ಲಾಬಿಗಿಳಿಯಲ್ಲ, ಅವಕಾಶ ಒದಗಿದರೆ ಖುಷಿ-ಇದು ಕರಾವಳಿ ಬಿಜೆಪಿ ಸಚಿವಾಕಾಂಕ್ಷಿಗಳ ಮನದಾಳ

ಕಳೆದ ಹಲವು ದಿನಗಳಿಂದ ರಾಜ್ಯದ ಇತರ ಭಾಗಗಳ ಶಾಸಕರು ಮಂತ್ರಿಗಿರಿಗಾಗಿ ಲಾಬಿ ಮಾಡುವಲ್ಲಿ ನಿರತರಾಗಿದ್ದರೆ, ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು ಮಾತ್ರ ಅಂತಹಾ ಯಾವ ಅವಸರದಲ್ಲಿಯೂ ಇದ್ದಂತೆ ಕಾಣುತ್ತಿಲ್ಲ. ಈ ಎರಡೂ ಜಿಲ್ಲೆಗಳ ಏಳು ಶಾಸಕರಲ್ಲಿ ಯಾರೊಬ್ಬರೂ ಸಚಿವ ಸ್ಥಾನಕ್ಕಾಗಿ ತಮ್ಮ ಬೇಡಿಕೆಯನ್ನಿಟ್ಟಿಲ್ಲ. ಇದರಿಂದಾಗಿ ಈ ಭಾಗದ
ಶಾಸಕ ಸುನೀಲ್ ಕುಮಾರ್ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ
ಶಾಸಕ ಸುನೀಲ್ ಕುಮಾರ್ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ

ಮಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದ ಇತರ ಭಾಗಗಳ ಶಾಸಕರು ಮಂತ್ರಿಗಿರಿಗಾಗಿ ಲಾಬಿ ಮಾಡುವಲ್ಲಿ ನಿರತರಾಗಿದ್ದರೆ, ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು ಮಾತ್ರ ಅಂತಹಾ ಯಾವ ಅವಸರದಲ್ಲಿಯೂ ಇದ್ದಂತೆ ಕಾಣುತ್ತಿಲ್ಲ. ಈ ಎರಡೂ ಜಿಲ್ಲೆಗಳ ಏಳು ಶಾಸಕರಲ್ಲಿ ಯಾರೊಬ್ಬರೂ ಸಚಿವ ಸ್ಥಾನಕ್ಕಾಗಿ ತಮ್ಮ ಬೇಡಿಕೆಯನ್ನಿಟ್ಟಿಲ್ಲ. ಇದರಿಂದಾಗಿ ಈ ಭಾಗದ ಚುನಾಯಿತ ಶಾಸಕರು ತಾವು ಲಾಬಿ ಮಾಡುವ ಬದಲು ತಮಗಾಗಿ ಬರುವ ಅವಕಾಶಕ್ಕೆ ಕಾಯುತ್ತಿದ್ದಾರೆಂದು ಭಾವಿಸಬಹುದಾಗಿದೆ.

