ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಛಿದ್ರ: ಶಿರಾದಲ್ಲಿ ಮೊದಲ ಬಾರಿಗೆ ಅರಳಿದ ಕಮಲ

ಶಿರಾ ಉಪ ಚುನಾವಣೆಯಲ್ಲಿ ಡಾ.ರಾಜೇಶ್ ಗೌಡ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿರುವ ಶಿರಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿದೆ,
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ಡಾ.ರಾಜೇಶ್ ಗೌಡ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿರುವ ಶಿರಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿದೆ,

1951 ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಮೂರು ಬಾರಿ ಹೊರತು ಪಡಿಸಿದರೇ ಉಳಿದಂತೆ ಉಳಿದೆಲ್ಲಾ ಸಮದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲುವು ಸಾಧಿಸಿವೆ.

2018ರ ಚುನಾವಣೆಯಲ್ಲಿ 74,338 ಮತ ಪಡೆದಿದ್ದ ಜೆಡಿಎಸ್ ಈ ಬಾರಿ ಕೇವಲ 35,982 ಮತ ಪಡೆದಿದೆ. ಅನುಕಂಪದ ಅಲೆ ಕೆಲಸ ಮಾಡುತ್ತದೆ ಎಂಬ ಕಾರಣಕ್ಕೆ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಈ ಪ್ಲಾನ್ ಫಲಿಸಲಿಲ್ಲ, 

ಅಮ್ಮಾಜಮ್ಮಾ ಪರವಾಗಿ ಜೆಡಿಎಸ್ ಮುಖಂಡರಾದ ಎಚ್.ಡಿ ದೇವೇಗೌಡ, ಕುಮಾರಸ್ವಾಮಿ, ಪುತ್ರ ನಿಖಿಲ್, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ಭಾರೀ ಪ್ರಚಾರ ನಡೆಸಿದ್ದರು.

ಜೆಡಿಎಸ್ ಕಳೆದುಕೊಂಡಿದ್ದನ್ನು ಬಿಜೆಪಿ ಗಳಿಸಿಕೊಂಡಿತ್ತು.  2018 ರ ಚುನಾವಣೆಯಲ್ಲಿ ರನ್ನರ್ ಅಪ್ ಆಗಿದ್ದ ಮತ್ತು 63,973 ಮತಗಳನ್ನು ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರು ಈ ಬಾರಿಯೂ 61,673 ಮತಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com