ತಪ್ಪಿದ ರಾಜ್ಯಸಭೆ ಟಿಕೆಟ್: ಕುದಿಯುತ್ತಿರುವ ಕತ್ತಿ ಬಣ: ಕಾಂಗ್ರೆಸ್ ಗೆ ಮರಳುತ್ತಾರಾ ಕತ್ತಿ ಸಹೋದರರು?

ರಾಜ್ಯ ಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮದಿಂದ ಕತ್ತಿ ಸಹೋದರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ, ರಾಜ್ಯಸಭೆ ಟಿಕೆಟ್ ಅಥವಾ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಸದ್ಯ ಎರಡರಲ್ಲೂ ಅವಕಾಶ ಸಿಗದ ಕಾರಣ ಕತ್ತಿ ಬಣ ಮತ್ತಷ್ಟು ಸಿಟ್ಟಿಗೆದ್ದಿದೆ.
ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ
ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ

ಬೆಂಗಳೂರು: ರಾಜ್ಯ ಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮದಿಂದ ಕತ್ತಿ ಸಹೋದರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ, ರಾಜ್ಯಸಭೆ ಟಿಕೆಟ್ ಅಥವಾ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಸದ್ಯ ಎರಡರಲ್ಲೂ ಅವಕಾಶ ಸಿಗದ ಕಾರಣ ಕತ್ತಿ ಬಣ ಮತ್ತಷ್ಟು ಸಿಟ್ಟಿಗೆದ್ದಿದೆ.

ತಮ್ಮ ಒಳಬೇಗುದಿಯನ್ನು ಮರೆ ಮಾಚಿದ್ದ ರಮೇಶ್ ಕತ್ತಿ  ಮಂಗಳವಾರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಒಂದು ವೇಳೆ ತಮ್ಮ ಸಹೋದರನಿಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೇ ಕತ್ತಿ ಸಹೋದರರು ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆ ಚುನಾವಣೆಗೆ ನನಗೆ ಸೀಟು ಸಿಕ್ಕಿಲ್ಲ, ಸಿಎಂ ಯಡಿಯೂರಪ್ಪ ತಮ್ಮ ಸಹೋದರ ಉಮೇಶ್ ಕತ್ತಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿರುವುದಾಗಿ ತಿಳಿಸಿದ್ದಾರೆ, ನನಗೆ ರಾಜ್ಯ ಸಭೆ ಟಿಕೆಟ್ ಸಿಗಲಿಲ್ಲ ಎಂಬ ಮಾತ್ರಕ್ಕೆ ನಾನು ಪಕ್ಷದ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಅರ್ಥವಲ್ಲ ಎಂದು ರಮೇಶ್ ಕತ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com