ವಿಧಾನ ಪರಿಷತ್ ಚುನಾವಣೆ: ಹಿಂದುಳಿದ ವರ್ಗ-ಮೈನಾರಿಟಿ ಫಾರ್ಮುಲಾ ಮೊರೆಹೋದ ಕಾಂಗ್ರೆಸ್

ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಮಂಗಳವಾರ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದೆ.
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಮಂಗಳವಾರ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದೆ.

ಪ್ರೊ ಎಂವಿ ರಾಜೀವ್ ಗೌಡ ಕೆ ನಾಸೀರ್ ಅಹ್ಮದ್, ನಿವೇದಿತಾ  ಆಳ್ವ, ಮನ್ಸೂರ್ ಅಲಿ ಖಾನ್, ಎಚ್ ಎಂ ರೇವಣ್ಣ, ಎನ್ ಎಸ್ ಬೋಸರಾಜ, ಐವನ್ ಡಿಸೋಜಾ , ಎಂಆರ್ ಸೀತಾರಾಮ್ ಮತ್ತು ಮೋಹನ್ ಬಾಬು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ನಿವೃತ್ತರಾಗಿರುವ ಸದಸ್ಯರೆಲ್ಲರೂ ಅಲ್ಪ ಸಂಖ್ಯಾತ ಸಮುದಾಯ ಇಲ್ಲವೇ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.  ಇದರ ಜೊತೆಗೆ ಕ್ರಿಶ್ಚಿಯನ್ ಸಮುದಾಯ ಕೂಡ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದೆ.  ಮುಸ್ಲಿಂ ಮುಖಂಡರಾದಿ ಸಿಎಂ ಇಬ್ರಾಹಿಂ ಮತ್ತು ರಿಜ್ವಾನ್ ಹರ್ಷದ್ ಅವರ ಅಧಿಕಾರಾವಧಿ 2022 ಕ್ಕೆ ಅಂತ್ಯವಾಗಲಿದೆ, ಇಂದು ತಡ ರಾತ್ರಿ ರಾಜ್ಯ ಕಾಂಗ್ರೆಸ್, ಹೈಕಮಾಂಡ್ ಗೆ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ. 68 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ., 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com