ಬೀದಿಗೆ ಬಿತ್ತು ಜೆಡಿಎಸ್ ದಾಯಾದಿ ಕಲಹ! ಉಪಚುನಾವಣೆ ಫಲಿತಾಂಶದ ಮೇಲೆ ಎಫೆಕ್ಟ್?

ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಜೆಡಿಎಸ್ ಗೆ ನಿರ್ಣಾಯಕವಾಗಿದೆ. ಆದರೆ ಇದೇ ಹೊತ್ತಲ್ಲಿ ಜೆಡಿಎಸ್ ಕೌಟುಂಬಿಕ ಕಲಹ ಬಹಿರಂಗಗೊಂಡಿದೆ. ದಶಕಗಳಿಂದಲೂ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಶಿರಾದಲ್ಲಿ ನಿಖಿಲ್ ಮತ್ತು ಕುಮಾರಸ್ವಾಮಿ
ಶಿರಾದಲ್ಲಿ ನಿಖಿಲ್ ಮತ್ತು ಕುಮಾರಸ್ವಾಮಿ

ಬೆಂಗಳೂರು: ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಜೆಡಿಎಸ್ ಗೆ ನಿರ್ಣಾಯಕವಾಗಿದೆ. ಆದರೆ ಇದೇ ಹೊತ್ತಲ್ಲಿ ಜೆಡಿಎಸ್ ಕೌಟುಂಬಿಕ ಕಲಹ ಬಹಿರಂಗಗೊಂಡಿದೆ. ದಶಕಗಳಿಂದಲೂ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಭಾನುವಾರ ಶಿರಾ ಉಪಚುನಾವಣೆ ಪ್ರಚಾರದ ವೇಳೆ ದಾಯಾದಿ ಕಲಹ ಬೀದಿಗೆ ಬಿದ್ದಿದೆ.

ಭಾನುವಾರ ನಡೆದ ರ್ಯಾಲಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರ ಹೆಸರನ್ನು ಪಟ್ಟಿ ಮಾಡಿ ಹೇಳಿದರು, ಆದರೆ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಹೇಳಲಿಲ್ಲ, ಇದರಿಂದ ಆಕ್ರೋಶಗೊಂಡ ರೇವಣ್ಣ ಬೆಂಬಲಿಗರು, ವೇದಿಕೆ ಮೇಲೆ ಹತ್ತಿ ಮೈಕ್ ಕಸಿದುಕೊಂಡು ಕೆಲಕಾಲ ಗೊಂದಲ ಸೃಷ್ಠಿಸಿದರು, ನಂತರ ರೇವಣ್ಣ ಅವರನ್ನು ಸಮಾಧಾನ ಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ನಿಖಿಲ್ ಕ್ಷಮೆ ಕೋರಿದ್ದಾರೆ. ಇದು ಉದ್ದೇಶಪೂರ್ವಕವಲ್ಲ, ಬಾಯ್ತಪ್ಪಿನಿಂದ ಆಗಿರುವುದು ಎಂದು ಜೆಡಿಎಸ್ ವಕ್ತಾರ ಟಿ.ಎ. ಶರವಣ ಹೇಳಿದ್ದಾರೆ. 

2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ಆರ್ ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಟಿಕೆಟ್ ನೀಡಲಿಲ್ಲ, ಆದರೆ ಇದೇ ವೇಳೆ ನಿಖಿಲ್ ಗೆ ಮಂಡ್ಯ ಲೋಕಸಭಾ ಚುನಾವಣೆ ಟಿಕೆಟ್ ನೀಡಲಾಯಿತು. ರಾಜ್ಯದ ಪ್ರಮುಖ ಪಕ್ಷವಾದ ಜೆಡಿಎಸ್ ಎರಡು ಕುಟುಂಬಗಳ ಮಧ್ಯೆ ಇರುವ ಬಿರುಕು ಆಗಲೇ ಕಾಣಿಸಿಕೊಂಡಿತ್ತು.

ಪ್ರಜ್ವಲ್ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರ ನಿಖಿಲ್ ಸೋತರು,. ರೇವಣ್ಣ ಕುಮಾರಸ್ವಾಮಿಗಿಂತ ಹಿರಿಯರು, ಆದರೆ ಎರಡು ಬಾರಿ ಸಿಎಂ ಆಗುವ ಮೂಲಕ ಕುಮಾರಸ್ವಾಮಿ ರೇವಣ್ಣ ಅವರಿಗೆ ಮುಜುಗರ ಉಂಟು ಮಾಡಿದರು, ಈಗ ಸದ್ಯ ಎರಡು ಕುಟುಂಬಗಳ ನಡುವಿನ ತಿಕ್ಕಾಟ ಆರ್ ಆರ್ ನಗರ ಮತ್ತು ಶಿರಾ ಉಪ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸೋತನಂತರ ಎರಡು ಕುಟುಂಬಗಳು ಪರಸ್ಪರ ನಿಂದಿಸಿಕೊಂಡಿದ್ದು ಜನರಿಗೆ ತಿಳಿದಿತ್ತು. ಇದರ ಜೊತೆಗೆ ರೇವಣ್ಣ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಆಪ್ತ ರಾಗಿದ್ದು ಮಾಜಿ ಪಿಎಂ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಮುಜುಗರಕ್ಕೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com