ಭಿನ್ನರಾಗ, ವೈರುಧ್ಯಗಳ ನಡುವೆ ಒಗ್ಗಟ್ಟಿನ ಮಂತ್ರ ಜಪಿಸಿದ ಬಿಜೆಪಿ ನಾಯಕರು!

ರಾಜ್ಯಸಭೆ ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಆರಿಸುವ ಮೂಲಕ ಬಿಜೆಪಿ ವರಿಷ್ಠರಪ ಎಲ್ಲರ ಲೆಕ್ಕಾಚಾರವನ್ನು ತಲಕೆಳಗು ಮಾಡಿದ ಆಘಾತದಿಂದ ರಾಜ್ಯ ನಾಯಕರು ಹೊರಬಂದಿಲ್ಲ, ಆದರೆ ಪಕ್ಷದೊಳಗಿನ ಅಸಮಾಧಾನ ಹೊರ ಹಾಕದೇ ಎಲ್ಲರೂ ಒಗ್ಗಟ್ಟಾಗಿದ್ದೇವೆಂದು ತೋರಿಸಿದ್ದಾರೆ.
ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ನಾಮಪತ್ರ ಸಲ್ಲಿಕೆ
ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಆರಿಸುವ ಮೂಲಕ ಬಿಜೆಪಿ ವರಿಷ್ಠರಪ ಎಲ್ಲರ ಲೆಕ್ಕಾಚಾರವನ್ನು ತಲಕೆಳಗು ಮಾಡಿದ ಆಘಾತದಿಂದ ರಾಜ್ಯ ನಾಯಕರು ಹೊರಬಂದಿಲ್ಲ, ಆದರೆ ಪಕ್ಷದೊಳಗಿನ ಅಸಮಾಧಾನ ಹೊರ ಹಾಕದೇ ಎಲ್ಲರೂ ಒಗ್ಗಟ್ಟಾಗಿದ್ದೇವೆಂದು ತೋರಿಸಿದ್ದಾರೆ.

ನೀವು ಅಂದುಕೊಂಡಿರಬಹುದು ನಾನು ಹೊಸಬನೆಂದು, ಆದರೆ ನಾನು ಹೊಸಬನಲ್ಲ, ಕಳೆದ 32 ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ನಾನು ಮಾಧ್ಯಮಗಳಿಗೆ ಹೊಸಬನೇ ಹೊರತು ಪಕ್ಷಕ್ಕಲ್ಲ ಎಂದು ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಈರಣ್ಣ ಕಡಾಡಿ ಹೇಳಿದ್ದಾರೆ.

ನಾಮಪತ್ರ ಸಲ್ಲಿಸುವ 24 ಗಂಟೆಗಳ ಮೊದಲು ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿತು. ನಮ್ಮ ರಾಷ್ಟ್ರೀಯ ನಾಯಕರು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿರುವುದು ತುಂಬಾ ಸಂತೋಷವಾಗಿದೆ. ಇದು ಒಮ್ಮತದ ನಿರ್ಧಾರವಾಗಿದೆ, ತಳ ಮಟಟ್ಟದ ಕಾರ್ಯಕರ್ತರಿಗೆ ಉನ್ನತ ಹುದ್ದೆಯ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ, ರಾಜ್ ಕೋರ್ ಕಮಿಟಿ ಹೆಸರುಳನ್ನು ಕಳುಹಿಸಿತ್ತು, ಆದರೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ನಮ್ಮ ಜೊತೆ ಚರ್ಚಿಸಿ ಸಾಮಾನ್ಯ ಕಾರ್ಯಕರ್ತರ ಹೆಸರನ್ನು ಕಳುಹಿಸುವಂತೆ ಸೂಚಿಸಿದ್ದರು. ಅದರಂತೆ ಬೇರೆ ಹೆಸರುಗಳನ್ನು ಕಳುಹಿಸಿದ್ದೆವು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನನ್ನ ಜೊತೆ ಚರ್ಚಿಸಿಯೇ ಅಭ್ಯರ್ಥಿಳ ಆಯ್ಕೆ ಯಾಗಿದೆ. ಇಬ್ಬರು ಅಭ್ಯರ್ಥಿಗಳ ಆಯ್ಕೆ ಕೊನೆ ಕ್ಷಣದ ನಿರ್ಧಾರ ಎಂಬುದನ್ನು ಯಡಿಯೂರಪ್ಪ ತಳ್ಳಿ ಹಾಕಲಿಲ್ಲ, ರಾಜ್ಯ ಬಿಜೆಪಿ ನಾಯಕರ ಗಮನಕ್ಕೆ ತರದೇ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂಬ ಎಲ್ಲಾ ಗುಸುಗುಸುಗಳಿಗೆ ತೆರೆ ಎಳೆದಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧವಾಗಿ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂಬುದು ,ಸತ್ಯವಲ್ಲ, ಪಕ್ಷದ ವಿಷಯಗಳು ಮತ್ತು ಇತರ ವಿಷಯಗಳು ವಿಭಿನ್ನವಾಗಿವೆ. ಯಡಿಯೂರಪ್ಪ ನಮ್ಮ ನಾಯಕ, ಪಕ್ಷದ ಎಲ್ಲಾ ನಿಷ್ಟಾವಂತ ಕಾರ್ಯಕರ್ತರು ಪಕ್ಷದ ಪ್ಲಾನ್ ನಂತೆಯೇ ನಡೆದುಕೊಳ್ಳುತ್ತೇವೆ ಎಂದು ಅಶೋಕ್ ಗಸ್ತಿ ಹೇಳಿದ್ದಾರೆ. ಇಬ್ಬರು ಅಭ್ಯರ್ಥಿಗಳು ನಿನ್ನೆ ತಮ್ಮ ನಾಮಪತ್ರವನ್ನು ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ ಅವರಿಗೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com