ಶೀಘ್ರದಲ್ಲೇ ಮಸ್ಕಿ-ಬಸವಕಲ್ಯಾಣ ಉಪ ಚುನಾವಣೆ: ಎರಡು ಕ್ಷೇತ್ರದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್?

ರಾಜರಾಜೇಶ್ವರಿ ಮತ್ತು ಶಿರಾ ಉಪಚುನಾವಣೆಗಳು ಮುಗಿದ ಬೆನ್ನಲ್ಲೇ ಮತ್ತೆರಡು ಉಪ ಚುನಾವಣೆಗಾಗಿ ಸಿದ್ಧತೆ ನಡೆಯುತ್ತಿದೆ, ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜರಾಜೇಶ್ವರಿ ಮತ್ತು ಶಿರಾ ಉಪಚುನಾವಣೆಗಳು ಮುಗಿದ ಬೆನ್ನಲ್ಲೇ ಮತ್ತೆರಡು ಉಪ ಚುನಾವಣೆಗಾಗಿ ಸಿದ್ಧತೆ ನಡೆಯುತ್ತಿದೆ, ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಮುಂದಿನ ಉಪಚುನಾವಣೆ ಬಗ್ಗೆ ಬಿಜಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿವೆ. ಬಸವ ಕಲ್ಯಾಣದಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಪುತ್ರ ಗೌತಮ್ ಅಥವಾ ಪತ್ನಿ ಮಾಲಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ, ಆದರೆ ಇನ್ನೂ ಫೈನಲ್ ಆಗಿಲ್ಲ. ಅಭ್ಯರ್ಥಿ ಫೈನಲ್ ಮಾಡುವ ಸಂಬಂಧ ಸಿದ್ದರಾಮಯ್ಯ, ಮತ್ತು ಡಿಕೆಶಿವಕುಮಾರ್ ಪಕ್ಷದ ಇತರ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಸ್ಕಿಯಲ್ಲಿ ಕಾಂಗ್ರೆಸ್ ನಾಯಕರು ಬಸನಗೌಡ ತುರುವಿಹಾಳ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಮನಸು ಮಾಡಿದ್ದಾರೆ. ಭಾನುವಾರ ತುರುವಿಹಾಳ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತುರುವಿಹಾಳ್ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ 200 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.
ನಂತರ ಪ್ರತಾಪ್ ಗೌಡ ಬಿಜೆಪಿ ಸೇರ್ಪಡೆಯಾದರು.

ಒಂದು ಕಾಲದಲ್ಲಿ ಮಸ್ಕಿ ಮತ್ತು ಬಸವಕಲ್ಯಾಣ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿದ್ದ ಜೆಡಿಎಸ್ ಕಳೆದ ಕೆಲವು ಚುನಾವಣೆಗಳಲ್ಲಿ ತೀವ್ರ ಸೋಲನುಭವಿಸಿದೆ.

2018 ರಲ್ಲಿ ಜೆಡಿಎಸ್ ನಾಯಕರಾದ ಪಿಜಿಆರ್ ಸಿಂಧ್ಯಾ ಮಸ್ಕಿಯಿಂದ ಸ್ಪರ್ಧಿಸಿದ್ದರು, ಎಸ್ ನಾಯಕ್ ಬಸವಕಲ್ಯಾಣದಿಂದ ಸ್ಪರ್ಧಿಸಿ ಕೆಟ್ಟದಾಗಿ ಸೋತು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಸಿಂಧ್ಯಾ 33 ಸಾವಿರ ಮತ್ತು ನಾಯಕ್ 11 ಸಾವಿರ ಮತಗಳಿಸಿದ್ದರು.

“ನಾವು ಈ ಉಪಚುನಾವಣೆಗಳ ಬಗ್ಗೆ ಅನೌಪಚಾರಿಕ ಚರ್ಚೆಗಳನ್ನು ನಡೆಸಿದ್ದೇವೆ. ಆದರೆ ಆರ್.ಆರ್.ನಗರ ಮತ್ತು ಸಿರಾ ಉಪಚುನಾವಣೆಗಳ ಎಣಿಕೆಯ ನಂತರ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ವಕ್ತಾರ ರವಿಕುಮಾರ್ ತಿಳಿಸಿದ್ದಾರೆ.

ಕಳೆದ ಕೆಲವು ಚುನಾವಣೆಗಳಲ್ಲಿ ವಿಶ್ವಾಸಾರ್ಹ ಪ್ರದರ್ಶನಗಳನ್ನು ಹೊಂದಿರುವ ಬಿಜೆಪಿ ಎರಡು ಕ್ಷೇತ್ರಗಳನ್ನು ಸಹ ಗೆಲ್ಲುವ ವಿಶ್ವಾಸ ಹೊಂದಿದೆ, ಏಕೆಂದರೆ  ಹೆಚ್ಚಿನ ಸಂಖ್ಯೆಯ ಲಿಂಗಾಯತ ಮತದಾರರನ್ನು ಈ ಕ್ಷೇತ್ರಗಳು ಹೊಂದಿವೆ. ಮಸ್ಕಿಯಲ್ಲಿ ಸುಮಾರು 60,000, ಲಿಂಗಾಯತ, 50,000 ವಾಲ್ಮೀಕಿ, 40,000 ಎಸ್‌ಸಿ, 16,000 ಕುರುಬ ಮತ್ತು 10,000 ಮುಸ್ಲಿಂ ಮತದಾರರಿದ್ದಾರೆ.

ಬಸವ್ಕಲ್ಯಾಣದಲ್ಲಿ 55,000 ಲಿಂಗಾಯತ, 49,000 ಮುಸ್ಲಿಂ, 40,000 ಮರಾಠ, 26,000 ಕೋಲಿ, 15,000 ಕುರುಬ ಮತ್ತು ಸುಮಾರು 45,000 ಎಸ್ಸಿ ಮತದಾರರಿದ್ದಾರೆ. 

ಎಕ್ಸಿಟ್ ಪೋಲ್ ಸಮೀಕ್ಷೆಯಂತೆ ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆ ಫಲಿತಾಂಶ ಬಂದರೇ ಮಸ್ಕಿ ಮತ್ತು ಬಸವಕಲ್ಯಾಣಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ರಾಜಕೀಯ ವಿಮರ್ಶಕ ಹರೀಶ್ ಬಿಜೂರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com