ಶಿರಾ ಉಪಚುನಾವಣೆ: ಮತದಾನಕ್ಕೆ ಉತ್ಸಾಹ ತೋರದ ರೈತರು ಬೆಳೆ ಕಟಾವಿನಲ್ಲಿ ಬ್ಯುಸಿ

ಮಂಗಳವಾರ ಶಿರಾ ಉಪಚುನಾವಣೆಗೆ ಮತದಾನ ನಡೆಯಿತು. ಚಂಗವಾರ, ಬೇವಿನಹಳ್ಳಿ, ಮತ್ತು ಇತರೆ ಹಳ್ಳಿಗಳಲ್ಲಿ, ರೈತರು ರಾಗಿ ಮತ್ತು ಕಡಲೆಕಾಯಿ ಬೀಜ ಕಟಾವು ಮಾಡುವಲ್ಲಿ ಬ್ಯುಸಿಯಾಗಿದ್ದರು.
ಶಿರಾ ಉಪಚುನಾವಣೆ ಮತದಾನ
ಶಿರಾ ಉಪಚುನಾವಣೆ ಮತದಾನ

ತುಮಕೂರು: ಮಂಗಳವಾರ ಶಿರಾ ಉಪಚುನಾವಣೆಗೆ ಮತದಾನ ನಡೆಯಿತು. ಚಂಗವಾರ, ಬೇವಿನಹಳ್ಳಿ, ಮತ್ತು ಇತರೆ ಹಳ್ಳಿಗಳಲ್ಲಿ, ರೈತರು ರಾಗಿ ಮತ್ತು ಕಡಲೆಕಾಯಿ ಬೀಜ ಕಟಾವು ಮಾಡುವಲ್ಲಿ ಬ್ಯುಸಿಯಾಗಿದ್ದರು.

11 ಗಂಟೆಯವರೆಗೂ ಮತದಾನ ನಿಧಾನವಾಗಿ ಸಾಗಿತ್ತು. ಮದ್ಯಾಹ್ನದ ನಂತರ 3 ಗಂಟೆಯವರೆಗೂ ಶೇ. 60ರಷ್ಟು ಮತದಾನವಾಯಿತು.  ಶಿರಾ ಪಟ್ಟಣದ ಮುಸ್ಲಿಂ ಸಮುದಾಯವಿರುವ ಪ್ರದೇಶಗಳಲ್ಲಿ ಬಿರುಸಿನ ಮತದಾನ ನಡೆಯಿತು.

ಕಳೆದ ಬಾರಿ ಶೇ,84.31 ರಷ್ಟು ಮತದಾನವಾಗಿತ್ತು. ಈ ಬಾರಿಯೂ ಉತ್ತವಾಗಿದೆ ಎಂದು ಮಾಜಿ ಜಿಪಂ ಸದಸ್ಯ ಮತ್ತು ಬಿಜೆಪಿ ನಾಯಕ ಬೇವಿನಹಳ್ಳಿ ಕೆ ಮಂಜುನಾಥ್ ಹೇಳಿದ್ದಾರೆ.

ನಾನು ಸಾಮಾನ್ಯ ಮತದಾರಳಲ್ಲ, ನಾನು ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಎಂದು 70 ವರ್ಷದ ಲಕ್ಷ್ಮಮ್ಮ ಮತ ಚಲಾಯಿಸಿದ ನಂತರ ಹೆಮ್ಮೆಯಿಂದ ಹೇಳಿಕೊಂಡರು.

ವ್ಹೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದ ಮತ್ತೊಬ್ಬ ಮಹಿಳೆ ಸರ್ಕಾರದಿಂದ ತನಗೆ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದರು, ಇದಕ್ಕೆ ಗ್ರಾಮಸ್ಥರು ತಮ್ಮ ದನಿ ಗೂಡಿಸಿದರು. ಅಪಘಾತವೊಂದರಲ್ಲಿ ಆಕೆ ತನ್ನ ಮೂರು ಮಕ್ಕಳನ್ನು ಕಳೆದುಕೊಂಡರು. ಕೇವಲ ಮಗಳು ಮಾತ್ರ ಆಕೆಗೆ ಆಸರೆಯಾಗಿದ್ದಾರೆ. ಆಕೆ ಮಾತ್ರ ಅವರ ಕೇರ್ ಮಾಡುತ್ತಿದ್ದಾರೆ, ಹೀಗಾಗಿ ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ಉಚಿತವಾಗಿ ಮಧ್ಯ ಹಂಚಿದರು, ಆದರೆ ಮತದಾನ ಮಾಡಲು ಉತ್ಸಾಹ ತೋರಲಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾರಂಭಿಸಿದ ‘ಅನ್ನಭಾಗ್ಯ’ ಯೋಜನೆಯ ಸಂಕೇತವಾಗಿ ಕಾಂಗ್ರೆಸ್ ಕಾರ್ಯಕರ್ತರಾದ ಶಿವಕುಮಾರ್ ಅವರು ಒಂದು ಬಟ್ಟಲು ಅಕ್ಕಿಯೊಂದಿಗೆ ಮತದಾರರ ಗಮನ ಸೆಳೆಯುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com