ಸಾಮಾನ್ಯರ ಮೇಲೆ ಹೊರೆ ವಹಿಸುವುದನ್ನು ಪ್ರಧಾನಿ ವೇಗವಾಗಿ ಮಾಡುತ್ತಾರೆ: ಸಿದ್ದರಾಮಯ್ಯ

ಪೆಟ್ರೋಲ್‌ ಮತ್ತು ಡೀಸೆಲ್‌ ದರ ನಿರಂತರ ಏರಿಕೆ ಮಾಡುತ್ತಿರುವ ಕುರಿತು ಕೇಂದ್ರ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರ ನಿರಂತರ ಏರಿಕೆ ಮಾಡುತ್ತಿರುವ ಕುರಿತು ಕೇಂದ್ರ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಕೇವಲ ನಾಲ್ಕು ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸುಮಾರು 2 ರು. ಹೆಚ್ಚಿಸಲಾಗಿದೆ. ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದಂತೆ ಸಾಮಾನ್ಯರ ಮೇಲೆ ಹೊರೆವಹಿಸುವುದನ್ನು ಪ್ರಧಾನಿ ಬಹಳ ವೇಗವಾಗಿ ಮಾಡುತ್ತಾರೆ. 

ಆದರೆ, ಕಚ್ಚಾ ತೈಲ ದರ ಕಡಿಮೆಯಾದಾಗ ಬೆಲೆ ಕಡಿತಗೊಳಿಸುವ ಬಗ್ಗೆ ಜಡತನ ವಹಿಸಿರುತ್ತಾರೆ. ತೈಲ ಬೆಲೆ  ಏರಿಕೆಯಾಗುತ್ತಲೇ ಇರುವಾಗ, ಬೇಡಿಕೆ ಹೆಚ್ಚಲು ನಿರೀಕ್ಷಿಸುವುದಾದರು ಹೇಗೆ?' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಊರಿಗೆ ಕಳಿಸಿಕೊಡಬೇಕು, ಊರಿಗೆ ಮರಳಿದವರಿಗೆ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಮತ್ತು ಅವರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣ ಜಾರಿಗೆ ತರಲು ಮುಂದಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com