ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂದಿನ ತಿಂಗಳು ವಿಧಾನ ಪರಿಷತ್ ಚುನಾವಣೆ ಅಸಂಭವ: ನಿರೀಕ್ಷೆಯಲ್ಲಿ ಅಭ್ಯರ್ಥಿಗಳು

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಮುಂದೂಡಲ್ಪಟ್ಟಿದ್ದು ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್‌ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿದೆ. 

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಮುಂದೂಡಲ್ಪಟ್ಟಿದ್ದು ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್‌ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿದೆ. 

ಜೂನ್‌ 2ನೇ ವಾರದಲ್ಲಿ ಖಾಲಿಯಾಗುವ 16 ವಿಧಾನ ಪರಿಷತ್‌ ಸ್ಥಾನ, 4 ರಾಜ್ಯಸಭೆ ಸ್ಥಾನಕ್ಕೆ ಜೂನ್‌ ಮಾಸಾಂತ್ಯದೊಳಗೆ ಚುನಾವಣೆ ನಡೆಸಿ ಹೊಸ ಸದಸ್ಯರು ಆಯ್ಕೆಯಾಗಬೇಕು.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ಜಯಮಾಲಾ, ಎಸ್‌ ಎನ್‌.ಭೋಸರಾಜ್‌, ಎಚ್‌.ಎಂ. ರೇವಣ್ಣ, ನಜೀರ್‌ ಅಹ್ಮದ್‌, ಎಂ.ಸಿ.ವೇಣುಗೋಪಾಲ್‌(ಕಾಂಗ್ರೆಸ್‌)   ಟಿ.ಎ.ಶರವಣ (ಜೆಡಿಎಸ್‌) ಡಿ.ಯು.ಮಲ್ಲಿಕಾರ್ಜುನ (ಪಕ್ಷೇತರ) ಅವರ ಅಧಿಕಾರ ಕೊನೆಗೊಳ್ಳುತ್ತದೆ.

 ಕೆ.ಅಬ್ದುಲ್‌ ಜಬ್ಟಾರ್‌, ಜಯಮಾಲಾ, ಇಕ್ಬಾಲ್‌ ಅಹಮದ್‌ ಸರಡಗಿ, ಐವಾನ್‌ ಡಿಸೋಜಾ, ತಿಮ್ಮಣ್ಣ ಕಮಕನೂರು, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶರಣಪ್ಪ ಮಟ್ಟೂರ್‌ (ಕಾಂಗ್ರೆಸ್‌) ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ (ಜೆಡಿಎಸ್‌), ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್‌.ವಿ.ಸಂಕನೂರ್‌ ( ಬಿಜೆಪಿ)  ಆಗ್ನೇಯ ಪದವೀಧರ ಕ್ಷೇತ್ರದಿಂದ ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್‌) ಇವರ ಸ್ಥಾನಗಳು ತೆರವಾಗಲಿದ್ದು ಜೂನ್ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು.

ಚುನಾವಣೆ ನಡೆಸಲು ಸುಮಾರು ನಾಲ್ಕು ವಾರಗಳ ಕಾಲಾವಕಾಶ ಬೇಕಿದೆ,  ಶಿಕ್ಷಕರ ಕ್ಷೇತ್ರ ಮತ್ತು ಪದವಿದರರ ಕ್ಷೇತ್ರಗಳ ಚುನಾವಣಾ ಪೂರ್ವ ತಯಾರಿಗೆ  4 ರಿಂದ 5 ವಾರಗಳ ಸಮಯ ಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೇ ನಲ್ಲಿ ಕೇವಲ 2 ವಾರಗಳ ಸಮಯವಿದೆ, ಹೀಗಾಗಿ ಚುನಾವಣೆ ನಡೆಸಲು ಇದು ಸಕಾಲವಲ್ಲ ಎಂದು ಆಯೋಗ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com