ಸರ್ಕಾರ ಹೇಳಿದಂತೆ ಸಿಬಿಐ ಕೇಳುತ್ತೆ, ಚುನಾವಣೆ ಮುಗಿಯುವರೆಗೂ ರೇಡ್: ಡಿಕೆ ಶಿವಕುಮಾರ್

ಬಿಜೆಪಿ ಸರ್ಕಾರ ಹೇಳಿದಂತೆ ಸಿಬಿಐ ಕೇಳುತ್ತಿದೆ. ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಸುತ್ತಾರೆ ಎಂದು ಸಿಬಿಐ ದಾಳಿಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ)
ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ)

ನವದೆಹಲಿ: ಬಿಜೆಪಿ ಸರ್ಕಾರ ಹೇಳಿದಂತೆ ಸಿಬಿಐ ಕೇಳುತ್ತಿದೆ. ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಸುತ್ತಾರೆ ಎಂದು ಸಿಬಿಐ ದಾಳಿಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದ ನಿವಾಸದ ಮೇಲೆ ಸಿಬಿಐ ದಾಳಿ ಅಂತ್ಯಗೊಂಡ ಬಳಿಕ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾನು ಯಾವ ತಪ್ಪು ಮಾಡಿಲ್ಲ. ನಿಮಗೆ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ, ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

2017ರಲ್ಲಿ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆದಿತ್ತು. 2018ರಲ್ಲಿ ಇಡಿ ಕೇಸ್ ಹಾಕಿ ಬಂಧನ ಮಾಡಿದರು. ಈಗ ಸಿಬಿಐ ತನಿಖೆಗೆ ಅಡ್ವೋಕೇಟ್ ಜನರಲ್ ಬೇಡ ಎಂದರೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡಿದಿದೆ. ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಯುತ್ತೆ ಎಂದರು.

50 ಲಕ್ಷ ಸಿಕ್ಕಿದೆ ಎಂದು ವರದಿ ಬರುತ್ತಿದೆ. ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ. ದಾಳಿ ನಡೆಸಿದ ಅಧಿಕಾರಿಗಳು ಎಲ್ಲಾ ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ಪ್ಯಾಂಟ್, ಪಂಚೆ, ಸೀರೆ ಲೆಕ್ಕ ಹಾಕಿದ್ದಾರೆ. ನಾನು ತಪ್ಪು ಮಾಡಿಲ್ಲ, ರಾಜಕಾರಣದ ಕುತಂತ್ರಕ್ಕೆ ಬಗ್ಗಲ್ಲ, ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಡಿಕೆಶಿ ಗುಡುಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com