ಯಡಿಯೂರಪ್ಪ
ಯಡಿಯೂರಪ್ಪ

ರಾಜ್ಯದಲ್ಲಿ 'ಕಮಲ' ಅರಳಲು ನೆರವಾದ ಬೆಳಗಾವಿ ಜಿಲ್ಲೆಗೆ ಸಂಪುಟದಲ್ಲಿ ಸಿಂಹಪಾಲು!

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬೆಳಗಾವಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರಿನ ನಂತರ ಸಿಂಹಪಾಲು ಪಡೆದಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬೆಳಗಾವಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರಿನ ನಂತರ ಸಿಂಹಪಾಲು ಪಡೆದಿದೆ.

ಬಿಜೆಪಿ ಸರ್ಕಾರ ರಚಿಸಲು ಕಾರಣವಾದ ಬೆಳಗಾವಿ ಶಾಸಕರಿಗೆ ಸಿಎಂ ಯಡಿಯೂರಪ್ಪ ಅಪಾರ ಕೊಡುಗೆ ನೀಡಿದ್ದಾರೆ. ಈ ಭಾಗದ ಜಿಲ್ಲೆಯ ಶಾಸಕರಿಗೆ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ 12 ಶಾಸಕರು ಬಿಜೆಪಿಯಿಂದ ಆರಿಸಿಬಂದಿದ್ದಾರೆ. ಈ ಶಾಸಕರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿ ಈಗ ಬೆಳಗಾವಿಯನ್ನು ರಾಜಕೀಯ ಲಾಭಕ್ಕಾಗಿ ಸಂಭಾವ್ಯ ಪ್ರದೇಶವೆಂದು ಪರಿಗಣಿಸುತ್ತದೆ.

ಆಪರೇಷನ್ ಕಮಲದ ಮೂಲಕ ರಮೇಶ್ ಜಾರಕಿಹೊಳಿ ಬಿಜೆಪಿ ಬಂದು ಸರ್ಕಾರ ರಚಿಸಲು ಪ್ರಮುಖ ಕಾರಣರಾಗಿದ್ದಾರೆ. ಜಾರಕಿಹೊಳಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಕಾಗ್ವಾಡ ಶಾಸಕ ಶ್ರೀಮಂತ ಪಾಟೀಲ್,ಲಕ್ಷ್ಮಣ ಸವದಿಗೆ ಡಿಸಿಎಂ ಜೊತೆ ಸಾರಿಗೆ ಖಾತೆ ನೀಡಲಾಗಿದೆ.

ಅರಭಾವಿ ಕ್ಷೇತ್ರದ ಮತ್ತೊಬ್ಬ ಪ್ರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಬೆಳಗಾವಿಯ ಪಕ್ಷದ ನಿಷ್ಠಾವಂತರಿಗೆ ಸಿಎಂ ಪ್ರಮುಖ ಹುದ್ದೆ ನೀಡಿದ್ದಾರೆ. 

ಪ್ರಮುಖ ನಾಯಕ ಮುಕ್ತಾರ್ ಪಥಾನ್ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ, ಕುಡಚಿ ಶಾಸಕ ಪಿ ರಾಡು ಅವರನ್ನು ತಾಂಡಾ ಅಭಿವೃದ್ಧಿ ನಿಗಮಕ್ಕೆ ನೇಮಿಸಲಾಗಿದೆ. ಮತ್ತೊಬ್ಬ ಶಾಸಕ ಅಭಯ್ ಪಾಟೀಲ್ ಅವರಿಗೆ ಶಾಸಕಾಂಗ ಅಂದಾಜು ಸಮಿತಿ, ಸಿಎಂ ಅವರ ಆಪ್ತ  ಶಂಕರ್‌ಗೌಡ ಪಾಟೀಲ್ ಅವರು ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿಯಾಗಿದ್ದು, ಘೂಲಪ್ಪ ಹೊಸಮಾನಿಯನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಮತ್ತೊಂದು ಹೊಸ ಬೆಳವಣಿಗೆಯಲ್ಲಿ ರಾಯಭಾಗ ಶಾಸಕ ದುರ್ಯೋಧನ ಐಹೋಳೆ ಅವರನ್ನು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಅವರನ್ನು ಕರ್ನಾಟಕ ಸಹಕಾರಿ ತೈಲ ಬೀಜ ಮತ್ತು ಬೆಳೆಗಾರರ ಒಕ್ಕೂಟಕ್ಕೆ ಸಿಎಂ ನೇಮಕ ಮಾಡಿದ್ದಾರೆ.

ಶಾಸಕಸಭೆಯಲ್ಲಿ ಆಡಳಿತ ಸಮೂಹದ ಮುಖ್ಯ ಸಚೇತಕರಾಗಿ ಎಂಎಲ್ ಸಿ ಮಹಂತೇಶ್ ಕವಟಗಿಮಠ ಸೌಂದತ್ತಿ ಶಾಸಕ ಆನಂದ್ ಮಾಮಾನಿ ಅವರು ವಿಧಾನಸಭೆಯ ಉಪ ಸ್ಪೀಕರ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಪ್ರಮುಖ ಕಾರ್ಯಕರ್ತ ಅಣ್ಣಾ ಸಾಹೇಬ್ ದೇಸಾಯಿ ಅವರನ್ನು ಬೆಸ್ಕಾಮ್ ಅಧ್ಯಕ್ಷರಾಗಿ ಮತ್ತು  ಪಕ್ಷದ ನಿಷ್ಠಾವಂತ ಕಾರ್ಯಕರ್ತ ದೀಪಾ ಕುಡಚಿ ಅವರನ್ನು ಜಲಮಂಡಳಿಯ ನಿರ್ದೇಶಕಿಯನ್ನಾಗಿ ನೇಮಿಸಲಾಗಿದೆ.
 

Related Stories

No stories found.

Advertisement

X
Kannada Prabha
www.kannadaprabha.com