ಕಲ್ಲಡ್ಕ ಯುವಕನ ಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದು ನಾನಲ್ಲ, ವೈರಲ್ ಟ್ವೀಟ್ 'ನಕಲಿ' ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ!

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವ್ಯಕ್ತಿತ್ವಕ್ಕೆ ಕಳಂಕ  ತರುವ ಮತ್ತು ಸಮಾಜದಲ್ಲಿ ಸಾಮಾಜಿಕ  ಶಾಂತಿ  ಭಂಗಗೊಳಿಸುವ ಉದ್ದೇಶದಿಂದ ದುಷ್ಕರ್ಮಿಗಳು ಅವರ ಹೆಸರಲ್ಲಿ  ನಕಲಿ ಟ್ವೀಟ್‌ಗಳನ್ನು ಹರಡುತ್ತಿದ್ದಾರೆ ಎಂದು ಶೋಭಾ ಅವರು ಆರೋಪಿಸ್ದ್ದಾರೆ. ಅಲ್ಲದೆ ಈ ಕುರಿತಂತೆ ಪ್ರಕರಣದಲ್ಲಿ ಭಾಗಿಯಾದವರನ್ನು  ಕೂಡಲೇ ಬಂಧಿಸುವಂತೆ ಮಂಗಳೂರು ನಗರ ಪೊಲ
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವ್ಯಕ್ತಿತ್ವಕ್ಕೆ ಕಳಂಕ  ತರುವ ಮತ್ತು ಸಮಾಜದಲ್ಲಿ ಸಾಮಾಜಿಕ  ಶಾಂತಿ  ಭಂಗಗೊಳಿಸುವ ಉದ್ದೇಶದಿಂದ ದುಷ್ಕರ್ಮಿಗಳು ಅವರ ಹೆಸರಲ್ಲಿ  ನಕಲಿ ಟ್ವೀಟ್‌ಗಳನ್ನು ಹರಡುತ್ತಿದ್ದಾರೆ ಎಂದು ಶೋಭಾ ಅವರು ಆರೋಪಿಸ್ದ್ದಾರೆ. ಅಲ್ಲದೆ ಈ ಕುರಿತಂತೆ ಪ್ರಕರಣದಲ್ಲಿ ಭಾಗಿಯಾದವರನ್ನು  ಕೂಡಲೇ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.

ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಸಾವಿಗೆ ಸಂಬಂಧಿಸಿದ ತನ್ನ ಟ್ವೀಟ್ ಬಗ್ಗೆ ಪ್ರತಿಕ್ರಯಿಸಿರುವ ಸಂಸದೆ ಶೋಬಾ ಟ್ವೀಟ್ ಸುದ್ದಿ ನಕಲಿ ಎಂದು ಹೇಳಿದ್ದಾರೆ.

ಮೇ 24 ರ ಭಾನುವಾರ, ನಿಶಾಂತ್ ಪಾಣಿಮಂಗಳೂರಿನಲ್ಲಿ  ನದಿಗೆ ಹಾರಿ ಆತ್ಮಹತ್ಯೆ ಂಆಡಿಕೊಂಡಿದ್ದಾರೆ ಆ ವೇಳೆ ಸ್ಥಳದಲ್ಲಿದ್ದ ನಾಲ್ವರು ಮುಸ್ಲಿಂ ಯುವಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಸಾವನ್ನಪ್ಪಿದ್ದಾನೆ. 

ಆದರೆ ಈ ಕುರಿತಂತೆ ಶೋಭಾ ಕರಂದ್ಲಾಜೆ  ಮಾಡಿದ್ದರೆನ್ನಲಾದ ಟ್ವಿಟ್ ನಲ್ಲಿ  ಹಿಂದೂ ಸಂಘಟನೆಗೆ ಸೇರಿದ ಕಲ್ಲಡ್ಕದ ನಿಶಾಂತ್ ಎನ್ನುವ ಯುವಕನನ್ನು ಜಿಹಾದಿಗಳು ಹತ್ಯೆ ಮಾಡಿದ್ದಾರೆ ಬಂಧಪಟ್ಟ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಮಿತ್ ಷಾ ಅವರನ್ನು ಕೇಳಿಕೊಂಡಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆಯಲಾಗಿತ್ತು. 

ಆದರೆ ತಾನು ಅಂತಹಾ ಯಾವ ಟ್ವೀಟ್ ಮಾಡಿಲ್ಲ ಎಂದು ಸಂಸದೆ ಶೋಭಾ  ಹೇಳಿದ್ದು "ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಎಡಿಟೆಡ್ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ.

"ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ & ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೋಲೀಸರಿಗೆ ಸೂಚಿಸಲಾಗಿದೆ. " ಎಂದಿದ್ದಾರೆ. 

ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು 'ಜಿಹಾದಿಗಳು' ನಡೆಸಿದ ಪಿತೂರಿಗೆ ಕಾಂಗ್ರೆಸ್ ಮುಖಂಡರು ನೀಡಿದ ಬೆಂಬಲವು ಅವರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದ್ದಾರೆ.. ಈ ಕೃತ್ಯದ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರನ್ನು  ಬಂಧಿಸಿ ಎಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.s

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com