ಕೊರೋನಾ ಬಿಕ್ಕಟ್ಟಿನ ನಡುವಲ್ಲೇ ರಾಜ್ಯದಲ್ಲಿ ಪುನಶ್ಚೇತನದತ್ತ ಕಾಂಗ್ರೆಸ್!

ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲು, ಜೆಡೆಎಸ್ ಜೊತೆಗಿನ ಮೈತ್ರಿ ಕಡಿದುಕೊಂಡ ಬಳಿಕ ಬಹುತೇಕ ಕೋಮಾಗೆ ಜಾರಿದ್ದ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೇಳಲು ಆರಂಭಿಸಿದೆ. 
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲು, ಜೆಡೆಎಸ್ ಜೊತೆಗಿನ ಮೈತ್ರಿ ಕಡಿದುಕೊಂಡ ಬಳಿಕ ಬಹುತೇಕ ಕೋಮಾಗೆ ಜಾರಿದ್ದ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೇಳಲು ಆರಂಭಿಸಿದೆ. 

ಕೊರೋನಾ ಬಿಕ್ಕಟ್ಟಿನ ನಡುವಲ್ಲೇ ಜನರಿಗೆ ಹತ್ತಿರವಾಗಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಕಾಂಗ್ರೆಸ್, ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಕಾರ್ಮಿಕರ ರೈಲು ಪ್ರಯಾಣ ವೆಚ್ಚಕ್ಕೆ ರೂ.2 ಕೋಟಿ ನೀಡುವುದಾಗಿ ತಿಳಿಸಿದ್ದರು. 

ಇದಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜನರಿಗೆ ಅಗತ್ಯವಿರುವ ವಸ್ತುಗಳು, ಆಹಾರ ಪ್ಯಾಕೆಟ್ ಗಳು, ಹಣ ಸಹಾಯ ಸೇರಿದಂದೆ ಇತರೆ ಕೊರೋನಾ ಪರಿಹಾರ ಚಟುವಟಿಕೆಗಳನ್ನೂ ಆರಂಭಿಸಿದ್ದಾರೆ. ಜನರ ಗಮನ ತನ್ನತ್ತ ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಈ ನಡುವಲ್ಲೇ ಯಾವುದೇ ರೀತಿಯ ವಿವಾದಗಳನ್ನು ಮೇಲೆಳೆದುಕೊಳ್ಳದಂತೆಯೂ ಪಕ್ಷ ಸಾಕಷ್ಟು ಎಚ್ಚರಿಕೆ ತೆಗೆದುಕೊಳಅಳುತ್ತಿದೆ. ತಬ್ಲೀಘಿಗಳ ಕುರಿತಂತೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ಹಾಗೂ ಬಿಜೆಪಿಗೆ ಈ ಮೂಲಕ ಯಾವುದೇ ರೀತಿಯ ದಾರಿ ಮಾಡಿಕೊಡದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಿದೆ. 

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಮಾತನಾಡಿ, ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಈ ತಂತ್ರಗಳನ್ನು ಅರಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದಕ್ಕೆ ಪ್ರತಿ ತಂತ್ರವಾಗಿ ರೂ.1,610 ಕೋಟಿಗಳ ಪ್ಯಾಕೇಜ್ ಘೋಷಣೆ ಮಾಡಿ ತಿರುಗೇಟು ನೀಡಿದ್ದಾರೆ. 

ಬಿಜೆಪಿ ವಕ್ತಾರ ಜಿ.ಮಧುಸೂದನ್ ಅವರು ಮಾತನಾಡಿ, ಪಿಎಂ ಕೇರ್ಸ್'ಗೆ ಹಣ ನೀಡುವ ಬದಲಾಗಿ ರೂ.1 ಕೋಟಿ ಚೆಕ್ ನೀಡಿದ್ದು ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ತಂತ್ರಗಳ ಬಗ್ಗೆಯೂ ನಮಗೆ ಗೊತ್ತಿದೆ. ಸಾಂಪ್ರದಾಯಿಕ ಉದ್ಯೋಗಗಳು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದನೆ ನೀಡಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಒತ್ತಡಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com