ಬಿಜೆಪಿ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಘಟಕ ಆಗ್ರಹ

ಕೊಪ್ಪಳ ಜಿಲ್ಲೆಯು ಮೂವರು ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿದ್ದರೂ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಜುಗರ ಅನುಭವಿಸಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆಯು ಮೂವರು ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿದ್ದರೂ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಜುಗರ ಅನುಭವಿಸಿತು.

ಜಿಲ್ಲಾ ಪಂಚಾಯತಿ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿದರು. ಬಿಜೆಪಿ ಕೌನ್ಸಿಲರ್ ಗಳು ಪಕ್ಷದ ಯೋಜನೆಯನ್ನು ಉಲ್ಟಾ ಹೊಡೆಯುವಂತೆ ಮಾಡಿದ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ಗಂಗಾವತಿ ಮುನ್ಸಿಪಲ್  ಚುನಾವಣೆಯಲ್ಲಿ ಕೇಸರಿ ಪಕ್ಕೆ ಹಿನ್ನಡೆ ಉಂಟಾಯಿತು.

ಬಿಜೆಪಿ ಕೌನ್ಸಿಲರ್ ಸುಧಾ ಸೋಮನಾಥ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದರ ಜೊತೆಗೆ ಗಂಗಾವತಿ ಸಿಎಂಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದನ್ನು ಖಚಿತಪಡಿಸಿಕೊಂಡರು. ಹೀಗಾಗಿ ಬಂಡಾಯ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಬಿಜೆಪಿ ಕೌನ್ಸಿಲರ್ ಗಳು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯ ಆರು  ಸದಸ್ಯರನ್ನು ಅನರ್ಹಗೊಳಿಸಲು ಪ್ರಕ್ರಿಯೆ ಆರಂಭಿಸುವಂತೆ ಕೊಪ್ಪಳ ಸಿಇಓಗೆ ಜಿಲ್ಲಾ ಘಟಕದ ಸದಸ್ಯರು  ಮನವಿ ಸಲ್ಲಿಸಿದ್ದಾರೆ.

ಇಂತಹ ಉಲ್ಲಂಘನೆಗಳನ್ನು ಸಹಿಸಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಹೇಳಿದ್ದಾರೆ.

ಆದರೆ ಬಂಡಾಯ ಸದಸ್ಯರ ಅವಧಿ ಕೇವಲ ಇನ್ನೂ ಆರು ತಿಂಗಳು ಮಾತ್ರ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com