ಒಕ್ಕಲಿಗ ಪ್ರಾಧಿಕಾರ ರಚನೆ ಏಕಿಲ್ಲ: ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು ನಗರ ಅಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿ ಕೂಲಿ ಕಾರ್ಮಿಕರಾಗಿರುವ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರವನ್ನೇಕೆ ರಚನೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿ ಕೂಲಿ ಕಾರ್ಮಿಕರಾಗಿರುವ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರವನ್ನೇಕೆ ರಚನೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್ ಕಚೇರಿ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ನಿಗಮ ರಚನೆಗೆ ತಮ್ಮ ವಿರೋಧ ಇಲ್ಲ.ಆದರೂ ಸರ್ಕಾರಕ್ಕೆ ಕೇಳುತ್ತೇನೆ,ರಾಜ್ಯದ ಅಭಿವೃದ್ಧಿಗೆ ಹೆಚ್ಚು ತೆರಿಗೆ ಪಾವತಿ ಆಗುತ್ತಿರುವುದು ಬೆಂಗಳೂರಿನ ಒಕ್ಕಲಿಗ ಸಮಾಜದಿಂದ.ಒಕ್ಕಲಿಗ ಸಮುದಾಯವದವರು ತಮ್ಮ ಕೃಷಿ ಭೂಮಿಯನ್ನು ಅಭಿವೃದ್ದಿಗೆ ಹಾಗೂ ಕೈಗಾರಿಕೆಗಳಿಗೆ ಬಿಟ್ಟುಕೊಟ್ಟು ಕಾರ್ಮಿಕರಾಗಿದ್ದಾರೆ. ಬೆಂಗಳೂರು‌ ನಗರಕ್ಕೆ ಒಕ್ಕಲಿಗ ಸಮುದಾಯ ಭೂಮಿ ಕೊಟ್ಡು ತ್ಯಾಗ ಮಾಡಿದ್ದಾರೆ.ಹಾಗೆ ನೋಡಿದರೆ ಮೊದ್ಲು ಒಕ್ಕಲಿಗ ‌ಪ್ರಾಧಿಕಾರ ರಚನೆ ಮಾಡಬೇಕಿತ್ತು .ಆದರೂ ನಿಗಮ ಅಥವಾ ಪ್ರಾಧಿಕಾರಗಳಿಂದ ಪ್ರಯೋಜನ ಇಲ್ಲ. ನಿಗಮ, ಪ್ರಾಧಿಕಾರ ರಚನೆ ವಿಚಾರದಲ್ಲಿ ಸರ್ಕಾರದಿಂದ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಭಾಷೆ ಭಾಷೆಗಳ ನಡುವೆ ಸಂಘರ್ಷ ಶುರುವಾಗಿದೆ.ಸರ್ಕಾರ ಕನ್ನಡಪರ ಸಂಘಟನೆಗಳನ್ನು ದಬ್ಬಾಳಿಕೆಯಿಂದ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ.ಕನ್ನಡಪರ ಸಂಘಟನೆಗಳ ಜೊತೆ ಸಭೆ ನಡೆಸಿ ಪ್ರಾಧಿಕಾರದ ರಚನೆಯ ಉದ್ದೇಶವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು.

ಸರ್ಕಾರ ಮತಕ್ಕೋಸ್ಕರ ಪ್ರಾಧಿಕಾರ ಮಾಡುತ್ತಿದೆ.ಪ್ರಾಧಿಕಾರ ರಚನೆಗಳನ್ನು ಮಾಡುವುದು ಕೇವಲ ತಾತ್ಕಾಲಿಕ ಅಷ್ಟೇ.ಸಣ್ಣ ಮಟ್ಟದ ರಾಜಕಾರಣ ಹಾಗೆ ನೋಡಿದರೆ ಮೊದಲು ಒಕ್ಕಲಿಗ ಸಮುದಾಯಕ್ಕೆ ಪ್ರಾಧಿಕಾರ ಮಾಡ ಬೇಕಿತ್ತು.ಒಕ್ಕಲಿಗ ಸಮುದಾಯದ ತ್ಯಾಗ ಸೇವೆ ದೊಡ್ಡದು.ಆದರೆ ಮತಕ್ಕಾಗಿ ಪ್ರಾಧಿಕಾರ ರಚನೆ ಸರಿಯಲ್ಲವೆಂ ದು ಅವರು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.

ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲೂ ಬ್ರಾಹ್ಮಣ,ಆರ್ಯ ವೈಶ್ಯ ನಿಗಮ ಮಾಡಿದ್ದೇವೆ. ಆದರೆ ನಿಗಮಗಳಿಂದ ಯಾರಿಗೂ ಅನುಕೂಲವಾಗಿಲ್ಲ ಹೀಗಾಗಿ ಸರ್ಕಾರ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕೆಂದು ಅವರು ಸೂಚಿಸಿದರು.
ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ ಅವರು,ಸರ್ಕಾರ ಶಾಲೆಗಳನ್ನು ತರಾತುರಿಯಲ್ಲಿ ಆರಂಭಿಸುವುದು ಬೇಡ.ಶಿಕ್ಷಣ ಸಂಸ್ಥೆಗಳ ಮಾಲೀಕರು,ಶಿಕ್ಷಕರು,ಪೋಷಕರ ಜೊತೆ ಸಮಗ್ರ ಚರ್ಚೆ,ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲಿ.ಕಾಲೇಜುಗಳನ್ನು ಆರಂಭಿಸಿದ ಎರಡೇ ದಿನಗಳಲ್ಲಿ ಕೊವಿಡ್ ಹರಡುವಿಕೆ ಹೆಚ್ಚಾಗಿದೆ‌ ಎನ್ನುವ ಬಗ್ಗೆ ಮಾಹಿತಿ ಇದೆ.

ಹೊರ ರಾಜ್ಯಗಳಲ್ಲಿ ಕರ್ಪ್ಯೂ ಜಾರಿಗೆ ಗೆ ಚಿಂತನೆಗಳು ನಡೆಯುತ್ತಿವೆ.ಕೋವಿಡ್ ಎರಡನೇ ಅಲೆ ಬರುತ್ತದೆ ಇದರಿಂದಾಗಿ ಮಕ್ಕಳನ್ನು ರಕ್ಷಿಸುವುದು ಕಷ್ಟವೆಂದು ತಜ್ಞರು ಹೇಳಿದ್ದಾರೆ.ಮಕ್ಕಳ ಜೀವವನ್ನು ಗಮನದಲ್ಲಿಟ್ಕೊಂಡು ಸರ್ಕಾರ ನಿರ್ಧರಿಸಲಿ.ಸರ್ಕಾರ ಶಾಲಾರಂಭ ವಿಚಾರದಲ್ಲಿ ತರಾತುರಿ ಮಾಡೋದು ಬೇಡ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com