ಒಂದು ಸ್ಥಾನ, ಹಲವು ಆಕಾಂಕ್ಷಿಗಳು: ಆಯ್ಕೆ ಚೆಂಡು ದೇವೇಗೌಡರ ಅಂಗಳದಲ್ಲಿ!

ಜೆಡಿಎಸ್ ನಲ್ಲಿ ಇರುವುದು ಒಂದು ಸ್ಥಾನ. ಆದರೆ ಅದಕ್ಕೆ ಪೈಪೋಟಿ ನಡೆಸಿರುವವರು ಬರೊಬ್ಬರಿ ಇಪ್ಪತ್ತೊಂಬತ್ತು ಮಂದಿ. ಹೀಗಿದ್ದಾಗ ಅಂತಿಮ ನಿರ್ಣಯ ಕೈಗೊಳ್ಳುವುದು  ಸಾಧ್ಯವಾಗದೇ ಸಭೆಯನ್ನು ಮುಂದೂಡಲಾಗಿದೆ.
ಜೆಡಿಎಸ್ ಸಭೆ
ಜೆಡಿಎಸ್ ಸಭೆ

ಬೆಂಗಳೂರು: ಜೆಡಿಎಸ್ ನಲ್ಲಿ ಇರುವುದು ಒಂದು ಸ್ಥಾನ. ಆದರೆ ಅದಕ್ಕೆ ಪೈಪೋಟಿ ನಡೆಸಿರುವವರು ಬರೊಬ್ಬರಿ ಇಪ್ಪತ್ತೊಂಬತ್ತು ಮಂದಿ. ಹೀಗಿದ್ದಾಗ ಅಂತಿಮ ನಿರ್ಣಯ ಕೈಗೊಳ್ಳುವುದು  ಸಾಧ್ಯವಾಗದೇ ಸಭೆಯನ್ನು ಮುಂದೂಡಲಾಗಿದೆ. 

ಜೆಡಿಎಸ್‌ ಪಕ್ಷದ ಕಚೇರಿ ಜೆಪಿ ಭನವದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಯಲಾಯಿತು, ಒದರೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗದೇ ಅಂತಿ ನಿರ್ಧಾರವನ್ನು ದೇವೇಗೌಡರಿಗೆ ಬಿಡಲಾಗಿದೆ.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಲು ಜೆಡಿಎಸ್  ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಾಲಾಗಿತ್ತು. ಅದರೊಂದಿಗೆ ಪಕ್ಷದ ಶಾಸಕರು ಹಾಗೂ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧಾರ ಮಾಡಿದ್ದರು.

ಆದರೆ ಜೆಡಿಎಸ್ ನಾಯಕರು ಸಭೆ ಸೇರಿದ ಬಳಿಕ ಗೊತ್ತಾಗಿದ್ದು ಒಂದು ಸ್ಥಾನಕ್ಕೆ ಪಕ್ಷದಲ್ಲಿ ಹಲವು ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆಂದು. ಹೀಗಾಗಿ ಜೆಡಿಎಸ್ ನಾಯಕರು ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದರೂ, ಅಂತಿಮವಾಗಿ ಅಭ್ಯರ್ಥಿ ಆಯ್ಕೆ  ಅಧಿಕಾರವನ್ನು ಪಕ್ಷದ ವರಿಷ್ಠ ದೇವೇಗೌಡರಿಗೆ ಬಿಡಲಾಗಿದೆ.

ಇರುವ ಒಂದು ಸ್ಥಾನಕ್ಕೆ, ಕುಪೇಂದ್ರ ರೆಡ್ಡಿ, ಕೋನ ರೆಡ್ಡಿ, ಟಿಎಸ್ ಶರವಣ, ಪ್ರಕಾಶ್ ಸೇರಿದಂತೆ ಹಲವರು ಕಣ್ಣಿಟ್ಟಿದ್ದಾರೆ, ಜೆಡಿಎಸ್ ನ ಕೆಲವು ಮಂದಿ ವೈಎಸ್ ವಿ ದತ್ತ ಅವರ ಹೆಸರನ್ನು ಸೂಚಿಸಿದ್ದಾರೆ. ಪಕ್ಷವನ್ನು ಪುನರುಜ್ಜೀವನಗೊಳಿಸಲು ದತ್ತ ಅವರ ಅವಶ್ಯಕತೆಯಿದೆ ಎಂದು ಹೇಳಲಾಗಿದೆ, ಆದರೆ ಇದುವರೆಗ ದತ್ತ ಅವರನ್ನು ಯಾರು ಸಂಪರ್ಕಿಸಿಲ್ಲ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com