ಇದೊಂದು ಮಾನ‌ ಮರ್ಯಾದೆ ಇಲ್ಲದ ಸರ್ಕಾರ: ಸಿದ್ದರಾಮಯ್ಯ ವಾಗ್ದಾಳಿ

ಸರ್ಕಾರಕ್ಕೆ ನಾಲ್ಕು ತಿಂಗಳಿಗೆ ಮುಂಗಡ ಲೇಖಾನುದಾನ ತೆಗೆದುಕೊಂಡು ಮತ್ತೆ ಜೂನ್‌ನಲ್ಲಿ ಅಧಿವೇಶನ ಕರೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಒಪ್ಪಿಗೆ ಪಡೆಯಲು ಸೂಚಿಸಲಾಗಿತ್ತಾದಾರೆ ಸರ್ಕಾರ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದೊಂದು ಮಾನಗೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Published: 24th March 2020 01:12 PM  |   Last Updated: 24th March 2020 01:12 PM   |  A+A-


Siddaramaaiah

ಸಿದ್ದರಾಮಯ್ಯ

Posted By : Shilpa D
Source : UNI

ಬೆಂಗಳೂರು: ಸರ್ಕಾರಕ್ಕೆ ನಾಲ್ಕು ತಿಂಗಳಿಗೆ ಮುಂಗಡ ಲೇಖಾನುದಾನ ತೆಗೆದುಕೊಂಡು ಮತ್ತೆ ಜೂನ್‌ನಲ್ಲಿ ಅಧಿವೇಶನ ಕರೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಒಪ್ಪಿಗೆ ಪಡೆಯಲು ಸೂಚಿಸಲಾಗಿತ್ತಾದಾರೆ ಸರ್ಕಾರ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದೊಂದು ಮಾನಗೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸಭೆ ಸಭಾತ್ಯಾಗ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಅಧ್ಯಕ್ಷರು ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವುದರಿಂದ ವಿಧಾನಸಭೆ ಮುಂದೂಡಬೇಕು. ಸಂಸತ್ತು ಕೂಡ ಮುಂದೂಡಲಾಗಿದೆ. 

ಹೀಗಾಗಿ ಸದನ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಮಾ ,27,28. ರ ವರೆಗೆ ನಡೆಸುವಂತೆ ಪ್ರಸ್ತಾಪ ಮುಂದಿಟ್ಟಿದ್ದರು. ಬಜೆಟ್ ಹಾಗೂ ಬೇಡಿಕೆ ಮೇಲೆ ಚರ್ಚೆಗೆ ಎರಡೂ ಒಂದೆ ಬಾರಿ ಇಟ್ಟಿದ್ದರು. ಅದಕ್ಕೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಡಬೇಕು. 

ಹೀಗಾಗಿ ಸಮಯ ಬಹಳ ಬೇಕು. ಕೊರೊನಾ ವೈರಸ್ ಹರಡುವಿಕೆ ಜೋರಾಗಿರುವುದರಿಂದ ಅಧಿವೇಶನವನ್ನು ನಡೆಸುವುದು ಸೂಕ್ತ ಅಲ್ಲ ಎನ್ನುವ ಕಾರಣಕ್ಕೆ ಬಜೆಟ್ ಗೆ ಒಪ್ಪಿಗೆ ಕೊಡುತ್ತೇವೆ ಸದನ ಮುಂದೂಡಿ ಎಂದು ಸಲಹೆ ನೀಡಿದೆವು. ಆದರೆ ಅವರು ಅನೇಕ ಬಿಲ್ ಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ಖಡಕ್ ಆಗಿ‌ ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp