ಭ್ರಷ್ಟಾಚಾರದಿಂದ ಹಣ ಸಂಪಾದಿಸಿದ್ದೇನೆ ಅಂತ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ ಸವಾಲು

ಪ್ರತಿ ನಾಗರಿಕನಿಗೂ ರಕ್ಷಣೆ ಕೊಡುವ ಸಂವಿಧಾನ ನಮಗೆ ದೊರೆತಿರುವ ಕಾರಣದಿಂದಲೇ 70 ವರ್ಷಗಳಲ್ಲಿ ಸಾಕಷ್ಟು ಸಾಧನೆ  ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಟೀಕೆಗಾಗಿ, ಟೀಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ಪ್ರತಿ ನಾಗರಿಕನಿಗೂ ರಕ್ಷಣೆ ಕೊಡುವ ಸಂವಿಧಾನ ನಮಗೆ ದೊರೆತಿರುವ ಕಾರಣದಿಂದಲೇ 70 ವರ್ಷಗಳಲ್ಲಿ ಸಾಕಷ್ಟು ಸಾಧನೆ  ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಟೀಕೆಗಾಗಿ, ಟೀಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರ ಪ್ರತಿಕ್ರಿಯೆ ನೋಡಿದರೆ ಅಂಬೇಡ್ಕರ್ ಅವರಿಗೆ ಗೌರವ ನೀಡುತ್ತಿದ್ದೇವೆಯೇ?. ಅಂಬೇಡ್ಕರ್ ಕೊಟ್ಟ ಮಹಾನ್ ಗ್ರಂಥವನ್ನು ಅನುಷ್ಠಾನಕ್ಕೆ ತರುವಲ್ಲಿ ಆಳುವವರಾದ ನಾವು  ಎಡವಿದ್ದು, ಸಂವಿಧಾನಕ್ಕೆ ಗೌರವ ಸಲ್ಲಿಸುವಂತೆ ನಾವು ನಡೆದುಕೊಂಡಿದ್ದೇವೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದರು.

ಸದನದಲ್ಲಿರುವ  ಹಲವು ಸದಸ್ಯರು ಅಂಬೇಡ್ಕರ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಿದ್ದಾರೆ. ಅಂಬೇಡ್ಕರ್ ಯಾವಗಲೂ ಚಿರ ಸ್ಮರಣೀಯರು. ಸಾಮಾಜಿಕ, ಆರ್ಥಿಕ, ಸಮಾನತೆ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಅತ್ಯಂತ ಪ್ರಬುದ್ಧವಾದ, ಎಲ್ಲಾ ಜನರಿಗೂ ರಕ್ಷಣೆ ನೀಡುವಂತ ಸಂವಿಧಾನವನ್ನು ಅಂಬೇಡ್ಕರ್ ಅವರ ತಂಡ ನೀಡಿದೆ.

ಆದರೆ, ಇತ್ತೀಚೆಗೆ ನನಗೆ ಕೆಲವೊಂದು ಅನುಮಾನಗಳು ಕಾಡ ತೊಡಗಿವೆ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾವು  ಕೇವಲ  ಶೋ ಪೀಸ್ ಆಗಿ ಇಟ್ಟಿದ್ದೇವೆಯೋ ಅಥವಾ ಮೂಲಭೂತ ಹಕ್ಕುಗಳ ವಿಚಾರದಲ್ಲಿ ನಾವು ಎಡವಿದ್ದೇವೆಯೋ ಎಂಬ ಪ್ರಶ್ನೆ ಮೂಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com