ನನಗೆ ಇದು ಯಾವುದೂ  ಕಷ್ಟವಲ್ಲ, ಸಮಸ್ಯೆಯೂ ಅಲ್ಲ. ಹೇಗೆ ಪಕ್ಷ ಕಟ್ಟುತ್ತೇವೆ ನೋಡುತ್ತಾ ಇರಿ

ಆರೋಗ್ಯದ ದೃಷ್ಟಿಯಿಂದ ಅಭಿಮಾನಿಗಳು ಹೂವಿನ ಮಾಲೆ ಹಾಕುವುದು ಬೊಕ್ಕೆಗಳನ್ನು ತಂದು ಅಲರ್ಜಿ ಉಂಟು ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕರ್ತರೊಂದಿಗೆ ಡಿಕೆ ಶಿವಕುಮಾರ್
ಕಾರ್ಯಕರ್ತರೊಂದಿಗೆ ಡಿಕೆ ಶಿವಕುಮಾರ್

ಬೆಂಗಳೂರು: ಆರೋಗ್ಯದ ದೃಷ್ಟಿಯಿಂದ ಅಭಿಮಾನಿಗಳು ಹೂವಿನ ಮಾಲೆ ಹಾಕುವುದು ಬೊಕ್ಕೆಗಳನ್ನು ತಂದು ಅಲರ್ಜಿ ಉಂಟು ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ನನ್ನಮೇಲೆ ಪ್ರೀತಿ, ಅಭಿಮಾನ ಇದೆ. ಆದರೆ ಹೂವುಗಳ ಹಾರ ನನಗೆ ಆರೋಗ್ಯದ ದೃಷ್ಟಿಯಿಂದ ಅಲರ್ಜಿಯಾಗುತ್ತದೆ. ದಯವಿಟ್ಟು ಕಾರ್ಯಕರ್ತರು ಹಣವನ್ನುದುಂದುವೆಚ್ಚ ಮಾಡಬೇಡಿ. ತಳಮಟ್ಟದಿಂದ, ಬೂತ್ ಮಟ್ಟದಿಂದ ನಾವು ಪಕ್ಷವನ್ನು ಕಟ್ಟಬೇಕಿದೆ, ಅದಕ್ಕಾಗಿ ನಿಮ್ಮ ಹಣವನ್ನು ಹೂವುಗಳಿಗಾಗಿ ವ್ಯರ್ಥ ಮಾಡಬೇಡಿ. ಸುಮ್ಮನೆ ಬಂದು ಸಿಹಿತಿಂಡಿ , ಕೇಕ್ ತಿನ್ನಿಸುವುದು ಎಲ್ಲ ಬೇಡ ಎಂದರು.

ರಾಜ್ಯ ಕಾಂಗ್ರೆಸ್ ನಲ್ಲಿ ಸಮಸ್ಯೆ ಇದೆ ಎಂದು ಭಾವಿಸಿದರೆ  ಅದು ಸಮಸ್ಯೆಯೇ. ಸಮಸ್ಯೆ ಇಲ್ಲ ಅಂದುಕೊಂಡರೆ ಸಮಸ್ಯೆ ಇಲ್ಲ. ನನಗೆ ಇದು ಯಾವುದೂ  ಕಷ್ಟವಲ್ಲ, ಸಮಸ್ಯೆಯೂ ಅಲ್ಲ. ಹೇಗೆ ಪಕ್ಷ ಕಟ್ಟುತ್ತೇವೆ ನೋಡುತ್ತಾ ಇರಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com