ಜೆಡಿಎಸ್-ಬಿಜೆಪಿ ದೋಸ್ತಿ ದಿನೇ ದಿನೇ ಹೆಚ್ಚುತ್ತಿದೆ: ಸಮಾಜ ಒಡೆಯುವ ಕೆಲಸ ಏಕೆ ಮಾಡಬೇಕು?: ಡಿಕೆಶಿ ಪ್ರಶ್ನೆ

ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ಬಂದ ಮೇಲೆ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ಬಂದ ಮೇಲೆ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವ ನಗರದ‌ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಬಿಜೆಪಿಯ ಅಶೋಕ್ ಗಸ್ತಿ ನಿಧನದಿಂದ ಒಂದು ಕ್ಷೇತ್ರ ತೆರವಾಗಿದೆ. ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿ ಕಣಕ್ಕಿಳಿಸಬೇಕೇ ಬೇಡವೇ ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದರು. 

ಜೆಡಿಎಸ್ ಮತ್ತು ಬಿಜೆಪಿ ದಿನೇ ದಿನೇ ದೋಸ್ತಿ ಹೆಚ್ಚುತ್ತಿದೆ. ಈ ಕುರಿತು ತಾವು ಈಗ ಏನನ್ನೂ ಮಾತನಾಡುವುದಿಲ್ಲ ಮುಂದಿನ ರಾಜಕೀಯ ಬೆಳವಣಿಗೆ ನೋಡಿ ಮುಂದಿನ ಹೆಜ್ಜೆ ಇಡಲಾಗುವುದು. ಸಹಕಾರ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ತಪ್ಪಿಸಿಲು ಬಿಜೆಪಿ ಮುಖಂಡರು ಏನೇನು ಮಾಡುತ್ತಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದು ಶಿವಕುಮಾರ್ ಮಾರ್ಮಿಕವಾಗಿ ನುಡಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ನಮ್ಮ ರಾಜ್ಯದಲ್ಲಿರುವ ಜನರಿಗೆ ಸೌಲಭ್ಯ ಕೊಡಬಾರದು ಎಂದೇನಿಲ್ಲ. ಆದರೆ ಅವರನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ. ಮೊದಲು ನಾವು ಅವರಿಗೆ ಸಹಾಯ ಮಾಡಿದ್ದೇವೆ. ಈಗ ಏಕೆ ಸಮಾಜ ಒಡೆಯುವ ಕೆಲಸ ಮಾಡಬೇಕು? ಎಂದು ಪ್ರಶ್ನಿಸಿದರು. ಉಪ ಚುನಾವಣೆಯಿಂದ
ಜೆಡಿಎಸ್ ದೂರ ಸರಿಯಲು ಉದ್ದೇಶಿಸಿರುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಆಗುವ ಮೊದಲೇ ಏನು ಮಾತನಾಡುವುದಿಲ್ಲ ಎಂದರು‌.

ಸಾರಿಗೆ ನೌಕರರಿಗೆ ಸಂಬಳ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರಿಗೆ ಸಂಬಳ ಕೊಡಿ ಎನ್ನುತ್ತಿದ್ದಾರೆ. ಶಾಲಾ ಶುಲ್ಕ ತೆಗೆದುಕೊಳ್ಳ ಬೇಡಿ ಎನ್ನುತ್ತಿದ್ದಾರೆ. ಇತ್ತ ಸಾರಿಗೆ ಇಲಾಖೆಗೂ ಸಂಬಳ ಆಗಿಲ್ಲ. ಸರ್ಕಾರ ಸಾರಿಗೆ ನೌಕರರಿಗೆ ಸಂಬಳ ಕೊಡ ಬೇಕು. ಬೇರೆ ಯಾವುದೋ ಕೆಲಸ ನಿಲ್ಲಿಸಿದರೆ ಏನು ಸಮಸ್ಯೆ ಇಲ್ಲ. ಮೊದಲ ಸಂಬಳ ಕೊಡಲು ವ್ಯವಸ್ಥೆ ಮಾಡಬೇಕು ಎಂದರು. ಕೇಂದ್ರ ಸರ್ಕಾರದಿಂದ ಲಾಭ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಬಿಜೆಪಿ ನಾಯಕರಿಂದ ಸಾಧ್ಯವಾಗದೇ ಹೋದರೆ ಅವರು ಕಾಂಗ್ರೆಸ್ ನಾಯಕರನ್ನಾದರೂ ಮೋದಿ ಬಳಿ ಮಾತನಾಡಲು ನಿಯೋಗವನ್ನಾದರೂ ಕರೆದುಕೊಂಡಿ ಹೋಗಲಿ. ಇದನ್ನೇ ಸಿದ್ದರಾಮಯ್ಯ ಸಹ ಹೇಳಿದ್ದಾರೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com