75 ವರ್ಷ ಆದವರಿಗೆ ಸಿಎಂ ಆಗಲು ಬೇರ್ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲವಾ? ಬಿಎಸ್ವೈ ಪುತ್ರ ವಿಜಯೇಂದ್ರ ಪ್ರಶ್ನೆ
ದೇಶದಲ್ಲಿ ೭೫ ವರ್ಷ ಆದವರಿಗೆ ಮುಖ್ಯಮಂತ್ರಿಯಾಗಲು ಬೇರ್ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲವಾ ಎಂದು ಬಿಎಸ್ವೈ ಪುತ್ರ ವಿಜಯೇಂದ್ರ ಪ್ರಶ್ನಿಸಿದರು.
Published: 10th March 2020 11:33 PM | Last Updated: 10th March 2020 11:33 PM | A+A A-

ಸಿಎಂ ಬಿಎಸ್‌ವೈ ಅವರ ಪುತ್ರ ವಿಜಯೇಂದ್ರ
ಮಂಡ್ಯ: ದೇಶದಲ್ಲಿ ೭೫ ವರ್ಷ ಆದವರಿಗೆ ಮುಖ್ಯಮಂತ್ರಿಯಾಗಲು ಬೇರ್ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲವಾ ಎಂದು ಬಿಎಸ್ವೈ ಪುತ್ರ ವಿಜಯೇಂದ್ರ ಪ್ರಶ್ನಿಸಿದರು.
ಮದ್ದೂರಿನಲ್ಲಿಂದು ಸುದ್ದಿಗಾರರೊಂಧಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶಕ್ತಿ ಏನು ಎಂಬುದು ರಾಜ್ಯಕ್ಕೆ ತಿಳಿದಿದೆ ಎಂದು ತಿಳಿಸಿದರು.
ಬಿ.ಎಸ್ ಯಡಿಯೂರಪ್ಪರಿಗೆ ಶಕ್ತಿ ಇದೆ. ರಾಜ್ಯ ಸುತ್ತಾಡಿಸಮರ್ಥ ಆಡಳಿತ ನೀಡುತ್ತಿದ್ದಾರೆ. ಅವರು ಉತ್ತಮ ನಾಯಕತ್ವ ಗುಣಹೊಂದಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ಶೂನ್ಯಕ್ಕೆ ಎಡಭಾಗಕ್ಕೆ ಹತ್ತುಬಂದರೆ ನೂರು ಆಗಲಿದೆ. ಅಂತಹ ಬಲ ಹೊಂದಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪರ ಶಕ್ತಿ ಏನೆಂಬುದು ಬಿಜೆಪಿ ಹಾಗೂ ಪ್ರತಿಪಕ್ಷಗಳಿಗೂತಿಳಿದಿದೆ. ಮಂಡ್ಯ ಜಿಲ್ಲೆಯ ಮಗನಿಗೆ ರಾಜ್ಯ ಮುನ್ನಡೆಸುವ ಅವಕಾಶದೊರೆತಿದೆ ಎಂದರು.
ಮೈಷುಗರ್ ಆರಂಭದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಗೊಳ್ಳಲ್ಲಿದ್ದು ರೈತರಿಗೆನೆಮ್ಮದಿ ವಿಚಾರ ಸಿಗಲಿದೆ. ಬಜೆಟ್ನಲ್ಲಿ ಮಂಡ್ಯ ಜಿಲ್ಲೆ ಕಡೆಗಣಿಸಿಲ್ಲ. ಸದನದಲ್ಲಿ ಮುಖ್ಯಮಂತ್ರಿ ಉತ್ತರ ನೀಡಿಲ್ಲ. ಅವರು ಅನುದಾನ ಘೋಷಿಸುವವಿಶ್ವಾಸವಿದೆ. ಹಿಂದೆ ೨೦೦೮ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆಬಿ.ಎಸ್ ಯಡಿಯೂರಪ್ಪರ ಶಕ್ತಿ ರಾಜ್ಯಕ್ಕೆ ಗೊತ್ತಿದೆಏನನ್ನು WಇಂAμAuಇ ಮಾಡಿರಲಿಲ್ಲ ಆದರೂ ಸಹ ನೂರಾರು ಕೋಟಿಅನುದಾನ ನೀಡಿದ್ದರು. ಈಗಲೂ ಸಹ ಅನುದಾನ ಸಿಗಲಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಗೆದ್ದಿರಲಿಲ್ಲ. ಇದೀಗ ಜಿಲ್ಲೆಯ ಜನರಆರ್ಶಿವಾದದಿಂದ ನಾರಾಯಣಗೌಡ ಗೆದ್ದಿದ್ದಾರೆ. ಮಂತ್ರಿಯೂ ಆಗಿದ್ದಾರೆ.ಉಸ್ತುವಾರಿ ಸಚಿವರಾಗಿ ಕೂಡ ಬರಲಿದ್ದಾರೆ.ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಅವರ ನಾಯಕತ್ವದಲ್ಲಿ ಎದುರಿಸುತ್ತೇವೆ. ಪಕ್ಷದ ಆದೇಶದಂತೆ ಮುನ್ನಡೆಯುತ್ತೇವೆ ಎಂದರು.
ನಾಗಯ್ಯ