ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಮುಕ್ತ ಗುರಿ: ಡಿಸಿಎಂ ಅಶ್ವತ್ಥನಾರಾಯಣ

ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಗುರಿಯನ್ನು ಬಿಜೆಪಿ ಸಾಧಿಸಿದೆ. ಮುಂದಿನ‌ ದಿನಗಳಲ್ಲಿ ಗ್ರಾಮೀಣ ಮಟ್ದಲ್ಲೂ ಕಾಂಗ್ರೆಸ್‌ ಮುಕ್ತ ಗುರಿಯನ್ನು ನಮ್ಮ ಪಕ್ಷ ಸಾಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

ಮಂಗಳೂರು: ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಗುರಿಯನ್ನು ಬಿಜೆಪಿ ಸಾಧಿಸಿದೆ. ಮುಂದಿನ‌ ದಿನಗಳಲ್ಲಿ ಗ್ರಾಮೀಣ ಮಟ್ದಲ್ಲೂ ಕಾಂಗ್ರೆಸ್‌ ಮುಕ್ತ ಗುರಿಯನ್ನು ನಮ್ಮ ಪಕ್ಷ ಸಾಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ಕಾಂಗ್ರೆಸ್‌ ಪಕ್ಷವು ಇದೀಗ ದೇಶ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ನಾಯಕತ್ವದ ಕೊರತೆ, ಜನವಿರೋಧಿ ನೀತಿಗಳು, ರಾಷ್ಟ್ರದ ಹಿತಾಸಕ್ತಿ ಬಗ್ಗೆ ರಾಜಿ.. ಇತ್ಯಾದಿ ಕಾರಣಗಳಿಂದ ಆ ಪಕ್ಷವು ಜನಮಾನಸದಿಂದ ಮರೆಯಾಗಿಬಿಟ್ಟಿದೆ. ಹೀಗಾಗಿ ದೇಶದಲ್ಲಿ ಜನರ ಏಕೈಕ ʼರಾಜಕೀಯ ಆಯ್ಕೆʼ ಎಂದರೆ ಬಿಜೆಪಿ ಮಾತ್ರ ಎಂದರು.

ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ. ಇದೀಗ ಪಂಚಾಯಿತಿ ಮಟ್ಟದಲ್ಲೂ ಆ ಪಕ್ಷವನ್ನು ಮೂಲೋತ್ಪಾಟನೆ ಮಾಡುವುದು ನಿಶ್ಚಿತ. ಆ ನಿಟ್ಟಿನಲ್ಲಿ ಪಕ್ಷವು ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಲೋಕಮಾನ್ಯ ತಿಲಕರು ಹೇಳಿದ ಸ್ವರಾಜ್ಯ ಹಾಗೂ ಮಹಾತ್ಮ ಗಾಂಧಿ ಅವರು ನೀಡಿದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರ ಮಾಡಲು ಎಪ್ಪತ್ತು ವರ್ಷಗಳ ನಂತರ ಬಿಜೆಪಿ ಬರಬೇಕಾಯಿತು ಎಂದು ಡಿಸಿಎಂ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ: ಇಡೀ ದೇಶಕ್ಕೆ ಹೊಸದಿಕ್ಕು ನೀಡಿಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ರೂಪಿಸಿದೆ. ಅದನ್ನು ಜಾರಿ ಮಾಡುತ್ತಿರುವ ರಾಜ್ಯವೆಂದರೆ ಕರ್ನಾಟಕ. ಬಹವಿಷಯಾಧಾರಿತ, ಬಹವಿಷಯ ಆಯ್ಕೆಯುಳ್ಳ, ವೈಜ್ಞಾನಿಕವಾದ ಹಾಗೂ ವಿದ್ಯಾರ್ಥಿಯ ಮೂರನೇ ವಯಸ್ಸಿನಿಂದಲೇ, ಅಂದರೆ; ಫ್ರೀ ಸರ್ಸರಿಯಿಂದಲೇ ವ್ಯವಸ್ಥಿತ ಶಿಕ್ಷಣವನ್ನು ನೀಡಲಾಗುವುದು. ಈ ನೀತಿಯ ಜಾರಿಯೊಂದಿಗೆ ಇಡೀ ಶಿಕ್ಷಣ ಪದ್ಧತಿಗೆ ಪರಿಪೂರ್ಣತೆ ಬರುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಮಗುವುಗೆ ಮೂರನೇ ವಯಸ್ಸಿನಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕೆಂಬ ಚಿಂತನೆ ಬಹಳ ದಿನಗಳ ಹಿಂದಿನಿಂದಲೂ ಇತ್ತು. ಶಿಕ್ಷಣ ತಜ್ಞರು ಸಲಹೆ ಮಾಡುತ್ತಲೇ ಇದ್ದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳುವಂಥ ಸರಕಾರ ಇರಲಿಲ್ಲ. ಆದರೆ, ಮೋದಿ ಅವರು ಬಂದ ಕೂಡಲೇ ಈ ಬಗ್ಗೆ ಗಮನ ಹರಿಸಿದರು. ಮೂರರಿಂದ ಆರನೇ ವಯಸ್ಸಿನಲ್ಲೇ ಶೇ80ರಷ್ಟು ಕಲಿಕೆಯ ಸಾಮರ್ಥ್ಯ ಇರುತ್ತದೆ. ಮಕ್ಕಳಿಗೆ ಮೂರಕ್ಕೂ ಹೆಚ್ಚು ಭಾಷೆ ಕಲಿಯುವ ಶಕ್ತಿಯೂ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಮಾಹಿತಿ ನೀಡಿದರು.

ಬಿಜೆಪಿ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ‌ ಮುಖಂಡರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com