ಒಮ್ಮೆ ತಿರಸ್ಕೃತ, ಎರಡು ಬಾರಿ ಅಪಮಾನ: ಬಿಜೆಪಿ ಹೈಕಮಾಂಡ್ ಆಂತರ್ಯ ಬಲ್ಲವರಾರಯ್ಯಾ?

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಆರಿಸಿದ ವ್ಯಕ್ತಿಗಳ ಪಟ್ಟಿ ನೋಡಿ  ರಾಜ್ಯ ಬಿಜೆಪಿ ಘಟಕ ಇನ್ನೂ ಶಾಕ್ ನಿಂದ ಹೊರಬಂದಿಲ್ಲ. ಇದರ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಗಾಗಿ ಸೋಮವಾರ ಬಿಜೆಪಿ ಕೋರ್ ಕಮಿಟಿ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಳಿಸಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಆರಿಸಿದ ವ್ಯಕ್ತಿಗಳ ಪಟ್ಟಿ ನೋಡಿ  ರಾಜ್ಯ ಬಿಜೆಪಿ ಘಟಕ ಇನ್ನೂ ಶಾಕ್ ನಿಂದ ಹೊರಬಂದಿಲ್ಲ. ಇದರ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಗಾಗಿ ಸೋಮವಾರ ಬಿಜೆಪಿ ಕೋರ್ ಕಮಿಟಿ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಳಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ  ಉನ್ನತ ನಾಯಕರುಗಳ ನಿರ್ದೇಶನದಂತೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದಾರೆ, ಮತ್ತೆ ಮುಜುಗರವಾಗಬಾರದೆಂದು ಈ ಕ್ರಮ ಕೈಗೊಂಡಿದ್ದಾರೆ.

ಐದು ನಾಮ ನಿರ್ದೇಶನ ಮತ್ತು ನಾಲ್ಕು ಮಂದಿನ್ನು ಮೇಲ್ಮನೆಗೆ ಆರಿಸಿಕಳಿಸಬೇಕಾಗಿದೆ. ಸುಮಾರು 123 ಮಂದಿ ಆಕಾಂಕ್ಷಿಗಳ ಪೈಕಿ, ರಾಜ್ಯ ಬಿಜೆಪಿ ಕೋರ್ ಕಮಿಟಿ ಎಚ್ಚರಿಕೆಯಿಂದ 12 ಕ್ಕೂ ಹೆಚ್ಚು ಮಂದಿಯ ಹೆಸರನ್ನು ರವಾನಿಸಿದೆ.

ಬಿಜೆಪಿ ಸರ್ಕಾರ ಅದಿಕಾರಕ್ಕೆ ಬರಲು ಕಾರಣವಾದ ಎಚ್ ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಪರಿಷತ್ ಗೆ ಕಳುಹಿಸುವ ಜವಬ್ದಾರಿ ಸಿಎಂ ಯಡಿಯೂರಪ್ಪ ಅವರದ್ದಾಗಿದೆ.

ಇನ್ನೂ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಪುತ್ರ ಅರವಿಂದ್ ಜಾಧವ್ ಗಾಗಿ ಚಿಂಚೋಳಿ ವಿಧಾನ ಸಭಾ ಕ್ಷೇತ್ರ ತ್ಯಾಗ ಮಾಡಿದ್ದ ಸುನೀಲ್ ವಲ್ಯಾಪುರೆ ಅವರನ್ನು ಪರಿಷತ್ ಗೆ ಆರಿಸಿ ಕಳುಹಿಸುವ ಹೊಣೆಗಾರಿಕೆ ಸಿಎಂ ಮೇಲಿದೆ.

ಹೀಗಾಗಿ ಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸುವ ನಾಲ್ಕು ಮಂದಿ ತಮ್ಮದೇ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು, ನಾಮ ನಿರ್ದೇಶನಗೊಳ್ಳುವ ಐದು ಸ್ಥಾನವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಬೇಕೆಂದು ಯಡಿಯೂರಪ್ಪ ಕೇಳಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಈ ಎಲ್ಲಾ ಅಡೆ ತಡೆಗಳ ನಡುವೆಯೂ ಸಿಎಂ ಯಡಿಯೂರಪ್ಪ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್ ರವಾನಿಸಿದ್ದಾರೆ.  ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಮಾಜಿ ಶಾಸಕ ಸೊಗಡು ಶಿವಣ್ಮ, ಮಾಲೀಕ್ಯ ಗುತ್ತೇದಾರ್,ಮಹೇಶ್ ತೆಂಗಿನಕಾಯಿ, ನಿರ್ಮಲ್ ಕುಮಾರ್ ಸುರಾನಾ, ಎನ್ ಶಂಕರಪ್ಪ ಮತ್ತು ಪ್ರತಾಪ್ ಸಿಂಹ ನಾಯಕ್ ಅವರ ಹೆಸರುಗಳನ್ನು ಸೇರಿಸಲಾಗಿದೆ.

ಸಂಸದೀಯ ಮಂಡಳಿಯೂ ರಾಜ್ಯಘಟಕ ಕಳಿಸಿದ ಪಟ್ಟಿಯನ್ನು ತಿರಸ್ಕತಗೊಳಿಸಬಹುದು, ಹೀಗಾಗಿ ಹೈಕಮಾಂಡ್ ನಿರೀಕ್ಷೆ ಏನಿದೆ ಎಂಬುದನ್ನು ತಿಳಿದುಕೊಂಡು ಅದರಂತೆ ಪಟ್ಟಿ ಸಿದ್ದಪಡಿಸಬೇಕೆಂದು ಕೋರ್ ಕಮಿಟಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಿದೆ, ಅಂತಿಮವಾಗಿ ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com