ಬಿಜೆಪಿಗೆ ಅಧಿಕಾರ, ಹಣದ ಮದ ನೆತ್ತಿಗೇರಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಬಿಜೆಪಿಯವರಿಗೆ ಅಧಿಕಾರ ಮತ್ತು ಹಣದ ಅಹಂ ನೆತ್ತಿಗೇರಿದೆ. ಅಭಿವೃದ್ಧಿಯನ್ನೆ ಮರೆತು ಬಿಟ್ಟಿದ್ದಾರೆ. ಕೇವಲ ದೂಷಣೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Published: 02nd October 2020 03:44 PM  |   Last Updated: 02nd October 2020 03:44 PM   |  A+A-


mallikarjun kharge

ಮಲ್ಲಿಕಾರ್ಜುನ ಖರ್ಗೆ

Posted By : Lingaraj Badiger
Source : UNI

ಬೆಗಳೂರು: ಬಿಜೆಪಿಯವರಿಗೆ ಅಧಿಕಾರ ಮತ್ತು ಹಣದ ಅಹಂ ನೆತ್ತಿಗೇರಿದೆ. ಅಭಿವೃದ್ಧಿಯನ್ನೆ ಮರೆತು ಬಿಟ್ಟಿದ್ದಾರೆ. ಕೇವಲ ದೂಷಣೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದಿ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಅಧಿಕಾರ ಇಂದು ದುಷ್ಟರ ಕೈಯಲ್ಲಿದೆ. ಜೈಜವಾನ್, ಜೈಕಿಸಾನ್ ಮರೆಯಾಗಿ ಮಾರೋ ಕಿಸಾನ್, ಮಾರೋ ಜವಾನ್ ಪ್ರಾರಂಭವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದರ ವಿರುದ್ಧ ರೈತರು ರೊಚ್ಚಿಗೇಳುವುದು ನಿಶ್ಚಿತ. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಮೊದಲು ನೋಟ್ ಬ್ಯಾನ್ ಮಾಡಿ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದರು. ಈಗ ಲಾಕ್‌ಡೌನ್ ಮಾಡಿ ಕಾರ್ಮಿಕರ ಜೀವನವನ್ನು ಮೂರಾ ಬಟ್ಟೆ ಮಾಡಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಳಜಾತಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅದೇ ರೀತಿ ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಎಲ್ಲರ ಮೇಲೂ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

Stay up to date on all the latest ರಾಜಕೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp