ಎಂಪಿ ರಾಜಕೀಯ ಬಿಕ್ಕಟ್ಟಿಗೆ ಟ್ರಬಲ್ ಶೂಟರ್ ನೋಎಂಟ್ರಿ: ಹೈಕಮಾಂಡ್  ಬಗ್ಗೆ ಡಿಕೆಶಿ ಹೇಳಿದ್ದಿಷ್ಟು!

ಆಪರೇಷನ್ ಕಮಲ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವಂತೆ ಪಕ್ಷದ ಹೈಕಮಾಂಡ್  ತಮಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವಂತೆ ಪಕ್ಷದ ಹೈಕಮಾಂಡ್  ತಮಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್‌ನ 22 ಶಾಸಕರು ತಮ್ಮ ಸಂಪರ್ಕದಲ್ಲಿದ್ದೂ ರಾಜೀನಾಮೆ ನಂತರವೂ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಬಹುಮತ ಸಾಬೀತುಪಡಿಸತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಅವರೆಲ್ಲಾ ನಮ್ಮ ಪಕ್ಷದ ಶಾಸಕರು ಅವರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅವರನ್ನು ಒಮ್ಮೆ ಉಚ್ಚಾಟಿಸಿದರೇ ಅವರರಾಜಕೀಯ ಜೀವನವೇ ಅಲುಗಾಡಿ ಹೋಗುತ್ತದೆ, ಅದು ಸುಲಂಭದ ಮಾತಲ್ಲ, ಕೋರ್ಟ್ ಗೆ ಹೋಗಬೇಕು,  ಮತ್ತೆ ಮರು ಆಯ್ಕೆಯಾಗಬೇಕು ಆಗ ಮಾತ್ರ ಮಂತ್ರಿಯಾಗಲು ಸಾಧ್ಯ ಎಂದು ಶಿವಕುಮಾರ್ ತಿಳಿಸಿದ್ದಾರೆ. 

ಬಿಜೆಪಿ ಸೇರಿದ ಕಾಂಗ್ರೆಸ್ ಮತ್ತು ಜೆಡಿ (ಎಸ್)  ಬಂಡಾಯ ಶಾಸಕರು ಹೇಗಲ್ಲಾ ಕಾನೂನು ಹೋರಾಟ ನಡೆಸಿದರು ಎಂಬುದು ನಮಗೆಲ್ಲಾ ತಿಳಿದಿದೆ ಎಂದು ಹೇಳಿದ್ದಾರೆ.

ಸದಾ ವಿವಾದದಲ್ಲೇ ಗುರುತಿಸಿಕೊಂಡು ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರಿಗೆ ತಮ್ಮ ತವರು ರಾಜ್ಯದಲ್ಲಿ ತಮ್ಮ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್.  ಅವರು ನಮ್ಮ ರಾಷ್ಟ್ರ ನಾಯಕರು, ನಾನು ಅವರ ಬಗ್ಗೆ ಯಾವುದೇ ಹೇಳಿಕೆ ನೀಡುವುದ್ಲಿಲ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಬಹುಮತವಿದ್ದು, ಬೆಂಗಳೂರಿನಲ್ಲಿರುವ ಶಾಸಕರು ಮತ್ತೆ ಪಕ್ಷಕ್ಕೆ ಮರಳುತ್ತಾರೆ  ಎಂದು ಶಿವಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com