ಮಂಡ್ಯ ಡಿಸಿಸಿ ಬ್ಯಾಂಕ್ ನಂತರ ಮೈಸೂರು ಪಾಲಿಕೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ?

ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಡಿದಂತೆಯೇ ಮೈಸೂರು ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ, ಜೆಡಿಎಸ್ ಒಂದಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿರುವ ಮಧ್ಯೆಯೇ ನಗರ ಪಾಲಿಕೆಯನ್ನಾಳುತ್ತಿರುವ ವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ. ೨೦೨೧ ಜನವರಿಯಲ್ಲಿ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದೆ. 
ಸಾ ರಾ ಮಹೇಶ್
ಸಾ ರಾ ಮಹೇಶ್

ಮೈಸೂರು: ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಡಿದಂತೆಯೇ ಮೈಸೂರು ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ, ಜೆಡಿಎಸ್ ಒಂದಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿರುವ ಮಧ್ಯೆಯೇ ನಗರ ಪಾಲಿಕೆಯನ್ನಾಳುತ್ತಿರುವ ವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ. 2021ಜನವರಿಯಲ್ಲಿ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದೆ. 

ಇತ್ತೀಚೆಗೆ ನಡೆದ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಅತಿ ಹೆಚ್ಚುಸ್ಥಾನ ಹೊಂದಿದ್ದರೂ ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿಕೇಸರಿ ಪಕ್ಷಕ್ಕೆ ಅಧಿಕಾರ ದಕ್ಕುವಂತೆ ಮಾಡಿದೆ. ಜೆಡಿಎಸ್ ತನ್ನ ಹಳೆ ಮಿತ್ರನನ್ನು ದೂರ ಮಾಡಿದೆ. ಮೈಸೂರು ಪಾಲಿಕೆಯಲ್ಲಿ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ ಒಂದಾದ ನಂತರ ಮತ್ತೊಂದು ಪಕ್ಷಕ್ಕೆ ಮೇಯರ್ ಹುದ್ದೆಗೇರುವ ಒಪ್ಪಂದವಾಗಿದೆ. ಅದರಂತೆ ಈಗ ಜೆಡಿಎಸ್ ಕಾರ್ಪೊರೇಟರ್ ತಸ್ನೀಮ್ ಮೈಸೂರಿನ ಮಹಾಪೌರರಾಗಿದ್ದಾರೆ.

ಶನಿವಾರ ಇಲ್ಲಿ ನಡೆದ ಮಾತುಕತೆಯಲ್ಲಿ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಪಾಲುದಾರರಾದವರ ನಡುವೆ ಎಲ್ಲವೂ ಸರಿಯಾಗಿಲ್ಲ ಮತ್ತು ಮೇಯರ್ ತನ್ನ ಮನಃಶಾಂತಿಯನ್ನು ಕಳೆದುಕೊಂಡಿದ್ದಾರೆ ಎಂದರು ಹೇಳಿದರು. ಈ ಪ್ರದೇಶದಲ್ಲಿ ನಮ್ಮ ದೀರ್ಘಕಾಲದ ಮೈತ್ರಿಯ ಹೊರತಾಗಿಯೂ, ಕಾಂಗ್ರೆಸ್ ನಮಗೆ ತೊಂದರೆ ಉಂಟುಮಾಡುತ್ತಿದೆ. ಅವರು ಪಾಲಿಕೆಯನ್ನು ಸುಸೂತ್ಯವಾಗಿ ಆಡಳಿತ ನಿರ್ವಹಿಸಲು ಅವಕಾಶ ಕೊಡುತ್ತಿಲ್ಲ. ಎಂದು ಮೇಯರ್ ನನಗೆ ದೂರಿತ್ತಿದ್ದಾರೆ" ಮುಂದೆಯೂ ಮೈತ್ರಿ ಮುಂದುವರಿಯಲಿದೆಯೆ ಎಂದು ಪ್ರಶ್ನಿಸಿದಾಗ ಕಾದು ನೋಡಬೇಕು ಎಂದು ಉತ್ತರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com