ರಾಜ್ಯದ ಇತರೆ ಭಾಗಗಳಂತೆ ಮಂತ್ರಿಗಳಾಗುವ ಮಹತ್ವಾಕಾಂಕ್ಷೆಯನ್ನು ಪೋಷಿಸುವ ನಾಯಕರಿಗೆ ಕರಾವಳಿ ಭಾಗದಲ್ಲೇನೂ ಕೊರತೆ ಇಲ್ಲ ಎಂದು ಬಿಜೆಪಿಯ ಮೂಲಗಳು ಹೇಳಿದೆ. ಆದರೆ ಪಕ್ಷದ ಹೈಕಮಾಂಡ್ ಇತ್ತೀಚೆಗೆ ರಾಜ್ಯಸಭಾ ಸ್ಥಾನಕ್ಕೆ ಆಯ್ಕೆ ಮಾಡಿದ್ದ ಹೆಸರು ಅಚ್ಚರಿದಾಯಕವಾಗಿದ್ದು ರಾಜ್ಯ ಸರ್ಕಾರ ಕಳಿಸಿದ್ದ ಎಲ್ಲ ಹೆಸರನ್ನು ಅದು ತಿರಸ್ಕರಿಸಿತ್ತು. ಇದೇ ಮಾದರಿಯನ್ನು ಸಂಪುಟ ವಿಸ್ತರಣೆಯಲ್ಲಿಯೂ ಹೈಕಮಾಂಡ್ ಅನುಸರಿಸಲಿದೆ ಎಂದು ಶಾಸಕರು ಬಾವಿಸಿದ್ದಾರೆ. ಏಕೆಂದರೆ ಹಳೆಯ ಮೈಸೂರು ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ಪಕ್ಷದ ಶಾಸಕರಂತಲ್ಲದೆ, ಕರಾವಳಿಯ ಶಾಸಕರು ಹೆಚ್ಚಾಗಿ ಗೆದ್ದಿರುವುದು ಪಕ್ಷದ ಹೆಸರಿನಿಂದ ಹೊರತು ಅವರ ವೈಯುಕ್ತಿಕ ಹೆಸರಿನಿಂದಲ್ಲ ಎಂದು ಬೆಂಗಳೂರು ಮೂಲದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.. ಕರಾವಳಿಯ ರಾಜಕಾರಣಿಗಳು ಪಕ್ಷಕ್ಕೆ ಹೆಚ್ಚು ನಿಷ್ಠರಾಗಿರುವುದು ಕೂಡ ಅವರನ್ನು ಕಡೆಗಣಿಸಲು ಕಾರಣವಾಗಿದೆ ಎಂದು ಅವರು ವಾದಿಸಿದರು.

ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪುಟದಿಂದ ಕೈಬಿಡಬಹುದುಎಂಬ ಮಾತುಗಳಿರುವುದರಿಂದ ಮೂರು ಬಾರಿ ಕಾರ್ಕಳ ಶಾಸಕರಾಗಿ ಆಯ್ಕೆಯಾದ ವಿ ಸುನೀಲ್ ಕುಮಾರ್ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಬ್ಬರೂ ಬಿಲ್ಲವ ಮುದಾಯಕ್ಕೆ ಸೇರಿದವರಾಗಿದ್ದು, ಈ ಭಾಗದಲ್ಲಿ ಬಿಲ್ಲವರು ಪ್ರಬಲವಾಗಿದ್ದಾರೆ. ಹಾಗಾಗಿ ಒಂದೊಮ್ಮೆ ಪೂಜಾರಿಯವರನ್ನು ಸಂಪುಟದಿಂಡ ಕೈಬಿಟ್ಟರೆ ಆ ಸ್ಥಾನಕ್ಕೆ ಬೇರೆ ಸಮುದಾಯದವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಮೊದಲು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಂಟ ಸಮುದಾಯದವರನ್ನು ಮಂತ್ರಿಯನ್ನಾಗಿ ಮಾಡಲು ಪಕ್ಷ ನಿರ್ಧರಿಸಿದರೆ ಅವರಿಗೆ ಅವಕಾಶ ಸಿಗಬಹುದು. ಇದಲ್ಲದೆ ಆರು ಬಾರಿ ಸುಳ್ಯ ಶಾಸಕರಾದ ಎಸ್. ಅಂಗಾರ ದಲಿತ, ಮತ್ತು ಮೀನುಗಾರ ಸಮುದಾಯದ ಶಾಸಕರಾಗಿ ಸಚಿವಾಕಾಂಶ್ಕಿ ಪಟ್ಟಿಯಲ್ಲಿದ್ದಾರೆ. ಆದರೆ ಲಾಲಾಜಿ ಮೆಂಡನ್ ಇತರ ಆಕಾಂಕ್ಷಿಗಳು. ಅಂಗಾರ ಸಚಿವ ಸ್ಥಾನಕ್ಕಾಗಿ ಆಸೆ ಪಡುವವರಲ್ಲ ಎಂದಿದ್ದಾರೆ. ಆದರೆ ಲಾಲಾಜಿ ಮೆಂಡನ್ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಸ್ಥಾನ ನೀಡಬೇಕೆಂದು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com