ಖರ್ಗೆ ಮತ್ತು ಹರಿಪ್ರಸಾದ್
ಖರ್ಗೆ ಮತ್ತು ಹರಿಪ್ರಸಾದ್

ಮುತ್ಸದ್ದಿಗಳಿಗೆ ಮಣೆ ಹಾಕಿದ ಕಾಂಗ್ರೆಸ್: ಶಿವಕುಮಾರ್, ಸಿದ್ದರಾಮಯ್ಯಗೆ ಅಂಕುಶ ಹಾಕಲು ಮಾಸ್ಟರ್ ಪ್ಲಾನ್!

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಗೆ ಹೊಸ ಮುಖಗಳನ್ನು ಕರೆ ತರುವ ಮೂಲಕ ಬಿಜೆಪಿ ಪಕ್ಷವನ್ನು ಮತ್ತಷ್ಟು ಸದೃಢಗೊಳಸಿಕೊಳ್ಳುತ್ತಿದೆ, ಇದೇ ವೇಳೆ  ಕಾಂಗ್ರೆಸ್ ಪಕ್ಷ ಮುತ್ಸದ್ದಿಗಳನ್ನು ರಾಜ್ಯಸಭೆಗೆ ಮತ್ತು ವಿಧಾನ ಪರಿಷತ್ ಗೆ ಕಳುಹಿಸುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಗೆ ಹೊಸ ಮುಖಗಳನ್ನು ಕರೆ ತರುವ ಮೂಲಕ ಬಿಜೆಪಿ ಪಕ್ಷವನ್ನು ಮತ್ತಷ್ಟು ಸದೃಢಗೊಳಸಿಕೊಳ್ಳುತ್ತಿದೆ, ಇದೇ ವೇಳೆ  ಕಾಂಗ್ರೆಸ್ ಪಕ್ಷ ಮುತ್ಸದ್ದಿಗಳನ್ನು ರಾಜ್ಯಸಭೆಗೆ ಮತ್ತು ವಿಧಾನ ಪರಿಷತ್ ಗೆ ಕಳುಹಿಸುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ.ಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆರಿಸಿಕಳುಹಿಸಿದೆ,  ಜೊತೆಗೆ ಹಿರಿಯ ರಾಜಕಾರಣಿ ಜೆಡಿಎಸ್ ಮುಖಂಡ ಎಚ್ .ಡಿ ದೇವೇಗೌಡರಿಗೆ ಬೆಂಬಲ ನೀಡಿ ರಾಜ್ಯಸಭೆಗೆ ಕಳುಹಿಸಿದೆ. 

ಅನುಭವಿ ರಾಜಕಾರಣಿ ಖರ್ಗೆ 2008 ರಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದರು.ಹಿಂದುಳಿದ ವರ್ಗಗಳ ಪ್ರಬಲ ಮುಖಂಡರಾಗಿರುವ ಖರ್ಗೆ ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಪಾರ ಬೆಂಬಲವಿದೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ ಅನುಭವವಿದೆ.

ನಸೀರ್ ಅಹ್ಮದ್ ಅವರನ್ನು ವಿಧಾನ ಪರಿಷತ್ತಿಗೆ ಕರೆತರುವಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದರೆ, ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹಿಂದುಳಿದ ವರ್ಗದ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕಣಕ್ಕಿಳಿಸುವ ಹೈಕಮಾಂಡ್ ನಿರ್ಧಾರವು ಪ್ರಮುಖವಾಗಿದೆ. ಹರಿಪ್ರಸಾದ್ ಈಡಿಗ ಸಮುದಾಯದವರಾಗಿದ್ದಾರೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈಡಿಗ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಮೈಸೂರು, ಕೊಪ್ಪಳ, ತುಮಕೂರು ಹಾಗೂಕಲಬುರಗಿ ಜಿಲ್ಲೆಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ.ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ  ಕೂಡ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದರು.

ಖರ್ಗೆ ಪ್ರಮುಖ ವ್ಯಕ್ತಿ, ಅವರಿಲ್ಲದೇ ಪಕ್ಷದ ಪ್ರಭಾವ ಅತ್ಯಂತ ಪರಿಣಾಮ ಬೀರುವುದಿಲ್ಲ,  ಇನ್ನು ಬಿ.ಕೆ ಹರಿಪ್ರಸಾದ್, ಎಐಸಿಸಿಯಲ್ಲಿ ಕೆಲಸ ಮಾಡಿದ್ದಾರ. ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತ ಪಡಿಸುವ ವ್ಯಕ್ತಿಯಾಗಿದ್ದಾರೆ. ಕಾಂಗ್ರೆಸ್ ಏನು ಮುಖ್ಯವಾಗಿದೆ ಎಂಬುದು ದೆಹಲಿ ಮುಖಂಡರಿಗೆ ಗೊತ್ತು ಹೀಗಾಗಿ ಹಿರಿಯ ಮುಖಂಡರಿಗೆ ಆದ್ಯತೆ ನೀಡಿದ್ದಾರೆ ಎಂದು ರಾಜಕೀಯ ಪರಿಣಿತ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿರುವುದರ ಹಿಂದಿನ ಉದ್ದೇಶ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಶಿವಕುಮಾರ್ ಅವರ ಮೇಲೆ ಹಿಡಿತ ಸಾಧಿಸಲು ಎಂಬುದಾಗಿ ರಾಜಕೀಯ ತಜ್ಞ ಹರೀಶ್ ಬೈಜೂರ್ ಅಭಿಪ್ರಾಯ ಪಟ್ಟಿದ್ದಾರೆ.  ಇನ್ನೂ ಬಿ ಕೆ ಹರಿಪ್ರಸಾದ್ ಎಐಸಿಸಿ ನಿಷ್ಟರಾಗಿದ್ದು, ಸಿದ್ದರಾಮಯ್ಯ ವಿರುದ್ಧ ಮುಲಾಜಿಲ್ಲದೇ ಟೀಕೆ ಮಾಡುವವರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com