ಪಕ್ಷಾಂತರ ನಿಷೇಧ ಕಾಯ್ದೆ ಮರು ಪರಿಶೀಲನೆ: ಸರ್ವಪಕ್ಷ ನಾಯಕರೊಂದಿಗೆ ಸ್ಪೀಕರ್ ಕಾಗೇರಿ ಚರ್ಚೆ

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿಧಾನಸಬೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಆಡಲಿತ ಮತ್ತು ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ಕರೆದಿದ್ದಾರೆ. 
ಸ್ಪೀಕರ್ ಕಾಗೇರಿ
ಸ್ಪೀಕರ್ ಕಾಗೇರಿ

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿಧಾನಸಬೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಆಡಲಿತ ಮತ್ತು ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ಕರೆದಿದ್ದಾರೆ. 

ಪಕ್ಷಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಕೈಗೊಳ್ಳುವ ಕ್ರಮದ ಬಗ್ಗೆ ಸುಧಾರಣೆ ಮಾಡಬೇಕಾಗಿದೆ. ಬರುವ ಜೂ.10ರೊಳಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ತಜ್ಞರಿಗೆ ಸೂಚಿಸಿದ್ದೇನೆ. ಗುರುವಾರ ಬೆಳಿಗೆಗ 10.30ಕ್ಕೆ ವಿಧಾನಸೌಧದ ಮೊದಲನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಸಂಸಹದೀಯ ಗಣ್ಯರ ಸಭೆ ನಡೆಸಲಾಗುವುದು. ಸಭೆಯಲ್ಲಿ ಕಗಾಯ್ದೆಯ ಸುಧಾರಣೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆಸುತ್ತೇನೆಂದು ಕಾಗೇಲಿಯವರು ತಿಳಿಸಿದ್ದಾರೆ. 

ಸಂವಿಧಾನದ 1ನೇ ಅನುಚ್ಛೇದ, ಪಕ್ಷಾಂತರ ನಿಷೇಧ ಕಾಯ್ದೆ ಕುರಿತು 60ರ ದಶಕದಿಂದಲೂ ಚರ್ಚೆ ನಡೆಯುತ್ತಿದೆ. ಸರರ್ಕಾರಗಳು ಆಯಾ ಕಾಲಕ್ಕೆ ತಕ್ಕಂತೆ ತಮ್ಮದೇ ಆದ ಕ್ರಮ ಕೈಗೊಂಡಿವೆ. ಜನರ ಆಶಯಕ್ಕೆ ತಕ್ಕಂತೆ ಕಾನೂನು ರೂಪಿಸಬೇಕು ಎಂದು ಹಲವು ಸ್ರಮಪಟ್ಟು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಆದರೂ ಈ ಪಿಡುಗು ಮುಂದವರೆದಿದೆ. ಶೆಡ್ಯೂಲ್ 10ನ್ನು ಬಲಗೊಳಿಸುವ ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಯುತ್ತಿದೆ. ಸುಧಾರಣೆಗಾಗಿ ಸಭಾಧ್ಯಕ್ಷರ ಸಮಿತಿ ರಚಿಸಿ ನಿರಂತರವಾಗಿ ಸಭೆ ನಡೆಯುತ್ತಿದೆ ಎಂದರು. 

ಉಗಾಂಡದಲ್ಲಿ ನಡೆದ ಸಭೆಯಲ್ಲಿ ಭಾಗವಿಸಿದ್ದೇನೆ. ದೇಶದ ಹಲವೆಡೆ ಸಭೆಗಳಲ್ಲಿ ಭಾಗವಹಿಸಿದ್ದೇನೆ. ದೇಶದ ಹಲವೆಡೆ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. 25 ಹಿರಿಯ ರಾಜಕೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಸ್ಪೀಕರ್ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com