ಜನಾರ್ದನ ರೆಡ್ಡಿ ಆಪರೇಷನ್ ಹರಿಕಾರ: ಶಿವಕುಮಾರ್ ರೆಸಾರ್ಟ್ ರಾಜಕೀಯದ ವೀರ!

ಜನಾದೇಶವನ್ನು ಉಲ್ಲಂಘಿಸಿ 2004ರಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮದೇ ಪಕ್ಷದ ಶಾಸಕರನ್ನು ರೆಸಾರ್ಟ್ ನಲ್ಲಿರಿಸಿದರು. ಅಲ್ಲಿಂದ ಶುರುವಾದ ಈ ರೆಸಾರ್ಟ್ ರಾಜಕೀಯ ಇಲ್ಲಿಯವರೆಗೂ ಮುಂದುವರಿದಿದೆ.
ಶಿವಕುಮಾರ್ ಮತ್ತು ಜನಾರ್ದನ ರೆಡ್ಡಿ
ಶಿವಕುಮಾರ್ ಮತ್ತು ಜನಾರ್ದನ ರೆಡ್ಡಿ

ಬೆಂಗಳೂರು: ಜನಾದೇಶವನ್ನು ಉಲ್ಲಂಘಿಸಿ 2004ರಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮದೇ ಪಕ್ಷದ ಶಾಸಕರನ್ನು ರೆಸಾರ್ಟ್ ನಲ್ಲಿರಿಸಿದರು. ಅಲ್ಲಿಂದ ಶುರುವಾದ ಈ ರೆಸಾರ್ಟ್ ರಾಜಕೀಯ ಇಲ್ಲಿಯವರೆಗೂ ಮುಂದುವರಿದಿದೆ. ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯ ಆಪರೇಷನಿ ಕಮಲದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತದೆ.

ಪಕ್ಷದಿಂದ ಬಹಿಷ್ಕಾರಗೊಂಡಿರುವ ರೆಡ್ಡಿ ನೆರಳು ಬಿಜೆಪಿಯಲ್ಲಿ ಇಂದಿಗೂ ಮುಂದುವರಿದಿದೆ. 2008ರಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್  ನ 7 ಶಾಸಕರ ಮನವೊಲಿಸಿ  ಪಕ್ಷ ತೊರೆಯುವಂತೆ ಮಾಡಿ ಬಿಜೆಪಿ ಸೇರುವಂತೆ ಮಾಡಿದ ರೆಡ್ಡಿ ಆಪರೇಷನ್ ಕಮಲಕ್ಕೆ ಬುನಾದಿ ಹಾಕಿದರು. ಅಂದಿನಿಂದ ಇಂದಿನವರೆಗೆ ಅಂದರೆ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಅಲುಗಾಡುತ್ತಿರುವುದು ಇದೇ ಆಪರೇಷನ್ ಕಮಲದ ಕಾರಣದಿಂದ.  

2002 ರಿಂದ 2017  ರಲ್ಲಿ ಹೊಸದಾಗಿ ನೇಮಕಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಾಸಕರನ್ನು ಜಾಗ್ರತೆ ವಹಿಸಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದರು.

ಆದಾಯತೆರಿಗೆ ಇಲಾಖೆ ದಾಳಿಯ ನಡುವೆಯು ಶಿಕುಮಾರ್ 44 ಗುಜರಾತ್ ಕಾಂಗ್ರೆಸ್ ಶಾಸಕರನ್ನುಸೇಫ್ ಮಾಡಿ, ರಾಜ್ಯಸಭೆಗೆ ಅಹ್ಮದ್ ಪಟೇಲ್ ಅವರನ್ನು ಆಯ್ಕೆ ಮಾಡಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

ಮತ್ತೆ 2018 ರ ರಾಜ್ಯ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಶಾಸಕರನ್ನು  ಒಗ್ಗೂಡಿಸಿದ್ದರು. ನಂತರ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನೆರವಾಗಿದ್ದರು. 

ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿರುವ ಶಾಸಕ ಜಮೀರ್ ಅಹ್ಮದ್ ಶಾಸಕರನ್ನು ರೆಸಾರ್ಟ್ ಗೆ ಸಾಗಿಸಲು ಡ್ರೈವರ್ ಆಗಿದ್ದರು. ಎಂಬಿ ಪಾಟೀಲ್ ಮತ್ತು ಕೆಜೆ ಜಾರ್ಜ್ ರೆಸಾರ್ಟ್ ರಾಜಕೀಯ ಪರ್ಫೆಕ್ಟ್ ಆದಗಿ ಯಶಸ್ವಿಯಾಗುವಂತೆ ಮಾಡಿದ್ದರು. 

ಈ ವೇಳೆ ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯಕ್ಕೆ  ಎಂಎಲ್ ಸಿ ಶರವಣ ಮತ್ತು ಬಿಎಂ ಫಾರೂಕ್ ಧನ ಸಹಾಯ ಮಾಡಿದ್ದರು.

ಇದಾದ ನಂತರ ರೆಡ್ಡಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಬಿಜೆಪಿ ರೆಸಾರ್ಟ್ ನಲ್ಲಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರನ್ನು ರೆಸಾರ್ಟ್ ನಿಂದ ಎಸ್ಕೇಪ್ ಮಾಡಿಸಿತ್ತು. ಅಲ್ಲಿಂದ ಲ್ಮಣ ಸವದಿ ಅವರ ಜೊತೆಗೂಡಿದ್ದ ಪಾಟೀಲ್ ಮುಂಬೈಗೆ ಹಾರಿದ್ದರು.  ಇದಕ್ಕಾಗಿ ಸವದಿ ಅವರಿಗೆ ಡಿಸಿಎಂ ಪಟ್ಟ ನೀಡಲಾಗಿದೆ.

ಜೆಡಿಎಸ್ ಕಾಂಗ್ರೆಸ್ ನ 17 ಶಾಸಕರನ್ನು ಮುಂಬಯಿಯಲ್ಲಿ ಸರಿಯಾಗಿ ಹಿಡಿದಿಟ್ಟಿದ್ದ ಕೀರ್ತಿ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಸಲ್ಲುತ್ತದೆ, ಇದರ ಋಣಕ್ಕಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ.

ಇನ್ನೂ ಮಧ್ಯಪ್ರದೇಶದಲ್ಲಿ ಆಪರೇಷನ್ ಗೆ ಕೈ ಹಾಕಿರುವ ಕಮಲ ಪಕ್ಷದ ನಾಯಕರು ಅಲ್ಲಿನ ಕಾಂಗ್ರೆಸ್ ಶಾಸಕರ ಜವಾಬ್ದಾರಿಯನ್ನು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ವಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com