ಬಂಡಾಯವೆದ್ದಿಲ್ಲ, ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು: ಯತ್ನಾಳ್

ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು, ಯಡಿಯೂರಪ್ಪ ವಿರುದ್ಧ ಅಸಮಾಧಾನ ಚರ್ಚೆ ಆಗಿಲ್ಲ. ಲೋಕಾಭಿರಾಮವಾಗಿ ಮಾತಾಡಿದ್ದೇವೆ. ಸರ್ಕಾರ ಕೆಡುವ ಕೆಲಸ ಮಾಡುವುದಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ' ರಾಜ್ಯ ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್

ಬೆಂಗಳೂರು: ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು, ಯಡಿಯೂರಪ್ಪ ವಿರುದ್ಧ ಅಸಮಾಧಾನ ಚರ್ಚೆ ಆಗಿಲ್ಲ. ಲೋಕಾಭಿರಾಮವಾಗಿ ಮಾತಾಡಿದ್ದೇವೆ. ಸರ್ಕಾರ ಕೆಡುವ ಕೆಲಸ ಮಾಡುವುದಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ' ರಾಜ್ಯ ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ
ಪ್ರತಿಕ್ರಿಯಿಸಿದ್ದಾರೆ.

ಸಭೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಚರ್ಚೆ ಆಗಿಲ್ಲ. ಸರ್ಕಾರ ತನ್ನ ಅಧಿಕಾರಾವಧಿ ಪೂರೈಸಲಿದೆ. ನಾವು ಬಂಡಾಯವೆದ್ದಿಲ್ಲ. ಬಂಡಾಯ ಸೂಚನೆಯೂ ಅಲ್ಲ. ಮಾತಾಡಲು ಮುಕ್ತವಾದ ಸ್ವಾತಂತ್ರ್ಯ ಇದೆ. ಅನೇಕ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಈ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದೆ. ಕ್ಷೇತ್ರದ ವಿಚಾರ ಚರ್ಚೆ ಆಗಿದೆಯಷ್ಟೇ. ಕೊರೊನಾದಲ್ಲಿ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ ಎಂದು ನೆನಪಿಸಿದರು.

ಯಾವುದೇ ಬಂಡಾಯದ ಸಭೆಗಳು ನಡೆದಿಲ್ಲ. ಯಾರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಅದೇ ರೀತಿ ಅಮಿತ್ ಷಾ ಕೂಡ ನಮ್ಮ ನಾಯಕರು. ಯಡಿಯೂರಪ್ಪ ನವರು ನಮ್ಮ ರಾಜ್ಯದ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ನಮ್ಮ ನಾಯಕ ಯಡಿಯೂರಪ್ಪ ಅಲ್ಲ ಎನ್ನುವುದನ್ನು ಯತ್ನಾಳ್ ಪರೋಕ್ಷವಾಗಿ ಹೇಳಿದರು.

ಯಡಿಯೂರಪ್ಪ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಮುಂದುವರೆಯಲಿ ಎಂದರೆ ಮುಂದುವರೆಯಲಿ, ಇಲ್ಲ ಅಂದರೆ ಇಲ್ಲ ಎಂದು ಯತ್ನಾಳ್ ಕಡ್ಡಿ ಮುರಿದಂತೆ ಹೇಳಿದರು. ತಾವು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗುವುದಿಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವ ಕೆಲಸ ನಾವು ಮಾಡಿಲ್ಲ. ಮಾಡುವುದಿಲ್ಲ. ನಾವು
ಬಂಡಾಯ ಶಾಸಕರೂ ಅಲ್ಲ. ಯಡಿಯೂರಪ್ಪ ಶನಿವಾರ ಕರೆದಿದ್ದರು ನಾನು ಹೋಗಿಲ್ಲ. ಯಡಿಯೂರಪ್ಪ ಮುಂದೆ, ಹೈಕಮಾಂಡ್ ಮುಂದೆ ಸಚಿವ ಸ್ಥಾನ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಬಾರದಾ ? ಎಂದು ಪ್ರಶ್ನಿಸಿದ ಯತ್ನಾಳ್, ಹೈಕಮಾಂಡ್ ಭೇಟಿಯೂ ಮಾಡುವುದಿಲ್ಲ. ಹಣ ಬಿಡುಗಡೆ ಆಗಿಲ್ಲ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇವೆ. ಮೇಲಿಂದ ಮೇಲೆ ಬರುವುದಿಲ್ಲ ಎಂದೂ ಹೇಳಿದ್ದೇನೆ. ಕತ್ತಿಯವರನ್ನು ಮಂತ್ರಿ ಮಾಡುತ್ತೇನೆ ಎಂದು ಸಿಎಂ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪನವರು ತಮ್ಮನ್ನು ಭೇಟಿಯಾಗುವಂತೆ ಕರೆದಿದ್ದು ನಿಜ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಹೇಳಿದ್ದೇನೆ. ಬೇಸರವಾಗಿದೆ ಎಂದು ಹೇಳಿದ್ದೇವೆ. ನಾನು ಪದೇ ಪದೇ ಯಡಿಯೂರಪ್ಪ ಬಳಿ ಹೋಗಲು‌ ಆಗುವುದಿಲ್ಲ. ಯಾರನ್ನು ಬೇಕಾದರೂ ಅವರು ಮಂತ್ರಿ ಮಾಡಬಹುದು, ಯಾವ ಸ್ಥಾನಮಾನ ಬೇಕಾದರೂ ನೀಡಬಹುದು. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ ಎಂದು ಯತ್ನಾಳ್ ಹೇಳಿದರು. ಪಕ್ಷ ಹಿರಿಯ ನಾಯಕ ಬಿ. ಸಂತೋಷ್ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com