ಕೊರೋನಾ ವೈರಸ್: ಅಧಿವೇಶನ ಮುಂದೂಡುವಂತೆ ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜನತೆ ಸ್ವಯಂ ಪ್ರೇರಿತವಾಗಿ ನಿರ್ಬಂಧಗಳನ್ನು ಪಾಲಿಸುವಂತೆ ಜನತೆಗೆ ಹೇಳುತ್ತಿರುವ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕು...
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜನತೆ ಸ್ವಯಂ ಪ್ರೇರಿತವಾಗಿ ನಿರ್ಬಂಧಗಳನ್ನು ಪಾಲಿಸುವಂತೆ ಜನತೆಗೆ ಹೇಳುತ್ತಿರುವ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

"ಸರ್ಕಾರ ಹೇಳುವುದು ಒಂದು ಮಾಡುವುದು ಮತ್ತೊಂದು" ಎಂಬಂತಾಗಿದೆ. ಅಧಿವೇಶನ ಸಾರ್ವಜನಿಕರ ಜಿಜ್ಞಾಸೆಗೆ ಒಳಗಾಗಬಾರದು. ನೂರಾರು ಮಂದಿ ಒಂದೆಡೆ ಸೇರಬಾರದು ಎಂದು ತಾಕೀತು ಮಾಡುವ ಸರ್ಕಾರ ನೂರಾರು ಜನ ಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾಮಾನ್ಯ ಜನತೆ ಒಂದೇ ಕಡೆ ಸಮಾವೇಶಗೊಳ್ಳುವ ಅಧಿವೇಶನ ನಡೆಸುವುದು ವಾಸ್ತವ ಪರಿಸ್ಥಿತಿಯಲ್ಲಿ ಸರಿಯಲ್ಲ ಎಂದು ಅವರು ಟ್ವೀಟ್ ನಲ್ಲಿ ಸರ್ಕಾರಕ್ಕೆ ತಿವಿದಿದ್ದಾರೆ. 

ಕಳೆದ ಫೆಬ್ರವರಿಯಿಂದಲೇ ವೈದ್ಯಕೀಯ ವೃಂದದವರು, ಪೊಲೀಸರು, ಪೌರಕಾರ್ಮಿಕರು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಇವರಿಗೆ ಸರ್ಕಾರ ಫೆಬ್ರವರಿಯಿಂದ ಆರಂಭಿಸಿ, ಕೊರೋನಾ ವೈರಸ್ ವಿರುದ್ಧ ಹೋರಾಟ ಮುಕ್ತಾಯವಾಗುವತನಕ ಪ್ರತಿ ತಿಂಗಳು ಇವರೆಲ್ಲರಿಗೂ ಪ್ರೋತ್ಸಾಹ ಧನ ನೀಡಬೇಕು. ಅವರ ಧೈರ್ಯ, ತ್ಯಾಗಕ್ಕೆ ಸರ್ಕಾರ ಮನ್ನಣೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com