ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ: ಆರ್.ಅಶೋಕ್

ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ. ಆರ್.ಎಸ್.ಎಸ್.ಗೂ ಬಿಜೆಪಿಯೂ ಯಾವುದೇ ಸಂಬಂಧವಿಲ್ಲ. ತಾವು ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಂಘ ಪರಿವಾರದಿಂದಲೇ ಬಂದವರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

Published: 21st November 2020 08:03 AM  |   Last Updated: 21st November 2020 12:20 PM   |  A+A-


R.Ashok

ಕಂದಾಯ ಸಚಿವ ಆರ್. ಅಶೋಕ್

Posted By : Manjula VN
Source : UNI

ಬೆಂಗಳೂರು: ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ. ಆರ್.ಎಸ್.ಎಸ್.ಗೂ ಬಿಜೆಪಿಯೂ ಯಾವುದೇ ಸಂಬಂಧವಿಲ್ಲ. ತಾವು ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಂಘ ಪರಿವಾರದಿಂದಲೇ ಬಂದವರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಶೋಕ್, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ನಿಜಕ್ಕೂ ಗೊಂದಲವಿರುವುದು ಕಾಂಗ್ರೆಸ್ ನಲ್ಲಿಯೇ. ಇದನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯೇ ಹೇಳಿದ್ದಾರೆ. ಕಾಂಗ್ರೆಸ್ ತಟ್ಟೆಯಲ್ಲಿ ನೊಣ, ಹೆಗ್ಗಣ ಬಿದ್ದಿದ್ದರೂ ಅದನ್ನು ನೋಡದೇ ಬಿಜೆಪಿ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಲವ್ ಜಿಹಾದ್ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದು, ಇದರ ವಿರುದ್ಧ ಕಾನೂನು ಮಾಡಿಯೇ ಮಾಡುತ್ತೇವೆ. ಹೆಣ್ಣುಮಕ್ಕಳ ಮತಾಂತರ ತಡೆಯುತ್ತೇವೆ. ಲವ್ ಜಿಹಾದ್ ಭಾರತ ದೇಶದ ಸಂಸ್ಕೃತಿಗೆ ಮಾರಕ. ನೂರಕ್ಕೆ ನೂರು ಲವ್ ಜಿಹಾದ್ ನಿಷೇಧಿಸಿಯೇ ತೀರುತ್ತೇವೆ. ಅದರಂತೆ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸುವುದಾಗಿ ಅಶೋಕ್ ಹೇಳಿದರು.

Stay up to date on all the latest ರಾಜಕೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp