ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಚೀನಾ ಕಂಪನಿಗಳಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ: ಪ್ರಧಾನಿ ಮೋದಿಗೆ 7 ಪ್ರಶ್ನೆ ಕೇಳಿದ ಡಿಕೆ ಶಿವಕುಮಾರ್

ಚೀನಾ ಕಂಪನಿಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಎಷ್ಟು ದೇಣಿಗೆ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರು:  ಚೀನಾ ಕಂಪನಿಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಎಷ್ಟು ದೇಣಿಗೆ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗುಲ್ವಾನಾ ಪ್ರದೇಶದಲ್ಲಿ ಚೀನಾ ಮಿಲಿಟರಿ ಪಡೆಗಳು ಭಾರತದ ಗಡಿ ಪ್ರವೇಶಿಸಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಮೊದಲಿನಿಂದಲೂ ಚೀನಾ ಪರವಾಗಿ ಮೃದು ಧೋರಣೆ ಹೊಂದಿದ್ದು, ಚೀನಾಗೆ ಐದು ಬಾರಿ ಭೇಟಿ ನೀಡಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ ಪಿಎಂ ಕೇರ್ಸ್ ಫಂಡ್ ಗೆ ಮೇ 20 ರಂದು ಪ್ರಧಾನಿ ಮೋದಿಯವರು 9678 ಕೋಟಿ ರೂಗಳನ್ನು ದೇಣಿಗೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಧಾನಿ ಮೋದಿ 2013 ರಲ್ಲಿ ಯಾಕೆ ಚೀನಾ ಕಂಪನಿಗಳಿಂದ ದೇಣಿಗೆ ಪಡೆದುಕೊಂಡಿದ್ದಾರೆ ?. ಚೀನಾ ಮೂಲದ ಹುವಾಯಿ ಕಂಪನಿಯಿಂದ ಪ್ರಧಾನಿ 7 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆಯೇ ? ಹುವಾಯಿ ಕಂಪನಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆಗೆ ಸಂಪರ್ಕ ಹೊಂದಿದಿಯಾ?. ಚೀನಾ ಮೂಲದ ಟಿಕ್ ಟಾಕ್ ಕಂಪನಿ ಪಿಎಂ ಕೇರ್ ಫಂಡ್ ಗೆ 30 ಕೋಟಿ ದೇಣಿಗೆ ನೀಡಿದಿಯಾ?. ಪೇಟಿಎಂ 100 ಕೋಟಿ ದೇಣಿಗೆ ನೀಡಿದಿಯಾ?, ಎಕ್ಸಿಯೊಮಿ 15 ಕೋಟಿ ಹಾಗೂ ಒಪ್ಪೊ 1 ಕೋಟಿ ರೂಪಾಯಿಯನ್ನು ವಿವಾದಿತ ಪಿಎಂ ಕೇರ್ ಫಂಡ್ ಗೆ ದೇಣಿಗೆ ನೀಡಿದಿಯಾ? ಅಲ್ಲದೇ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಪಿಎಂ ಕೇರ್ ಫಂಡ್ ಗೆ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷರು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com