'ಪ್ರಮಾಣ ಮಾಡುತ್ತೇನೆ,  ಬಿಎಸ್ ವೈ ವಿರುದ್ಧ ಅನಾಮಧೇಯ ಪತ್ರ ಬರೆದವನು ನಾನಲ್ಲ'

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧವಾಗಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅನಾಮಧೇಯ ಪತ್ರಗಳು ವರಿಷ್ಠರನ್ನು ಕಂಗೆಡಿಸಿರುವಾಗಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಎನ್‌.ಆರ್‌.ಸಂತೋಷ್‌ ...
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕೆಲವು ದಿನಗಳಿಂದ ‘ಪತ್ರ ವ್ಯವಹಾರದ’ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. 

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧವಾಗಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅನಾಮಧೇಯ ಪತ್ರಗಳು ವರಿಷ್ಠರನ್ನು ಕಂಗೆಡಿಸಿರುವಾಗಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಎನ್‌.ಆರ್‌.ಸಂತೋಷ್‌ ಭಾನುವಾರ ಬಿಡುಗಡೆ ಮಾಡಿರುವ ಪತ್ರ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.

ಅನಾಮಧೇಯ ಪತ್ರಗಳಿಗೆ ಸಂತೋಷ್‌ ಅವರೇ ಕಾರಣ ಎಂಬ ಅರ್ಥದಲ್ಲಿ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಮಜಾಯಿಷಿ ನೀಡುವ ಧಾಟಿಯ ಪತ್ರ ಬರೆದಿದ್ದಾರೆ. 

‘ಕಳೆದ ಕೆಲವು ದಿನಗಳಿಂದ ನಾನು ಹೊರಗೆ ಕಾಣಿಸಿಕೊಳ್ಳದೇ ಅಂತರ್ಮುಖಿಯಾಗಿದ್ದೇನೆ. ಕಳೆದ 8–9 ವರ್ಷಗಳಲ್ಲಿ ಯಾವುದೇ ವಿಶ್ವವಿದ್ಯಾಲಯಗಳಲ್ಲಿಯೂ ಕಲಿಸದ ಪಾಠವನ್ನು ನನ್ನ ಗುರು ಬಿಎಸ್‌ವೈ ಕಲಿಸಿದ್ದಾರೆ. ರಾಜ್ಯವನ್ನು ಅವರ ನೆರಳಿನಂತೆ ಸಾಕಷ್ಟು ಬಾರಿ ಸುತ್ತಿದ್ದೇನೆ’ ಎಂದಿದ್ದಾರೆ.

‘ನಾಡಿನ ಕೋಟ್ಯಂತರ ಜನರ ಆಶಯದಂತೆ ಬಿಜೆಪಿ ಸರ್ಕಾರ ನಿರಾತಂಕವಾಗಿ ಅವಧಿ ಪೂರೈಸಬೇಕು ಎಂದು ಆಶಿಸುತ್ತಿದ್ದೇನೆ. ನನ್ನ ವಿರುದ್ಧ ಯಾರದೋ ಚಿತಾವಣೆಯಿಂದ ಸುಳ್ಳು ಆರೋಪ ಹೊರಿಸಲಾಗುತ್ತಿದೆ.  ನಾನು ಯಾರಿಗೂ ಬಹಿರಂಗವಾಗಿ ಯಾವುದೇ ಅನಾಮಧೇಯ ಪತ್ರ ಬರೆದಿಲ್ಲ, ದೂರು ನೀಡಲು ಯಾರ ಜತೆಗೂ ದೆಹಲಿಗೆ ಹೋಗಿಲ್ಲ’ ಎಂದು ಹೇಳಿದ್ದಾರೆ.

‘ಅಪಪ್ರಚಾರದಿಂದ ವೈಯಕ್ತಿಕವಾಗಿ ನೋವಾಗಿದೆ. ಇದನ್ನು ಹಿರಿಯರ ಗಮನಕ್ಕೆ ತಂದಿದ್ದೇನೆ. ಅವರು ಮಾರ್ಗದರ್ಶನ ಮಾಡಿದಂತೆ ನಡೆದುಕೊಳ್ಳುತ್ತೇನೆ. ನನಗೆ ತಿಳಿದಂತೆ ಗುರು ದೂಷಣೆ ಮಾಡಬಾರದು ಆದ್ದರಿಂದ, ಗುರುವಿನಿಂದ ದೂರ ಉಳಿದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಹಾಗೂ ಬಿಎಸ್‌ವೈ ವಿರುದ್ಧ ದೂರು ಹೇಳಲು ದೆಹಲಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com