'ಅಂದು ಈಸ್ಟ್ ಇಂಡಿಯಾ ಕಂಪನಿ ಇಂದು‌ ಈಟ್ ಇಂಡಿಯಾ ಕಂಪನಿ: ರಕ್ತಕ್ಕಿಂತ ಹಣ ದೊಡ್ಡದು'

ದೇಶವನ್ನು ಈಸ್ಟ್ ಇಂಡಿಯಾ ಕಂಪನಿ 1947ರಲ್ಲಿ ತೊರೆದು ಹೋದ ನಂತರ ಈಗ ಈಟ್ ಇಂಡಿಯಾ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿವೆ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಿಧಾನಸಭೆಯಲ್ಲಿಂದು ತಮ್ಮದೇ ಆದ ಮಾತಿನ ಮೂಲಕ ಚಾಟಿ ಬೀಸಿದರು.
ಎ.ಟಿ ರಾಮಸ್ವಾಮಿ
ಎ.ಟಿ ರಾಮಸ್ವಾಮಿ

ಬೆಂಗಳೂರು: ದೇಶವನ್ನು ಈಸ್ಟ್ ಇಂಡಿಯಾ ಕಂಪನಿ 1947ರಲ್ಲಿ ತೊರೆದು ಹೋದ ನಂತರ ಈಗ ಈಟ್ ಇಂಡಿಯಾ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿವೆ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಿಧಾನಸಭೆಯಲ್ಲಿಂದು ತಮ್ಮದೇ ಆದ ಮಾತಿನ ಮೂಲಕ ಚಾಟಿ ಬೀಸಿದರು.

ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಅನೇಕ ಕಥೆ ಉಪಕಥೆಗಳ ಮೂಲಕ ಸದನದ ಗಮನ ಸೆಳೆದ ಅವರು, ಹಿಂದೆ ನೀರಿಗಿಂತ ರಕ್ತ ಗಟ್ಟಿ ಎಂಬ ಮಾತು ಸರ್ವೇ ಸಾಮಾನ್ಯವಾಗಿ ಎಲ್ಲಾ ಕಡೆಯಿಂದ ಕೇಳಿ ಬರುತ್ತಿತ್ತು. ಆದರೆ ಇಂದು ರಕ್ತಕ್ಕಿಂತ ಹಣ ದೊಡ್ಡದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 

ದುಡ್ಡಿದ್ದವರು, ಬಲಾಢ್ಯರು, ತೋಳಿನಲ್ಲಿ ಬಲ ಇರುವವರು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ವಿಷಾದಿಸಿದರು.

ಸಂವಿಧಾನದಲ್ಲಿ ಒಳ್ಳೆಯ ಸಂವಿಧಾನ, ಕೆಟ್ಟ ಸಂವಿಧಾನ ಎಂಬ ಭೇದ, ತಾರತಮ್ಯ ಇಲ್ಲ. ಸಂವಿಧಾನದ ಆಶಯ ಮತ್ತು ಗುರಿಯನ್ನು ಆಚರಣೆಗೆ ತರುವ ವ್ಯಕ್ತಿಯಿಂದಲೇ ಒಳ್ಳೆಯ ಸಂವಿಧಾನವೋ ಕೆಟ್ಟ ಸಂವಿಧಾನವೋ ಎಂಬುದು ತೀರ್ಮಾನವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com