ಪಕ್ಷದ ಕಾರ್ಯಕರ್ತರೇ ಕಾಂಗ್ರೆಸ್'ನ ಬೆನ್ನೆಲುಬು: ಸಂದರ್ಶನದಲ್ಲಿ ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರನ್ನು ಬಲಪಡಿಸುವತ್ತ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರನ್ನು ಬಲಪಡಿಸುವತ್ತ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಮರು ನಿರ್ಮಾಣ ಮಾಡುವುದು ಹಾಗೂ ಕೊರೋನಾ ಸಂದರ್ಭದಲ್ಲಿ ಎದುರಾಗಿರುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 

2018 ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ಅದೃಷ್ಟ ಕ್ಷೀಣಿಸಿದೆ. ಸಂಸತ್ ಚುನಾವಣೆಯಲ್ಲೂ ಪಕ್ಷದ ಫಲಿತಾಂಶ ಕೆಳಮಟ್ಟದಲ್ಲಿಯೇ ಇತ್ತು. ಈ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಲು ಯೋಜನೆ ರೂಪಿಸಿದ್ದೀರಿ? 
ಇತ್ತೀಚಿನ ಚುನಾವಣೆಯಲ್ಲಿ ನಾವು ಸೀಟುಗಳು ಹಾಗೂ ಮತಗಳನ್ನು ಕಳೆದುಕೊಂಡಿದ್ದೇವೆಂಬುದನ್ನು ನಾನು ಒಪ್ಪಿಕೊಳ್ಳುತ್ತೇವೆ. ಇತ್ತೀಚಿನ ಚುನಾವಣೆಯಲ್ಲಿ ಸುನಾಮಿಯನ್ನೇ ಎದುರಿಸಿದಂತಾಗಿದೆ. ಆದರೆ, ನಮಗೆ ನಮ್ಮ ಪಕ್ಷಕ್ಕೆ ಹೆಚ್ಚಿನ ಬೆಂಬಲವಿದೆ. ಪಕ್ಷವು ದೊಡ್ಡ ಪರಂಪರೆಯನ್ನೇ ಹೊಂದಿದೆ ಎಂಬುದನ್ನು ನಾವು ಮರೆಯಬಾರದು. ದೊಡ್ಡ ಸಂಖ್ಯೆಯ ಜನರು ನಮ್ಮಿಂದ ದೂರ ಸರಿದಿದ್ದಾರೆ. ಅವರೆಲ್ಲರನ್ನೂ ಮತ್ತೆ ಕರೆತರುವ ಪ್ರಯತ್ನಗಳಾಗುತ್ತಿವೆ. ಪಕ್ಷದ ಒಗ್ಗಟ್ಟು ಉತ್ತಮ ಫಲಿತಾಂಶವನ್ನು ತರಲಿದೆ ಎಂಬ ಭರವಸೆ ನನ್ನಲ್ಲಿದೆ. ಪಕ್ಷದ ಬೆನ್ನೆಲುಬಾಗಿರುವ ಪಕ್ಷದ ಕಾರ್ಯಕರ್ತರನ್ನು ಬಲಪಡಿಸುವತ್ತ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. 

ಕಾಂಗ್ರೆಸ್ ಪಕ್ಷವು ಒಂದೊಮ್ಮೆ ಅತ್ಯುತ್ತಮ ಹಾಗೂ ಜನರನ್ನು ಹೆಚ್ಚಾಗಿಯೇ ಆಕರ್ಷಿಸಿತ್ತು. ಆದರೀಗ ಅಂತಹ ಪರಿಸ್ಥಿತಿಯಿಲ್ಲ. ಮತ್ತೊಮ್ಮೆ ಜನರನ್ನು ಆಕರ್ಷಿಸಲು ಯಾವ ರೀತಿಯ ಕೆಲಸ ಮಾಡುತ್ತಿದ್ದೀರಿ? 
ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದಿದ್ದರೂ ನನ್ನ ಮೂಲ ಕೃಷಿಯೇ ಆಗಿದೆ. ಈಗಲೂ ಅತ್ಯುತ್ತಮ ಹಾಗೂ ಆಕರ್ಷಣೆಗಳು ನಮ್ಮ ಬಳಿಯೇ ಇವೆ. ಉತ್ತಮ ಜನರನ್ನು ನಾವು ಈಗಲು ಆಕರ್ಷಿಸುತ್ತಲೇ ಇದ್ದೇ. ಆದರೆ, ಹಿಂದುಳಿದವರನ್ನು ನಾವು ಬಿಡುವುದಿಲ್ಲ. ಅಭಿವೃದ್ಧಿ ಹೊಂದದ ಪ್ರದೇಶಗಳನ್ನು ಅಭಿವೃದ್ಧಿ ಮಾಡುವತ್ತ ನಮ್ಮ ಗಮನವಿದೆ. ಆಕರ್ಷಿಸಲು ಆವರಿಗೂ ನಾವು ಅವಕಾಶ ನೀಡಬೇಕಿದೆ. 14 ಮಂದಿ ಶಾಸಕರು ಬಿಜೆಪಿಗೆ ಹೋದ ತಕ್ಷಣ ಪಕ್ಷವೇ ಬಿದ್ದು ಹೋಯಿತು ಎಂದು ತಿಳಿದುಕೊಂಡಿದ್ದರು. 

