ಅಶೋಕ್ ಗೆ ಬೆಂಗಳೂರು ಕೊರೋನಾ ಉಸ್ತುವಾರಿ: ಟ್ವಿಟ್ಟರ್ ನಲ್ಲಿ ಡಾ.ಸುಧಾಕರ್ ಟಾಂಗ್; ಕಥೆಯ ಒಳಮರ್ಮವೇನು?

ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ಕೋವಿಡ್ ಉಸ್ತುವಾರಿ ನೀಡಿದ ನಂತರ ಅವರ ಸಂಪುಟ ಸಹೋದ್ಯೋಗಿ ಸಚಿವ ಸುಧಾಕರ್ ಅವರಿಂದ ಟೀಕೆಗೊಳಪಟ್ಟಿದ್ದಾರೆ.  ತಮಗಾಗಿರುವ ಅಸಮಾಧಾನವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ.

Published: 29th June 2020 07:53 AM  |   Last Updated: 29th June 2020 12:18 PM   |  A+A-


Ashok And sudhakar

ಅಶೋಕ್ ಮತ್ತು ಸುಧಾಕರ್

Posted By : Shilpa D
Source : The New Indian Express

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ಕೋವಿಡ್ ಉಸ್ತುವಾರಿ ನೀಡಿದ ನಂತರ ಅವರ ಸಂಪುಟ ಸಹೋದ್ಯೋಗಿ ಸಚಿವ ಸುಧಾಕರ್ ಅವರಿಂದ ಟೀಕೆಗೊಳಪಟ್ಟಿದ್ದಾರೆ.  ತಮಗಾಗಿರುವ ಅಸಮಾಧಾನವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ.

ಭಾನುವಾರದ ಆಲೋಚನೆಗಳು:  ನಾನು ನನ್ನ ಶಾಲೆಯ ದಿನಗಳಲ್ಲಿ ಓದಿದ ಕಥೆಯೊಂದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ,  ಕಥೆಯ ನೀತಿ: ನಮ್ಮ ಕೆಲಸವನ್ನು ಆತ್ಮಸಾಕ್ಷಿಯೊಂದಿಗೆ ಮತ್ತು ಉತ್ತಮ ಉದ್ದೇಶದಿಂದ ಮಾಡೋಣ. ನಾಯಕತ್ವ ಎಂಬುದು ಒಂದು ಹುದ್ದೆಯಲ್ಲಿಲ್ಲ, ನಾವು ಮಾಡುವ ಕೆಲಸದಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸುಧಾಕರ್ ಅವರ ಈ ಟ್ವೀಟ್ ಬಗ್ಗೆ ಆರ್ ಅಶೋಕ್ ಅವರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ,  ಡಾ. ಸುಧಾಕರ್ ಅವರ ಕುಟುಂಬಸ್ಥರಿಗೆ ಕೋರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸುಧಾಕರ್ ಅವರು ಕೂಡ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ, ಹೀಗಾಗಿ ಬೆಂಗಳೂರು ಕೋವಿದ್ ಉಸ್ತುವಾರಿಯನ್ನು ಆರ್.ಅಶೋಕ್ ಅವರಿಗೆ ನೀಡಲಾಗಿದೆ. 

ಭಾನುವಾರ ತಮ್ಮ ಕೊರೋನಾ ಪರೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ,ಈ ಮೂಲಕ ತಾವು ಯಾವುದೇ ಕ್ಷಣದಲ್ಲಾದರೂ ಕೆಲಸಕ್ಕೆ ಮರಳುವ ಸಂದೇಶ ರವಾನಿಸಿದ್ದಾರೆ.  ಅಶೋಕ್ ಅವರನ್ನು ಬೆಂಗಳೂರು ಕೋವಿದ್ ಉಸ್ತುವಾರಿಯನ್ನಾಗಿ ನೇಮಿಸಿರುವುದಕ್ಕೆ  ಆರೋಗ್ಯ ಸಚಿವ ಬಿ ಶ್ರಿರಾಮುಲು ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Stay up to date on all the latest ರಾಜಕೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp