ಮರೆಯಾದ ವೈರತ್ವ: ಡಿಕೆ ಶಿವಕುಮಾರ್ ಜೊತೆ ಹುಟ್ಟುಹಬ್ಬದ ಊಟ ಸವಿದ ದೇವೇಗೌಡರು!

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೆಡಿಎಸ್ ಪರಮೋಚ್ಚ ನಾಯಕ ಎಚ್.ಡಿ ದೇವೇಗೌಡ ಈ ಬಾರಿ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡರು.  ಈ ಬಾರಿ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ, ಹೀಗಾಗಿ ಬೆಂಬಲಿಗರು ಮತ್ತು ಅಭಿಮಾನಿಗಳು ಮನೆ ಹತ್ತಿರ ಬರಬಾರದೆಂದು ದೇವೇಗೌಡರು  ಪತ್ರದ ಮೂಲಕ ಮನವಿ ಮಾಡಿದ್ದರು.
ದೇವೇಗೌಡರ ಜೊತೆ ಶಿವಕುಮಾರ್ ಭೋಜನ
ದೇವೇಗೌಡರ ಜೊತೆ ಶಿವಕುಮಾರ್ ಭೋಜನ

ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೆಡಿಎಸ್ ಪರಮೋಚ್ಚ ನಾಯಕ ಎಚ್.ಡಿ ದೇವೇಗೌಡ ಈ ಬಾರಿ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡರು. ಈ ಬಾರಿ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ, ಹೀಗಾಗಿ ಬೆಂಬಲಿಗರು ಮತ್ತು ಅಭಿಮಾನಿಗಳು ಮನೆ ಹತ್ತಿರ ಬರಬಾರದೆಂದು ದೇವೇಗೌಡರು  ಪತ್ರದ ಮೂಲಕ ಮನವಿ ಮಾಡಿದ್ದರು,

ಆದರೂ ಪಕ್ಷದ ಕಚೇರಿಯಲ್ಲಿ ಅವರ ಬೆಂಬಲಿರು 88 ಕೆಜಿ ತೂಕದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹು ದೊಡ್ಡ ಸವಾಲಾಗಿತ್ತು.  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮನೆಗೆ ಹಲವು ಗಣ್ಯರು ಬಂದು ಶುಭಾಶ ಕೋರಿದರು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಮಧ್ಯಾಹ್ನದ  ಭೋಜನ ಸವಿದರು.

ಶುಭಾಶಯ ಕೋರಲು ಡಿಕೆಶಿವಕುಮಾರ್ ದೊಡ್ಡಗೌಡರ ನಿವಾಸಕ್ಕೆ ಆಗಗಮಿಸಿದ್ದರು. ಈ ವೇಳೆ ಊಟ ಮಾಡಿಕೊಂಡು ಹೋಗುವಂತೆ ದೇವೇಗೌಡರು ನೀಡಿದ ಆಹ್ವಾನವನ್ನು ಶಿವಕುಮಾರ್ ಅವರಿಗೆ ನಿರಾಕರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮಾಜಿ ಪ್ರಧಾನಿಗಳ ಜೊತೆ ಊಟ ಸವಿದರು. ಬಾಳೆ ಎಲೆಯಲ್ಲಿ ದಕ್ಷಿಣ ಭಾರತದ ಶೈಲಿಯ ಊಟ ಬಡಿಸಲಾಯಿತು. ಇಬ್ಬರು ಜೊತೆಯಾಗಿ ಕುಳಿತು ಭೋಜನ ಸವಿದರು, ಇದೇ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ ಕೂಡ  ಗೌಡರ ಮನೆಗೆ ಭೇಟಿ ನೀಡಿ ಶುಭ ಕೋರಿದರು.

ಶಿವಕುಮಾರ್  1989 ರಲ್ಲಿ ದೇವೇಗೌಡರನ್ನು ಹಾಗೂ 1999ರಲ್ಲಿ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಇನ್ನು 2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿತ್ವಕ್ಕೆ ತರುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ದೇವೇಗೌಡರ 88ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 88 ಜೆಡಿಎಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com