ನವೆಂಬರ್ 27 ರಿಂದ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಗ್ರಾಮ ಸ್ವರಾಜ್ ಯಾತ್ರೆ

ಮುಂಬರುವ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್‌ ಯಾತ್ರೆ ಸಂಘಟಿಸಲು ನಿರ್ಧರಿಸಲಾಗಿದೆ
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಮುಂಬರುವ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್‌ ಯಾತ್ರೆ ಸಂಘಟಿಸಲು ನಿರ್ಧರಿಸಲಾಗಿದೆ.

ನವೆಂಬರ್ 27ರಿಂದ ಡಿ.3ರವರೆಗೆ ಈ ಯಾತ್ರೆ ಸಂಘಟಿಸಲಾಗಿದೆ. ಮೂರರಿಂದ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಜತೆಯಾಗಿ ಸೇರಿಸಿ ಪ್ರತಿ ಜಿಲ್ಲೆಯ ಎರಡು ಕಡೆಗಳಲ್ಲಿ ಈ ಯಾತ್ರೆ ನಡೆಯಲಿದೆ. 

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕುಟುಂಬ ಮಿಲನ ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯದ ಎಲ್ಲೆಡೆ ಶೇ.60ರಷ್ಟು ಪೂರ್ಣಗೊಂಡಿದೆ. ಪಂಚರತ್ನ ಸದಸ್ಯರ ನೇಮಕ ಪ್ರಕ್ರಿಯೆಯೂ ಶೇ.70ರಷ್ಟು ಪೂರ್ಣಗೊಂಡಿದೆ. ಈ ತಿಂಗಳಾಂತ್ಯಕ್ಕೆ ಶೇ.10ರಷ್ಟು ಗುರಿ ಸಾಧಿಸಲು ನಿರ್ಧರಿಸಿದೆ.

ಆರು ತಂಡಗಳನ್ನು ರಚಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲಕ್ಷ್ಮಣ ಸವದಿ, ಗೋವಿಂದ್ ಕಾರಜೋಳ, ಮತ್ತು ಕೆಎಸ್ ಈಶ್ವರಪ್ಪ,  ಆರ್ .ಅಶೋಕ, ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ತಂಡ ರಚಿಸಿ 30 ಜಿಲ್ಲೆಗಳಲ್ಲಿ ಪ್ರವಾಸ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಘೋಷಿಸಿದ ಮತ್ತು ಜಾರಿಗೆ ತಂದ ವಿವಿಧ ಯೋಜನೆಗಳು ಮತ್ತು ಯೋಜನೆಗಳನ್ನು ತಂಡಗಳು ಜನರಿಗೆ ವಿವರಿಸಲಿವೆ ಎಂದು ಬಿಜೆಪಿ ವಕ್ತಾರ ರವಿಕುಮಾರ್ ತಿಳಿಸಿದ್ದಾರೆ.

ಮನ್ರೇಗಾ ಯೋಜನೆಯಿಂದ ಜನರಿಗೆ ಎಷ್ಟಪ ಲಾಭವಾಗುತ್ತಿದೆ ಎಂಬ ಬಗ್ಗೆಯೂ ಜನರಿಗೆ ವಿವರಿಸಲಾಗಗುವುದು, ಇದರ ಜೊತೆಗೆ ಕೊರೋನಾ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಸಬ್ಸಿಡಿ ಗ್ಯಾಸ್ ಸಂಪರ್ಕ, ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗಳನ್ನು ಹೈಲೈಟ್ ಮಾಡಲಾಗುವುದು.

ಇನ್ನೊಂದೆಡೆ ಕಾಂಗ್ರೆಸ್ ಗ್ರಾಮೀಣ ಮತದಾರರನ್ನು ತಲುಪಲು ಯತ್ನಿಸುತ್ತಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಮುಂದಾಗಿದೆ, ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರಿಗೆ ಈ ಹೊಣೆ ನೀಡಲಾಗಿದೆ. ಪಂಚಾಯತ್ ಚುನಾವಣೆಗೆ ಜೆಡಿಎಸ್ ಇನ್ನೂ ಕಾರ್ಯಾರಂಭ ಮಾಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com