ದೊಡ್ಡ ದೊಡ್ಡ ಯುದ್ಧಗಳನ್ನು ಗೆದ್ದಿರುವ ಪಕ್ಷಕ್ಕೆ ಉಪಚುನಾವಣೆ ಸಣ್ಣ ಪರೀಕ್ಷೆ: ಸಿ.ಟಿ. ರವಿ

ಶಿರಾ, ರಾಜರಾಜೇಶ್ವರಿ ಉಪ ಚುನಾವಣೆಗಳ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಸಿ ಟಿ ರವಿ
ಸಿ ಟಿ ರವಿ

ಬೆಂಗಳೂರು: ಶಿರಾ, ರಾಜರಾಜೇಶ್ವರಿ ಉಪ ಚುನಾವಣೆಗಳ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಕಳೆದ ವರ್ಷ ನಾವು ದೊಡ್ಡ ಯುದ್ದ ಗೆದ್ದಿದ್ದೇವೆ, ಇದೊಂದು ಸಣ್ಣ ಪರೀಕ್ಷೆ,  ರಾಜ್ಯ ಸರ್ಕಾರಕ್ಕಿಂತ ಸಂಘಟನೆಯಲ್ಲಿ ಕೆಲಸ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

ಯಾವುದೇ ಚುನಾವಣೆಯನ್ನು ನಾವು ಹಗುರವಾಗಿ ಸ್ವೀಕರಿಸಿಲ್ಲ,ಪ್ರತಿ ಚುನಾವಣೆಯೂ ನಮಗೆ ಸವಾಲಾಗಿದೆ, ಈ ಉಪ ಚುನಾವಣೆಗೆ ಹಲವು ಆಕಾಂಕ್ಷಿಗಳಿದ್ದಾರೆ ಎಂದು ತಿಳಿಸಿದ್ದಾರೆ,

ರಾಜ್ಯ ಕೋರ್ ಕಮಿಟಿಯು ಅಭ್ಯರ್ಥಿಗಳ ಪಟ್ಟಿ ಮಾಡಿ ಸಂಸದೀಯ ಸಮಿತಿಗೆ ಕಳುಹಿಸಲಿದೆ,ಸಂಸದೀಯ ಸಮಿತಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ, ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಕಳೆದ ಉಪಚುನಾವಣೆಯಲ್ಲಿ ಪಕ್ಷ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ವರ್ಷ ನಡೆದ ಉಪ ಚುನಾವಣೆಗೆ ಹೋಲಿಸಿದರೇ ಈಗ ನಡೆಯುತ್ತಿರುವುದು ಸಣ್ಣ ಪರೀಕ್ಷೆ ಎಂದು ಹೇಳಿದ್ದಾರೆ.

ಶಿರಾ ಕ್ಷೇತ್ರದ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ, ಪಕ್ಷ ಈ ಕ್ಷೇತ್ರದಲ್ಲಿ ಯಾವತ್ತೂ ಗೆಲುವು ಸಾಧಿಸಿಲ್ಲ, ಶಿರಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಹೇಳಿದ್ದಾರೆ.

ಜವಾಬ್ದಾರಿಗಳು ಬದಲಾಗುತ್ತಿರುತ್ತವೆ, ಆದರೆ ಕಾರ್ಯಕರ್ತ ಸ್ಥಾನ ಶಾಶ್ವತವಾಗಿರುತ್ತದೆ, ನನಗೆ ಸರ್ಕಾರ ಮತ್ತು ಪಕ್ಷದಲ್ಲಿ  ಕೆಲಸ ಮಾಡಲು ಆಯ್ಕೆ ಕೊಟ್ಟರೆ ನಾನು ಪಕ್ಷವನ್ನು ಆರಿಸಿಕೊಳ್ಳುತ್ತೇನೆ ಎಂದು ರವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com