ಯಾವುದೇ ಶಾಸಕರಾಗಲೀ, ಕಾರ್ಪೋರೇಟರ್ ಗಳೇ ಆಗಲೀ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರು ಅವರ ಬೆಂಬಲಿಗರನ್ನು ಕಳೆದುಕೊಳ್ಳುತ್ತಾರೆ. ಈ ಪಾಠವನ್ನು ನಾವು ಕಲಿತಿದ್ದೇವೆ. ಪಕ್ಷ ಬಿಟ್ಟು ಹೋದವರು ನಮ್ಮನ್ನು ಬಳಸಿಕೊಂಡು ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಪಕ್ಷದ ಕಾರ್ಯಕರ್ತರ ದನಿ ಪಕ್ಷದ ನಾಯಕನ ಧ್ವನಿಯಿದ್ದಂತೆ. ಪಕ್ಷದ ಕಾರ್ಯಕರ್ತರಿಗೆ ನಾನು ಮೊದಲ ಆದ್ಯತೆಯನ್ನು ನೀಡುತ್ತೇನೆ. ಪಕ್ಷವನ್ನು ಕೇಡರ್ ಆಧರಿತ ಪಕ್ಷವಾಗಿಸಲು ನಿರ್ಧರಿಸಲಾಗಿದೆ. ಬೂತ್ ಮಟ್ಟದ ನಾಯಕರೂ ಇಲ್ಲಿ ಮುಖ್ಯರಾಗುತ್ತಾರೆ. 

ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ಕೊರತೆಗಳಿವೆ ಎಂದು ಹೇಳುತ್ತಾರೆ? 
ನಾನು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಈ ಪ್ರಶ್ನೆಯ ಅರ್ಥವೇ? ಅಧಿಕಾರವು ಸಿದ್ಧಾಂತದಷ್ಟೇ ಮುಖ್ಯವಲ್ಲ. ಜನರ ಕಲ್ಯಾಣ ಹೆಚ್ಚು ಮುಖ್ಯವಾಗುತ್ತದೆ. ಕಾಂಗ್ರೆಸ್ ದೃಷ್ಟಿ, ದೇಶದ ದೃಷ್ಟಿಯಾಗಿದೆ. 

ನಿಮ್ಮದು ರಾಷ್ಟ್ರೀಯ ಪಕ್ಷವೇ ಆಗಿದ್ದರೂ, ನಿಮ್ಮ ಸಾಮಾಜಿಕ ಜಾಲತಾಣ ತಂಡವು ಬಿಜೆಪಿಯೊಂದಿಗೆ ಹೊಂದಿಕೆಯಾಗುವುದಿಲ್ಲವೇಕೆ? 
ಬಿಜೆಪಿ ಬಳಿ ಅಧಿಕಾರ, ರಾಜಕೀಯ ಹಾಗೂ ಹಣದ ಬಲವಿದೆ. ಈ ಹಿಂದೆ ನಾವೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಾಮಾಜಿಕ ಜಾಲತಾಣ ಎಷ್ಟು ಮುಖ್ಯ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮುಂಬರುವ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲಸ ಮಾಡುತ್ತೇವೆ. 

ಕೊರೋನಾ ಸಂದರ್ಭದಲ್ಲಿ ಪಕ್ಷವನ್ನು ಯಾವ ರೀತಿ ಮುನ್ನಡೆಸುತ್ತಿದ್ದೀರಿ?
ಕೊರೋನಾ ಸಂಕಷ್ಟವನ್ನು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳುತ್ತದೆ. ಜನರ ಜೀವ ಅತ್ಯಂತ ಮುಖ್ಯವಾದದ್ದು. ಆದರೆ, ಆರ್ಥಿಕತೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ವಿಷನ್ ಕರ್ನಾಟಕ ತಂಡವನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಈ ತಂಡದ ಮೂಲಕ ನಾವು ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತಿದ್ದೇವೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾದ ಆಡಳಿತ ಅಸಮರ್ಥತೆಯನ್ನು ಬಹಿರಂಗಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com