ಡೈನಾಮಿಕ್ ಲೀಡರ್ ಡಿಕೆ ಶಿವಕುಮಾರ್ ಬಂದ್ರೂ ಸುಧಾರಿಸಲಿಲ್ಲ ಕಾಂಗ್ರೆಸ್ ಸ್ಥಿತಿ! ಕೈ ಕಾರ್ಯಕರ್ತರ ಆಸೆಗೆ ತಣ್ಣೀರು?

ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನೇಮಕವಾಗಿ 8 ತಿಂಗಳು ಕಳೆದಿದೆ. ಡಿಕೆಶಿ ನೇಮಕದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು.
ಬಸವಕಲ್ಯಾಣದಲ್ಲಿ  ಶಿವಕುಮಾರ್ ಪ್ರವಾಸ
ಬಸವಕಲ್ಯಾಣದಲ್ಲಿ ಶಿವಕುಮಾರ್ ಪ್ರವಾಸ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನೇಮಕವಾಗಿ 8 ತಿಂಗಳು ಕಳೆದಿದೆ. ಡಿಕೆಶಿ ನೇಮಕದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಆದರೆ ಯಾವುದೇ ಬದಲಾವಣೆಯಾಗದಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಸೆಗೆ ತಣ್ಣೀರೆರಚಿದಂತಾಗಿದೆ.

ಕಾಂಗ್ರೆಸ್ ಸೋಲಿನ ಸರಮಾಲೆ ಇನ್ನೂ ನಿಂತಿಲ್ಲ, 2010 ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಮಾಣವಾಯಿತು.  ಆ ವೇಳೆ ಡಾ.ಜಿ ಪರಮೇಶ್ವರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರು, ಇದೇ ವೇಳೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. 

ತಮ್ಮ ಪಕ್ಷದ ಪದಾಧಿಕಾರಿಗಳ ಪಟ್ಟಿಯೊಂದಿದೆ ಪರಮೇಶ್ವರ್ ಸೋನಿಯಾ ಗಾಂಧಿ ಬಳಿ ತೆರಳಿ ಅನುಮೋದನೆ ಪಡೆದಿದ್ದರು. ಪರಮೇಶ್ವರ್ ಅವರು 2012 ರಲ್ಲಿ ಮಾಡಿದ ಕೆಲವು ಸೇರ್ಪಡೆಗಳನ್ನು ಹೊರತು ಪಡಿಸಿದರೇ ಇಂದಿಗೂ ಕಾಂಗ್ರೆಸ್ನಲ್ಲಿ ಅದೇ ತಂಡ ಮುಂದುವರಿದಿದೆ.

2013 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ಕಾಂಗ್ರೆಸ್ ಪಕ್ಷದ ರಚನೆಯು ತುಂಬಾ ಸಂಕೀರ್ಣವಾಗಿಲ್ಲ: ಪ್ರತಿ ಜಿಲ್ಲೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ, ಪ್ರತಿ ಕ್ಷೇತ್ರಕ್ಕೆ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು ಎರಡು ಮೂರು ಜಿಲ್ಲೆಗಳ ಉಸ್ತುವಾರಿ ವಹಿಸಿರುತ್ತಾರೆ. ಇನ್ನೂ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆಯೂ ಯಾವುದೇ ಬದಲಾವಣೆಯಾಗಲಿಲ್ಲ,

ಸಮಿತಿಯ ಸದಸ್ಯರು ನೇಮಕಗೊಂಡಾಗ ಅವರ ಐವತ್ತು ವರ್ಷದವರಾಗಿದ್ದರು ಈಗ ಅವರ ಅರವತ್ತು ವರ್ಷದವರಾಗಿದ್ದಾರೆ ಎಂದು ಪಕ್ಷದಲ್ಲಿ ತಮಾಷೆ ಮಾತು ಕೇಳಿ ಬರುತ್ತಿದೆ.

ಡಿಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಹೊಸ ರಕ್ತ ಹಲವು ಬದಲಾವಣೆ ತರಲಿದೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತ್ತು.

ಕೆಪಿಸಿಸಿ ತಂಡವನ್ನು ಪುನಾರಚಿಸಿ ಹೊಸ ಸದಸ್ಯರನ್ನು ಸೇರ್ಪಡಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಸುರ್ಜೇವಾಲಾಮತ್ತು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಇನ್ನೂ ಅನುಮತಿ ನೀಡಿಲ್ಲ,

ಬಸವಕಲ್ಯಾಣ ಮತ್ತು ಮಸ್ಕಿ ಉಪ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ತಂಡವನ್ನು  ಪುನಾರಚಿಸುವಂತೆ ಒತ್ತಡಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರಗಳಾಗಿದ್ದವು, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಎರಡು ಕ್ಷೇತ್ರಗಳನ್ನು ವಾಪಾಸ್ ಪಡೆಯಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೇಲೆ ಒತ್ತಡವಿದ್ದು, ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಮಸ್ಕಿಯಿಂದ ಬಸನಗೌಡ ತುರುವಿಹಾಳ್ ಮತ್ತು ಬಸವಕಲ್ಯಾಣದಿಂದ ನಾರಾಯಣರಾವ್ ಅವರ ಕುಟುಂಬದಸ್ಥರನ್ನು ಕಣಕ್ಕಿಳಿಸಲು ಶಿವಕುಮಾರ್ ನಿರ್ಧರಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com