ಪ್ರತ್ಯೇಕ ಸಭೆ: ಫೋಟೋದಲ್ಲಿರುವುದು ನಾವೇ, ಅದು ನಮ್ಮ ಮನೆಯಲ್ಲಿ ತೆಗೆದ ಫೋಟೋ - ಶಾಸಕ ಮುರುಗೇಶ್ ನಿರಾಣಿ

ಫೋಟೋದಲ್ಲಿ ಇರುವುದು ನಾವೇ, ಅದು ನಮ್ಮ ಮನೆಯಲ್ಲಿ ಎರಡೂವರೆ ತಿಂಗಳ ಹಿಂದೆ ತೆಗೆದಿರುವ ಫೋಟೋ ಅದು. ಆದರೆ ನಾವ್ಯಾರೂ ಪಕ್ಷ ವಿರೋಧಿ‌ ಚಟುವಟಿಕೆ ನಡೆಸಲು ಸೇರಿದ್ದ ಸಭೆಯಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟೀಕರಣ ನೀಡಿದ್ದಾರೆ.

Published: 31st May 2020 11:07 PM  |   Last Updated: 31st May 2020 11:07 PM   |  A+A-


BJP MLAs

ಬಿಜೆಪಿ ಶಾಸಕರು

Posted By : Vishwanath S
Source : UNI

ಬೆಂಗಳೂರು: ಫೋಟೋದಲ್ಲಿ ಇರುವುದು ನಾವೇ, ಅದು ನಮ್ಮ ಮನೆಯಲ್ಲಿ ಎರಡೂವರೆ ತಿಂಗಳ ಹಿಂದೆ ತೆಗೆದಿರುವ ಫೋಟೋ ಅದು. ಆದರೆ ನಾವ್ಯಾರೂ ಪಕ್ಷ ವಿರೋಧಿ‌ ಚಟುವಟಿಕೆ ನಡೆಸಲು ಸೇರಿದ್ದ ಸಭೆಯಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟೀಕರಣ ನೀಡಿದ್ದಾರೆ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾದ ಮುರುಗೇಶ್ ನಿರಾಣಿ ನಿವಾಸದಲ್ಲಿ ಸಭೆ ಸೇರಿದ್ದರು. ಅಸಮಾಧಾನಿ ತರ ಗುಂಪು ಕಟ್ಟಿಕೊಂಡು ಸಭೆ ನಡೆಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿ ಬಿತ್ತರ ವಾಗಿತ್ತು. ಆ ಫೋಟೋದಲ್ಲಿ ಶಾಸಕ ರಾಮದಾಸ್, ಉಮೇಶ್ ಕತ್ತಿ ಜೊತೆಗೆ ಮುರುಗೇಶ್ ನಿರಾಣಿ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿದೆ. ಆ ಪೋಟೋ ನಮ್ಮ ಮನೆಯಲ್ಲಿ ಎರಡೂವರೆ ತಿಂಗಳ ಹಿಂದೆ ನಾವು ಸೇರಿದ್ದೆವು. ಅದು ನಮ್ಮ ಮನೆಯಲ್ಲಿನ ಫೋಟೋ ಅದರಲ್ಲಿ ಇರುವುದು ನಾವೇ ಆದರೆ ಸರ್ಕಾರ ಬದಲಾವಣೆ ಮಾಡುವುದರ ಬಗ್ಗೆಯಾಗಲೀ, ಯಡಿ ಯೂರಪ್ಪ ವಿರುದ್ಧ ಪಿತೂರಿ ಯಂತಹ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಲ್ಲ.

ನಾವು ಮೈಸೂರು ಕಡೆ ಹೋದರೆ ಶಾಸಕ ರಾಮದಾಸ್ ಅವರ ಮನೆಗೆ ಹೋಗುತ್ತೇವೆ. ಅವರು ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬರುತ್ತಾರೆ. ನಾವು ಶಾಸಕರು ಮಾತ್ರವಲ್ಲ ಸ್ನೇಹಿತರು ಕೂಡ, ಬೇರೆ ಪಕ್ಷದ ಶಾಸಕರ ಮನೆಗೂ ನಾವು ಹೋಗೊದು, ಬರುವುದು ಸಹಜ ಅದನ್ನು ರಹಸ್ಯ ಭೇಟಿ ಎಂದು ಫೋಟೋ ವೀಡಿಯೋ ಎಂದು‌ ತೋರಿಸುವುದು ಸೂಕ್ತವಲ್ಲ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Stay up to date on all the latest ರಾಜಕೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp