ಈ ಬಾರಿಯ ಚುನಾವಣೆಯಲ್ಲಿ ಕುಂಚಟಿಗ-ಒಕ್ಕಲಿಗ ನಿಷ್ಠಾವಂತ ಮತಗಳು ಬಿಜೆಪಿಗೆ!

ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.
ಶಿರಾ ಉಪ ಚುನಾವಣೆಯಲ್ಲಿ ಗೆದ್ದ ರಾಜೇಶ್ ಗೌಡ
ಶಿರಾ ಉಪ ಚುನಾವಣೆಯಲ್ಲಿ ಗೆದ್ದ ರಾಜೇಶ್ ಗೌಡ

ತುಮಕೂರು: ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.

ಶಿರಾ ಉಪ ಚುನಾವಣೆಯಲ್ಲಿ ಡಾ ಸಿಎಂ ರಾಜೇಶ್ ಗೌಡ ಗೆದ್ದರೆ, ಪರಿಷತ್ ಸ್ಥಾನ ಚಿದಾನಂದ ಎಂ ಗೌಡ ಪಾಲಾಗಿದೆ. ಈ ಹಿಂದೆ ಈ ಎರಡೂ ಕ್ಷೇತ್ರಗಳು ಜೆಡಿಎಸ್ ನ ಕೈಯಲ್ಲಿದ್ದವು. 

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಬಿ ಸತ್ಯನಾರಾಯಣ ಗೆದ್ದು ಶಾಸಕರಾಗಿದ್ದರು. ಅವರ ನಿಧನ ನಂತರ ಚುನಾವಣೆ ಅನಿವಾರ್ಯವಾಗಿತ್ತು. ಈ ಬಾರಿ ಉಪ ಚುನಾವಣೆಯಲ್ಲಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದ್ದರೂ ಕೂಡ ಸ್ಥಾನ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗಲಿಲ್ಲ.

ಮೊರಸು ಒಕ್ಕಲಿಗ ಸಮುದಾಯದಿಂದ ಆರ್ ಚೌಡರೆಡ್ಡಿ ತೂಪಳ್ಳಿ ಆಗ್ನೇಯ ಪದವೀಧರ ಕ್ಷೇತ್ರದಿಂದ 2014ರಲ್ಲಿ ಚುನಾಯಿತರಾಗಿ ಬಂದಿದ್ದರು. ಈ ಬಾರಿ ಬಿಜೆಪಿ ತಂತ್ರಗಾರಿಕೆಯಿಂದ ಚಿದಾನಂದ ಗೌಡ ಅವರನ್ನು ಬೆಂಬಲಿಸಿತು. ಕುಂಚಟಿಗ-ಒಕ್ಕಲಿಗರಾದ ಅವರು ಮತಗಳಿಸಿ ಗೆದ್ದರು. ತುಮಕೂರಿನ ಲಿಂಗಾಯತ ಸಮುದಾಯತ ಮತಗಳು, ಚಿತ್ರದುರ್ಗ, ದಾವಣಗೆರೆಯ ಕುಂಚಟಿಗ ಒಕ್ಕಲಿಗ ಮತಗಳಿಂದ ಅವರಿಗೆ ಸಹಾಯವಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com