ನಾಳೆ ಉಪ ಚುನಾವಣೆ ಫಲಿತಾಂಶ: ಬಿಜೆಪಿಯಲ್ಲಿ ತೀವ್ರಗೊಂಡ ಸಂಪುಟ ಪುನರ್ರಚನೆ, ವಿಸ್ತರಣೆ ಚರ್ಚೆ

ಕಳೆದ ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸಲು ದೆಹಲಿಗೆ ಹೋಗಿದ್ದಾಗ ಚರ್ಚೆ ನಡೆಸಿ ಬಂದಿದ್ದರಷ್ಟೆ, ಅಂತಿಮ ಒಪ್ಪಿಗೆ ಸಿಕ್ಕಿರಲಿಲ್ಲ. 
ಶಿವಮೊಗ್ಗದಲ್ಲಿ ನಿನ್ನೆ ಜ್ಞಾನದೀವಿಗೆ ಉದ್ಘಾಟಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಶಿವಮೊಗ್ಗದಲ್ಲಿ ನಿನ್ನೆ ಜ್ಞಾನದೀವಿಗೆ ಉದ್ಘಾಟಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕಳೆದ ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸಲು ದೆಹಲಿಗೆ ಹೋಗಿದ್ದಾಗ ಚರ್ಚೆ ನಡೆಸಿ ಬಂದಿದ್ದರಷ್ಟೆ, ಅಂತಿಮ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಬಿಹಾರ ಚುನಾವಣೆ, ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆಗಳು ಬಂದವು. ಇದೀಗ ಸಂಪುಟ ವಿಸ್ತರಣೆ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೆ ಹೈಕಮಾಂಡ್ ಎಂಬುದು ಕುತೂಹಲ.

ನಾಳೆ ಬಿಹಾರ ಮತ್ತು ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಯಡಿಯೂರಪ್ಪ ಮುಂದಿರುವ ಪ್ರಮುಖ ಆದ್ಯತೆಯಾಗಿದೆ. ಉಪ ಚುನಾವಣೆ ಫಲಿತಾಂಶದ ನಂತರವೇ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರೂ ಕೂಡ ಬಿಜೆಪಿಯಲ್ಲಿ ಲಾಬಿ ತೀವ್ರವಾಗಿದೆ. 

ಸಚಿವಾಕಾಂಕ್ಷಿ ಶಾಸಕರ ಲಾಬಿ ತೀವ್ರವಾಗಿದೆ. ಹೊಸದಾಗಿ ಚುನಾಯಿತರಾದ ಎಂಎಲ್ಸಿಗಳಾದ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಜ್ಜಾಗಿದ್ದರೆ, ನಾಮ ನಿರ್ದೇಶಿತ ಎಂಎಲ್ ಸಿ ಎಚ್ ವಿಶ್ವನಾಥ್ ಅವರ ಭವಿಷ್ಯವು ನಿರುತ್ಸಾಹಗೊಂಡಿದೆ. ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಂ.ಎಲ್.ಸಿ ಮತ್ತು ಒಕ್ಕಲಿಗ ಮುಖಂಡ ಸಿ.ಪಿ. ಯೋಗೇಶ್ವರ ಅವರು ಈಗ ಈ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ. ಆರ್.ಆರ್.ನಗರ ಅಭ್ಯರ್ಥಿ ಮುನಿರತ್ನ ಜಯ ಗಳಿಸಿದರೆ ಅವರನ್ನು ಕೂಡ ಸಂಪುಟಕ್ಕೆ ಸೇರಿಸಲಾಗುತ್ತದೆ.

ವಿಶೇಷವೆಂದರೆ, ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದವರು ವಿಸ್ತರಣೆಯ ಕುರಿತು ಸಿಎಂ ಗಮನ ಸೆಳೆಯಲು ಕಾಯುತ್ತಿದ್ದರೆ, ಬಸನಗೌಡ ಪಾಟೀಲ್ ಯತ್ನಾಲ್, ಅರವಿಂದ್ ಲಿಂಬಾವಳಿ, ಸುನೀಲ್ ಕುಮಾರ್, ಉಮೇಶ್ ಕಟ್ಟಿ ಸೇರಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಹೈಕಮಾಂಡ್ ಅನ್ನು ನೇರವಾಗಿ ಸಂಘಟಿಸುವಂತಹ ರಾಜ್ಯ ಪಕ್ಷದ ಮುಖಂಡರೊಂದಿಗೆ ಲಾಬಿ ಮಾಡಲು ಯತ್ನಿಸುತ್ತಿದ್ದಾರೆ. ಹಿರೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಶಿರಾದಲ್ಲಿ ಬಿಜೆಪಿ ಗೆದ್ದರೆ ಶಶಿಕಲಾ ಜೊಲ್ಲೆ ಅವರ ಬದಲಿಗೆ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com