ಫಲಿಸದ ಡಿಕೆ ಸಹೋದರರ ತಂತ್ರ: ಆರ್ ಆರ್ ನಗರದಲ್ಲಿ ಮುನಿರತ್ನ ಕ್ಲೀನ್ ಸ್ವೀಪ್

ಮುನಿರತ್ನ ತಮ್ಮ ಹಿಂದಿನ ಚುನಾವಣೆಗಿಂತ ಈ ಬಾರಿ ಮತಗಳ ಅಂತರವನ್ನು ಡಬಲ್ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುನಿರತ್ನ ಅವರಿಗೆ ಕಾಂಗ್ರೆಸ್ ನ ಸಾಂಪ್ರಾದಾಯಿಕ ಮತಗಳ ಜೊತೆಗೆ ಬಿಜೆಪಿ ಮತಗಳು ಸೇರಿವೆ.
ಮುನಿರತ್ನ
ಮುನಿರತ್ನ

ಬೆಂಗಳೂರು: ನಿರೀಕ್ಷೆಯಂತೆಯೇ ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ನ ಕುಸುಮಾ ಅವರನ್ನು ಸೋಲಿಸಿದ್ದಾರೆ.

ಮುನಿರತ್ನ ತಮ್ಮ ಹಿಂದಿನ ಚುನಾವಣೆಗಿಂತ ಈ ಬಾರಿ ಮತಗಳ ಅಂತರವನ್ನು ಡಬಲ್ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುನಿರತ್ನ ಅವರಿಗೆ ಕಾಂಗ್ರೆಸ್ ನ ಸಾಂಪ್ರಾದಾಯಿಕ ಮತಗಳ ಜೊತೆಗೆ ಬಿಜೆಪಿ ಮತಗಳು ಸೇರಿವೆ.

ಅವರು ಗಳಿಸಿದ 1.25 ಲಕ್ಷ ಮತಗಳು ಇದಕ್ಕೆ ಸಾಕ್ಷಿಯಾಗಿದೆ, ಇದು ಒಟ್ಟು 2.09 ಲಕ್ಷ ಮತಗಳಲ್ಲಿ ಶೇಕಡಾ 60 ರಷ್ಟಿದೆ. 2018 ರಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ, ಅವರು 1.08 ಲಕ್ಷ ಮತಗಳನ್ನು ಅಥವಾ ಒಟ್ಟು 2.4 ಲಕ್ಷ ಮತಗಳಲ್ಲಿ 45 ಶೇಕಡಾ ಪಡೆದಿದ್ದರು. ಈ ಗೆಲುವು ಬೆಂಗಳೂರಿನಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಹೆಚ್ಚಿಸಿದೆ, ನಗರದಲ್ಲಿ ಪಕ್ಷದ ಶಾಸಕರ ಸಂಖ್ಯೆಯನ್ನು 15 ಕ್ಕೆ ಹೆಚ್ಚಿಸಿದೆ.

2013 ರಲ್ಲಿ ಕಾಂಗ್ರೆಸ್ ವಿಧಾನಸಭೆ ಟಿಕೆಟ್ ನೀಡುವ ಮೊದಲು ಮುನಿರತ್ನ ಕೌನ್ಸಿಲರ್ ಆಗಿದ್ದವರು. ಅಂದಿನಿಂದ ಇಂದಿನವರೆಗೆ ಅವರು ಹಿಂತಿರುಗಿ ನೋಡಿಯೇ ಇಲ್ಲ,  ಚುನಾವಣಾ ಅಕ್ರಮ ಪ್ರಕರಣ ಸಂಬಂಧ ಕೋರ್ಟ್ ಕ್ಲೀನ್ ಚಿಟ್ ನೀಡಿದ ನಂತರ ಬಿಜೆಪಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. 

ಬಿಜೆಪಿಯ ಹಳೇಯ ನಾಕರ ತಂಡದಿಂದ ಆರ್ ಅಶೋಕ್ ಮತ್ತು ಹೊಸಬರ ತಂಡದಿಂದ ಭೈರತಿ ಬಸವರಾಜ್ ಮತ್ತು ಎಸ್.ಟಿ ಸೋಮಶೇಖರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್,ಆರ್ ವಿಶ್ವನಾಥ್ ಆರ್ ಆರ್ ನಗರದಲ್ಲಿ ಮುನಿರತ್ನ ಗೆಲುವಿಗೆ ಶ್ರಮ ವಹಿಸಿದ್ದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಮುನಿರತ್ನ, ನಾನು ಯಾವುದೇ ನಿರ್ಧಿಷ್ಟ ಖಾತೆಗೆ ಬೇಡಿಕೆ ಇಟ್ಟಿಲ್ಲ, ಸಿಎಂ ಮತ್ತು ಪಕ್ಷದ ಮುಖಂಡರು ನಿರ್ಧರಿಸಲಿದ್ದಾರೆ ಎಂದು ಮುನಿರತ್ನ ತಿಳಿಸಿದ್ದಾರೆ. 

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರ ಪ್ರಚಾರದ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ಫಲಿತಾಂಶ ಬಂದ ನಂತರ ಚುನಾವಣೆ ಅಂತ್ಯಗೊಳ್ಳುತ್ತದೆ ಎಂದರು, ಆರ್ ಆರ್ ನಗರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com