ಈ ಅವಕಾಶವನ್ನು ರಾಜ್ಯಸಭೆಯಲ್ಲಿ ಕರ್ನಾಟಕದ ಜನತೆಗೆ ಸಹಾಯ ಮಾಡಲು ಬಳಸಿಕೊಳ್ಳುತ್ತೇನೆ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಕಾಲಿಡುತ್ತಿರುವುದು ಬಹುತೇಕ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ನನ್ನ 48 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಇದೇ ಮೊದಲ ಸಲ ರಾಜ್ಯಸಭೆ ಪ್ರವೇಶಿಸುತ್ತಿದ್ದೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು:ಕಾಂಗ್ರೆಸ್ ಹಿರಿಯ ನಾಯಕ ಮತ್ತು ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಕಾಲಿಡುತ್ತಿರುವುದು ಬಹುತೇಕ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ನನ್ನ 48 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಇದೇ ಮೊದಲ ಸಲ ರಾಜ್ಯಸಭೆ ಪ್ರವೇಶಿಸುತ್ತಿದ್ದೇನೆ ಎಂದರು.

ನನಗೆ ಈಗ ಸಿಕ್ಕಿರುವ ಸದವಕಾಶದಲ್ಲಿ ಸಾಧ್ಯವಾದಷ್ಟನ್ನು ಕಲಿತು ನನ್ನ ಕೈಯಿಂದಾದಷ್ಟು ರಾಜ್ಯದ ಜನತೆಗೆ ಸಹಾಯ ಮಾಡುತ್ತೇನೆ. ರಾಜ್ಯಸಭೆಯಲ್ಲಿ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್, ಆನಂದ್ ಶರ್ಮರಂತಹ ನಾಯಕರಿದ್ದಾರೆ. ಅವರಿಂದ ಸಾಧ್ಯವಾದಷ್ಟನ್ನು ಕಲಿತು ಕರ್ನಾಟಕದ ಬಗ್ಗೆ ಮತ್ತು ದೇಶದಲ್ಲಿರುವ ಹಲವು ವಿಷಯಗಳ ಕುರಿತು ಮಾತನಾಡುತ್ತೇನೆ ಎಂದರು.

ಕೆಲವು ಪಕ್ಷಗಳ ನಾಯಕರ ಪಿತೂರಿಯಿಂದ ಕಳೆದ ಬಾರಿ ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಾಣಬೇಕಾಯಿತು ಎಂದು ಕೇಳಿಬರುತ್ತಿರುವ ಮಾತುಗಳ ಬಗ್ಗೆ ಪ್ರಶ್ನಿಸಿದಾಗ, ಇದಕ್ಕಿಂತ ಮೊದಲು ನಾನು ಎಲ್ಲಾ ಚುನಾವಣೆಗಳನ್ನು ಗೆದ್ದಿದ್ದೆನು, ನನಗೆ ಹಾಗನ್ನಿಸುವುದಿಲ್ಲ. ಕೆಲವು ಪಕ್ಷಗಳ ನಾಯಕರು ನಾನು ಮತ್ತೆ ರಾಜಕೀಯ ಜೀವನದಲ್ಲಿ ಮುನ್ನೆಲೆಗೆ ಬರುವುದಿಲ್ಲ, ತೆರೆಮರೆಗೆ ಸರಿಯುತ್ತೇನೆ ಎಂದು ಸದನದಲ್ಲಿಯೇ ಬಹಿರಂಗವಾಗಿ ಹೇಳಿದರು. ಅವರಿಗೆ ಇಂದು ಉತ್ತರವಾಗಿ ನನ್ನ ಪಕ್ಷ ನನ್ನನ್ನು ಸೂಚಿಸುವ ಮೂಲಕ ಉತ್ತರ ನೀಡುತ್ತಿದ್ದೇನೆ. ನನಗೆ ಹಿಂದೆ ಏನು ಮಾಡಿದರು ಎಂಬ ಬಗ್ಗೆ ಮಾತನಾಡಲು ಈಗ ನಾನು ಹೋಗುವುದಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆಯವರು ಸಂಸದರಾಗಿ, ಕರ್ನಾಟಕ ರಾಜಕೀಯದಲ್ಲಿ 48 ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಅವರು ರಾಜಕೀಯದಲ್ಲಿ 55 ವರ್ಷಗಳ ಅನುಭವ ಹೊಂದಿದ್ದಾರೆ. ಕೇಂದ್ರ ರೈಲ್ವೆ ಖಾತೆಯನ್ನೂ ನಿಭಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com