ಲಡಾಖ್ ಸಂಘರ್ಷ ಆತಂಕಕಾರಿ, ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟ ಮಾಹಿತಿ ನೀಡಬೇಕು: ದೇವೇಗೌಡ

ಲಡಾಖ್ ನ ಗಲ್ವಾನ್ ಕಣಿವೆಯ ಸಂಘರ್ಷದ ವರದಿ ಆತಂಕಕಾರಿಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರು ಚೀನಾ ದಾಳಿಯಲ್ಲಿ ಜೀವತೆತ್ತಿದ್ದೇಕೆ? ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಲಡಾಖ್ ನ ಗಲ್ವಾನ್ ಕಣಿವೆಯ ಸಂಘರ್ಷದ ವರದಿ ಆತಂಕಕಾರಿಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರು ಚೀನಾ ದಾಳಿಯಲ್ಲಿ ಜೀವತೆತ್ತಿದ್ದೇಕೆ? ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಲಡಾಖ್‌ನಲ್ಲಿ ಭಾರತದ ಸೇನೆ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ಓರ್ವ ಅಧಿಕಾರಿಯೂ ಸೇರಿದಂತೆ 20 ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೇವೇಗೌಡರು, ರಾಷ್ಟ್ರೀಯ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ - ಚೀನಾ ಗಡಿ ವಿಚಾರವಾಗಿ ದೇಶದ ಮುಂದೆ ಸ್ಪಷ್ಟ ಚಿತ್ರಣ ಬಿಚ್ಚಿಡಲಿ ಎಂದು ಆಗ್ರಹಿಸಿದ್ದಾರೆ‌.

ಸೋಮವಾರ ತಡರಾತ್ರಿ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಚೀನಾದ 43 ಯೋಧರು ಹತ್ಯೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com