎಲ್ ಪಿ ಸಭೆಯಲ್ಲಿ ತಮ್ಮ 34 ಶಾಸಕರು ಬೆಂಬಲ ನೀಡಲು ನೀಡಿದ್ದಾರೆ. ಹೀಗಾಗಿ ನಿನ್ನೆ ಪಕ್ಷದ ಅಭ್ಯರ್ಥಿಯ ಹೆಸರು ಘೋಷೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು, ನಾನು ಸ್ಪರ್ಧಿಸುತ್ತೇನೆ ಎಂದು ದೇವೇಗೌಡರ ಬಾಯಲ್ಲಿ ಮಾತು ಬಾರದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ದೇವೇಗೌಡ
ದೇವೇಗೌಡ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ನಿರ್ಧಾರ ಇನ್ನೂ ಸಸ್ಪೆನ್ಸ್ ಆಗಿಯೇ ಇದೆ. 

ಶುಕ್ರವಾರ ನಡೆದ ಜೆಡಿಎಲ್ ಪಿ ಸಭೆಯಲ್ಲಿ ತಮ್ಮ 34 ಶಾಸಕರು ಬೆಂಬಲ ನೀಡಲು ನೀಡಿದ್ದಾರೆ. ಹೀಗಾಗಿ ನಿನ್ನೆ ಪಕ್ಷದ ಅಭ್ಯರ್ಥಿಯ ಹೆಸರು ಘೋಷೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು, ನಾನು ಸ್ಪರ್ಧಿಸುತ್ತೇನೆ ಎಂದು ದೇವೇಗೌಡರ ಬಾಯಲ್ಲಿ ಮಾತು ಬಾರದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ತಮ್ಮ ಬಳಿ ಇರುವ ಶಾಸಕರ ಸಂಖ್ಯೆಯಿಂದ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ತಿಳಿದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕಾಗಿಯೇ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ನಡೆಸಿದ ವಿಡಿಯೋ ಕಾನ್ಫ್ ರೆನ್ಸ್ ನಲ್ಲಿ ದೇವೇಗೌಡ ಭಾಗವಹಿಸಿದ್ದರು. ಅದೇ ರೀತಿ ಬಿಜೆಪಿಯವರ ಜತೆಯೂ ಗೌಡರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಕಳೆದ ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರ ಅಡ್ಡ ಮತದಾನ ಪರಿಣಾಮ ಸಿದ್ದರಾಮಯ್ಯ ಪರ ಅಭ್ಯರ್ಥಿ ಕೆಸಿ ರಾಮಮೂರ್ತಿ ಅವರು ಗೆಲ್ಲಲು ಸಾಧ್ಯವಾಯಿತು.ಅದಾದ ನಂತರ ಅಡ್ಡ ಮತದಾನ ಮಾಡಿದ ಜೆಡಿಎಸ್ ಶಾಸಕರ ವಿರುದ್ಧ ದೇವೇಗೌಡರುವಿರುದ್ಧ ಶಿಸ್ತು ಕ್ರಮ ಜರುಗಿಸಿದರು.

ಅದಾದ ನಂತರ ಜಮೀರ್ ಅಹ್ಮದ್, ಚಲುವರಾಯಸ್ವಾಮಿ, ಬಾಲಕೃಷ್ಣರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ. ಇದೇ ರೀತಿ ಪರಿಸ್ಥಿತಿ ಮತ್ತೆ ಎದುರಾಗಬಹುದೆಂದು ಎಣಿಸಿರುವ ದೇವೇಗೌಡರು ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. 

ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತವಾಗಿರುವ ಬಿಜೆಪಿ ಇನ್ನೂ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಿಲ್ಲ.ತನ್ನ ಅಭ್ಯರ್ಥಿ ನಂತರ ಉಳಿದ ಮತಗಳ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ ಎಚ್ಚರಿಕೆಯಿಂದಿರುವ ದೇವೇಗೌಡರು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಏಕೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಉಂಟಾದ ಸೋಲಿನ ಕಹಿಯನ್ನು ಗೌಡರು ಇನ್ನೂ ಮರೆತಿಲ್ಲ.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ನೇಮಕ ವಿಚಾರಯಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನನ್ನ ಶಿಫಾರಸ್ಸು ಖರ್ಗೆ ಅಂತ ಈಗಾಗಲೇ ಹೇಳಿದ್ದೀನಿ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ.  ನಾನು ಆಸಕ್ತಿ ಇದ್ದರೆ ಖರ್ಗೆ ಹೆಸರು ಶಿಫಾರಸ್ಸು ಮಾಡ್ತಿವಿ ಎಂದಿದ್ದೆ. ಅದಕ್ಕೆ ಖರ್ಗೆ ಅವರು ನನಗೆ ಆಸಕ್ತಿ ಇದೆ ಎಂದಿದ್ದಾರೆ. ಏನು ಹೇಳಬೇಕೋ‌ ಎಲ್ಲವನ್ನೂ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com